ಲೇಖಕ: Siddaiah C
-
ವಿಮಾ ವಲಯದಲ್ಲಿ ಎಫ್‌ಡಿಐ ಮಿತಿಯನ್ನು ಶೇ. 100ಕ್ಕೆ ಹೆಚ್ಚಿಸಲು ಪ್ರಸ್ತಾಪ
ವಿಮಾ ಕಾಯ್ದೆ ತಿದ್ದುಪಡಿಗಳು ಯಾರಿಗಾಗಿ? ವಿಮಾ ವಲಯದಲ್ಲಿ ಶೇ. 26ರಷ್ಟು ಎಫ್ ಡಿಐಗೆ ವಾಜಪೇಯಿ ಸರ್ಕಾರ ಅನುವು ಮಾಡಿಕೊಟ್ಟಿತು. ಮೋದಿ ಸರ್ಕಾರ 2015ರಲ್ಲಿ ಇದನ್ನು ಶೇ. 49ಕ್ಕೆ, ನಂತರ 2021ರಲ್ಲಿ ಶೇ. 74ಕ್ಕೆ ಏರಿಸಿದರು. ಈಗ ಇದನ್ನು ಶೇ. 100ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರ ಮುಂದಾಗಿದೆ. “2047ರ ವರೆಗೆ ಎಲ್ಲರಿಗೂ ವಿಮೆ” ಎಂಬ ಕಾರಣವನ್ನು ಸರ್ಕಾರ ನೀಡುತ್ತಿದೆ. ಈ ಸಂಬಂಧ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲು ಹಣಕಾಸು ಸೇವೆಗಳ ಇಲಾಖೆ ಮುಂದಾಗಿದೆ. ಈ ಮೂಲಕ ವಿಮಾ ಕ್ಷೇತ್ರವನ್ನು ಹಾನಿ…
-
ಚನ್ನಪಟ್ಟಣದಲ್ಲಿ ಜೆಡಿಎಸ್ ಸೋಲು:
ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಪಕ್ಷಗಳ ಬಲ ಕುಸಿದು ಕ್ರಮೇಣ ನಾಶವಾಗುತ್ತವೆ ಇತ್ತೀಚೆಗೆ ನಡೆದ ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯಲ್ಲಿ ಜನತಾ ದಳ (ಜ್ಯಾತ್ಯಾತೀತ) ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋತಿದ್ದಾರೆ. ಅದರ ನಾಯಕರು ಈ ಸೋಲಿಗೆ ಯಾವ್ಯಾವುದೋ ಕಾರಣಗಳನ್ನು ತೋರಿಸುತ್ತಿದ್ದಾರೆ. ಅವುಗಳಲ್ಲಿ ಮುಸ್ಲಿಮರು ಜೆಡಿಎಸ್ ಗೆ ಮತ ಹಾಕಲಿಲ್ಲ ಎಂಬುದೊಂದು ಕಾರಣ. ಇದು ಬಹುತೇಕ ನಿಜವೂ ಆಗಿರಬಹುದು. ಆದರೆ, ಒಮ್ಮೆ ಬಿಜೆಪಿ ಅಥವಾ ಸಂಘಪರಿವಾರದ ಜೊತೆಗೂಡಿದ, ಅದರ ಜೊತೆ ಚುನಾವಣಾ ಮೈತ್ರಿ ಮಾಡಿಕೊಂಡ ಯಾವ ಪಕ್ಷಗಳೂ ಮತ್ತಷ್ಟು ಬೆಳೆಯಲು…
-
ಗ್ಯಾಟ್ ಒಪ್ಪಂದದ ವಿರುದ್ಧ ಹೋರಾಟ: ರಾಜಭವನದ ಮುಂದೆ ಚೆಲ್ಲಿದ ರಕ್ತ
ಗ್ಯಾಟ್ (GATT-General Agriment on Tariffs and Trade) ಒಪ್ಪಂದ ದೇಶದ ಮೇಲೆ, ಕೃಷಿ ಮತ್ತು ರೈತರ ಮೇಲೆ, ಕಾರ್ಮಿಕರು, ವಿದ್ಯಾರ್ಥಿ, ಯುವಜನ, ಮಹಿಳೆಯರ ಮೇಲೆ, ಒಟ್ಟಾರೆ ಜನಸಾಮಾನ್ಯರ ಬದುಕಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು, ಆ ಒಪ್ಪಂದದ ವಿರುದ್ಧ 1990ರ ದಶಕದಿಂದಲೂ ಕಮ್ಯೂನಿಸ್ಟರು ದಿಟ್ಟವಾದ ಹೋರಾಟ ನಡೆಸುತ್ತಾ ಬಂದಿದ್ದಾರೆ. ‘ಜೈಲ್ ಬರೋ’ ಸೇರಿದಂತೆ ದೇಶಾದ್ಯಂತ ಲಕ್ಷಾಂತರ ಜನರು ಭಾಗಿಯಾಗಿದ್ದ ಹಲವು ಹೋರಾಟಗಳಲ್ಲಿ, 1994ರಲ್ಲಿ ಬೆಂಗಳೂರಿನಲ್ಲಿ ನಡೆದ ‘ರಾಜಭವನ ಚಲೋ’ ಕಾರ್ಯಕ್ರಮವೂ ಒಂದು. ಈ ಹೋರಾಟದಲ್ಲಿ…
-
ಅದಾನಿ ಲಂಚ ಪ್ರಕರಣವೂ- ದುಬಾರಿ ವಿದ್ಯುತ್ ದರವೂ
2029 ಕೋಟಿ ರೂ. ಲಂಚದ ವ್ಯವಹಾರ ನಡೆಸಿರುವ ಆರೋಪದ ಮೇಲೆ ಗೌತಮ್ ಅದಾನಿ ವಿರುದ್ದ ಅಮೆರಿಕ ನ್ಯಾಯಾಲವೊಂದು ಬಂಧನದ ವಾರೆಂಟ್ ಹೊರಡಿಸಿದೆ. ಅದಾನಿ ಆಪ್ತ ಮಿತ್ರ ನರೇಂದ್ರ ಮೋದಿ ಮತ್ತು ಅದಾನಿ ನೆಚ್ಚಿನ ಪಕ್ಷ ಭಾರತೀಯ ಜನತಾ ಪಕ್ಷ ಅಡಳಿತ ನಡೆಸುತ್ತಿರುವ ಈ ಸಂದರ್ಭದಲ್ಲಿ ಸಹಸ್ರ ಕೋಟಿ ರೂ. ಮೊತ್ತದ ಲಂಚದ ಅವ್ಯವಹಾರ ನಡೆಸಿದ ಅದಾನಿಗೆ ಶಿಕ್ಷೆ ಆಗುತ್ತದೆಯೋ ಇಲ್ಲವೋ ಆದರೆ, ಈ ಲಂಚದ ವ್ಯವಹಾರವು, ವಿದ್ಯುತ್ ಗೆ ದುಬಾರಿ ದರ ವಿಧಿಸುವ ಮೂಲಕ ಜನಸಾಮಾನ್ಯರನ್ನು ನಿರಂತರ…
-
ಅಡುಗೆ ಅನಿಲದ ಬೆಲೆ ಯಾಕಿಷ್ಟು ದುಬಾರಿ?
ಅಡುಗೆ ಅನಿಲದ ಬೆಲೆ ಏಕಿಷ್ಟು ದುಬಾರಿ? ಬೆಲೆ ಏರಿಕೆಗೆ ಮುಕ್ತ ಆರ್ಥಿಕ ನೀತಿ ಹೇಗೆ ಕಾರಣ? ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಸೇರಿದಂತೆ ಈ ಹಿಂದಿನ ಸರ್ಕಾರಗಳು ಗೃಹಬಳಕೆಯ ಅಡುಗೆ ಅನಿಲದ ಮೇಲಿನ ಸಬ್ಸಿಡಿ ತೆಗೆಯಲು ಏನೆಲ್ಲಾ ತಂತ್ರಗಳನ್ನು ಮಾಡಿದವು? ಭಾರತ ಸರ್ಕಾರದ ಅಂತಿಮ ಗುರಿ ಏನು? ಇವೆಲ್ಲವುಗಳ ಕುರಿತು ಒಂದು ವಿಶ್ಲೇಷಣಾ ವರದಿ ಇಲ್ಲಿದೆ. *ಡಬ್ಲ್ಯೂಟಿಒ ಒಪ್ಪಂದ ಜಾರಿಮಾಡಲು ವಿಶ್ವ ವ್ಯಾಪಾರ ಸಂಘಟನೆ (WTO)ಯ ಜೊತೆ 1991 ರಲ್ಲಿ ಭಾರತ ಸರ್ಕಾರ ಮಾಡಿಕೊಂಡ ಒಪ್ಪಂದದ ಒಂದು ಅಂಶ ಅಡುಗೆ…
-
ಬಹುರಾಷ್ಟ್ರೀಯ ಕಂಪನಿಗಳ ಹಿಡಿತದೆಡೆಗೆ ಟ್ಯಾಕ್ಸಿ ಸೇವೆ
(ನಾನು ಟ್ಯಾಕ್ಸಿ ಚಾಲಕನಾಗಿದ್ದ ನವೆಂಬರ್ 21, 2014ರಂದು ನನ್ನ ಫೇಸ್ಬುಕ್ ಬರಹ) OLA!!! Nimma Snehitharannu Ola ge refer maadi 2014 model car annu attach maadi haagu referral incentives amount Rs 10,000 hanavannu attach madidha thakshana padeyiri.Hechina mahithigagi samparkisi.Anjali, Shiv Kumar or Siddharth.Contact no. 080-69000158 OLA ಎಂಬ ಹೆಸರಿನ ಟ್ರಾವಲ್ ಏಜೆನ್ಸಿಯಿಂದ ಹೀಗೊಂದು ಮೆಸೇಜ್ ನನ್ನ ಸ್ನೇಹಿತನ ಮೊಬೈಲ್ ಗೆ ಬಂತು. ಮೆಸೇಜ್ ನೋಡಿ…
-
ಪಿಎಂ ಕೇರ್ಸ್ ನಿಧಿ: ಸಹಸ್ರಾರು ಕೋಟಿ ಹಣ ಸಾರ್ವಜನಿಕರಿಗೋ ಅಥವಾ ಸಂಘಪರಿವಾರಕ್ಕೊ?
ಕೊರೋನಾ ಅವಧಿಯಲ್ಲಿ, ಮಾರ್ಚ್ 28, 2020 ರಂದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ‘ಪಿಎಂ ಕೇರ್ಸ್ ಫಂಡ್’ ಎಂಬ ನಿಧಿಯನ್ನು ರಚಿಸಿದರು. ಮೋದಿ ಈ ಪ್ರತಿಷ್ಠಾನದ ಅಧ್ಯಕ್ಷರಾಗಿ ಮತ್ತು ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರುಗಳನ್ನು ಸದಸ್ಯರನ್ನಾಗಿ ನೇಮಿಸಿಕೊಂಡರು. ಈ ನಿಧಿಗೆ ಸಾವಿರಾರು ಕೋಟಿ ರೂ.ಗಳನ್ನು ದಾನ ಪಡೆಯಲಾಗಿದೆ. ಆದರೆ ಇಲ್ಲಿಯವರೆಗೆ ಪಿಎಂ ಕೇರ್ಸ್ ನಿಧಿಗೆ ಎಷ್ಟು ಹಣ ನೀಡಲಾಗಿದೆ, ಬಂದ ಹಣವನ್ನು…
-
ಅಸ್ತಿತ್ವದಲ್ಲಿಲ್ಲದ ದೆವ್ವಕ್ಕೆ ಹೆದರಿ ತನ್ನೆರಡೂ ಮಕ್ಕಳನ್ನು ಕಳೆದುಕೊಂಡ ತಾಯಿ
ಅಸ್ತಿತ್ವದಲ್ಲಿ ಇಲ್ಲದ ದೆವ್ವಕ್ಕೆ ಅಂಜಿ ತನ್ನೆರಡೂ ಮಕ್ಕಳನ್ನು ಕಳೆದುಕೊಂಡ ತಾಯಿಯ ಕರುಣಾಜನಕ ನೈಜ ಕತೆ ಇದು. (ಇದು 2014-15 ರಲ್ಲಿ ನಡೆದ ಘಟನೆ) ಆಕೆ ಮಂಡ್ಯ ಜಿಲ್ಲೆಗೆ ಸೇರಿದ ಹಳ್ಳಿಯವಳು. ಆಕೆಯ ಹೆಸರು ಮಹಾದೇವಿ. ಆಕೆಗೆ ಇಬ್ಬರು ಮಕ್ಕಳು. 20 ವರ್ಷದ ಮಗ, 17 ವರ್ಷದ ಮಗಳು. ತನ್ನಿಂದ ಪತಿ ದೂರವಾದ ಮೇಲೆ ಮಕ್ಕಳನ್ನು ಸಲಹುವ ಸಂಪೂರ್ಣ ಜವಾಬ್ದಾರಿ ಈಕೆಯದಾಯಿತು. ಹಳ್ಳಿಯಲ್ಲಿ ಬದುಕು ಸಾಗಿಸಲು ಸಾಧ್ಯವಾಗದಿದ್ದಾಗ, ತನ್ನೆರಡೂ ಮಕ್ಕಳ ಜೊತೆ ಬೆಂಗಳೂರಿಗೆ ಬಂದು ನೆಲಸತೊಡಗಿದಳು. ಆಕೆ ಸಿದ್ದಉಡುಪು…
-
ರಫೆಲ್ ಒಪ್ಪಂದ:
ಅಂತ್ಯ ಕಾಣದ ಭಾರತದ ಅತಿದೊಡ್ಡ ರಕ್ಷಣಾ ಹಗರಣ ಭಾರತದ ಅತಿದೊಡ್ಡ ರಕ್ಷಣಾ ಹಗರಣ ಎಂದೇ ಹೇಳಲಾದ, 2016ರಲ್ಲಿ ಪ್ರಾನ್ಸ್ ದೇಶದ ಡಸ್ಸಾಲ್ಟ್ ಏವಿಯೇಷನ್ ಕಂಪನಿಯ ಜೊತೆಗೆ ರೂ. 59,000 ಕೋಟಿ ಮೊತ್ತದ, 36 ರಫೆಲ್ ಯುದ್ಧ ವಿಮಾನ ಒಪ್ಪಂದದ ಕುರಿತು ಬರೆಯುವ ಪ್ರಯತ್ನ ಮಾಡುತ್ತೇನಾದರೂ, ಇದರ ಸಂಪೂರ್ಣ ವಿವರ ಬರೆದರೆ ಒಂದು ದೊಡ್ಡ ಪುಸ್ತಕವೇ ಆಗುತ್ತದೆ. ಈ ಹಗರಣದ ಕುರಿತಂತೆ ಈಗಾಗಲೇ, ಸ್ವತಂತ್ರ ಪತ್ರಕರ್ತರಾದ ರವಿ ನಾಯರ್ ಮತ್ತು ಪರಂಜಾಯ್ ಗುಹಾ ಠಾಕುರ್ತಾ 2022ರಲ್ಲಿ “ರಫೇಲ್ ಡೀಲ್…
-
ಕೋವಿಡ್-19: ಭಾರತದಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ 5 ಲಕ್ಷವೋ? 50 ಲಕ್ಷವೋ?
[ 2025ರ ಮೇ 7 ರಂದು ಭಾರತ ‘ಆಪರೇಷನ್ ಸಿಂಧೂರ್’ ಹೆಸರಿನಲ್ಲಿ ಪಾಕಿಸ್ತಾನದ ನೆಲದ ಮೇಲೆ ಮಿಲಿಟರಿ ದಾಳಿ ನಡೆಸಿದಾಗ, ಸರ್ಕಾರವು ಸದ್ದಿಲ್ಲದೆ ಒಂದು ದತ್ತಾಂಶವನ್ನು ಬಿಡುಗಡೆ ಮಾಡಿತು. ಅದು ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಆದ ಸಾವುಗಳ ಸಂಖ್ಯೆಯನ್ನು ಹೆಚ್ಚಿನ ಮಟ್ಟಿಗೆ ಬಹಿರಂಗಪಡಿಸುತ್ತದೆ. ಈಗ ಬಿಡುಗಡೆಯಾದ ನೋಂದಾಯಿತ ಜನನ ಮತ್ತು ಮರಣಗಳ ದತ್ತಾಂಶದ ಪ್ರಕಾರ, ಕೋವಿಡ್-ಪೂರ್ವ ಎರಡು ವರ್ಷಗಳಾದ 2018 ಮತ್ತು 2019 ಕ್ಕೆ ಹೋಲಿಸಿದರೆ 2020 ಮತ್ತು 2021 ರಲ್ಲಿ ಭಾರತವು ಕನಿಷ್ಠ 37.4…