ಲೇಖಕ: Siddaiah C
-
ಸಿಪಿಐ ಪಕ್ಷದ ವಿಭಜನೆಯ ಆಧಾರ ಮತ್ತು ಸಿಪಿಐ(ಎಂ) ನ ಆರಂಭ
ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾದಿಂದ ಹೊರಬಂದು ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದಿ) ಸ್ಥಾಪಿಸಿದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿರುತ್ತವೆ. ಪಕ್ಷ ವಿಭಜನೆಯಾಗಲು ಕಾರಣವೇನು ಎಂಬುದನ್ನು ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ಕೊಡಲಾಗಿದೆ. ಡಿಸೆಂಬರ್ 1953ರಲ್ಲಿ ತಮಿಳುನಾಡಿನ ಮಧುರೈನಲ್ಲಿ ನಡೆದ ಮೂರನೇ ಅಖಿಲ ಭಾರತ ಮಹಾಧಿವೇಶನ ಮತ್ತು ಏಪ್ರಿಲ್ 1956ರಲ್ಲಿ ಪಾಲಕ್ಕಾಡ್ ನಲ್ಲಿ ನಡೆದ ನಾಲ್ಕನೇ ಮಹಾಧಿವೇಶನದ ನಡುವೆ ರಾಜಕೀಯ ಪರಿಸ್ಥಿತಿಯಲ್ಲಿ ಮೂಲಭೂತ ಬದಲಾವಣೆಗಳು ಸಂಭವಿಸಿದವು. ಅವುಗಳ ಆಧಾರದಲ್ಲಿ, ನಾಲ್ಕನೇ ಸಮ್ಮೇಳನಕ್ಕೆ ಭಾಗವಹಿಸಿದ್ದ ಪ್ರತಿನಿಧಿಗಳ ಒಂದು ವಿಭಾಗವು,…
-
ಬೆಂಗಳೂರಿನಲ್ಲಿ 16.6 ಕಿಮೀ ಉದ್ದದ ಸುರಂಗ ಮಾರ್ಗ ಬಳಕೆಗೆ 330 ರೂಪಾಯಿ ಟೋಲ್!!
ಮೂಲಭೂತ ಸೌಕರ್ಯ ಅಭಿವೃದ್ಧಿ ಎಂದರೆ ಖಾಸಗಿ ಸಹಭಾಗಿತ್ವವೇ ಅಗಿರಬೇಕೆ? ಎಲ್ಲರೂ ಸುಂಕ, ಟೋಲ್, ಸೇವಾ ಶುಲ್ಕ ಹೆಸರಿನಲ್ಲಿ ಹಣ ಕೊಟ್ಟು ಮೂಲಸೌಕರ್ಯಗಳ ಪ್ರಯೋಜನಗಳನ್ನು ಪಡೆಯಬೇಕೇ? ಮೂಲಭೂತ ಸೌಕರ್ಯ ಎಂದರೆ ಹಣವುಳ್ಳವರಿಗೆ ಮಾಡುವ ಸೌಕರ್ಯಗಳೇ? ಶಿಕ್ಷಣ, ಆರೋಗ್ಯ ರಕ್ಷಣೆ ವ್ಯಾಪಾರದ ಸರಕುಗಳಂತಾಬೇಕೆ? ರಾಜಸ್ವ ಸಂಗ್ರಹ ಮತ್ತು ಹೂಡಿಕೆ ಹೆಚ್ಚಿಸಲು ಸಾರ್ವಜನಿಕ ಆಸ್ತಿಗಳ ನಗದೀಕರಣ ಮಾಡಬೇಕೆ? ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಜೆಟ್ ಗಳನ್ನು ಅವಲೋಕಿಸಿದರೆ ಇಂತಹ ಪ್ರಶ್ನೆಗಳು ಮೂಡುತ್ತವೆ. ಕರ್ನಾಟಕ ರಾಜ್ಯ ಬಜೆಟ್ ಪ್ರಸ್ತಾಪದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಯೋಜನೆಗಳ…
-
ಕ್ಷೇತ್ರ ಮರುವಿಂಗಡಣೆ: ದಕ್ಷಿಣದ ಕ್ಷೇತ್ರಗಳನ್ನು ಕಡಿಮೆ ಮಾಡುವುದು ಒಕ್ಕೂಟ ವ್ಯವಸ್ಥೆಯ ಮೇಲಿನ ದಾಳಿ
Image Credit: NDTV ಭಾರತದ ಒಕ್ಕೂಟವು ಜಟಿಲ ಸಮಸ್ಯೆಯನ್ನು ಎದುರಿಸುತ್ತಿದೆ. 2026ರಲ್ಲಿ ಜನಸಂಖ್ಯೆಯ ಆಧಾರದ ಮೇಲೆ ಸಂಸದೀಯ ಸ್ಥಾನಗಳ ಪುನರ್ ವಿಂಗಡಣೆ ಪ್ರಕ್ರಿಯೆಯು ‘ದಕ್ಷಿಣದವರ ತಲೆಯ ಮೇಲೆ ತೂಗುಗತ್ತಿ’ಎಂದು ತಮಿಳುನಾಡು ಮುಖ್ಯಮಂತ್ರಿ ಎಚ್ಚರಿಸಿದ್ದಾರೆ. ಉತ್ತರದ ರಾಜ್ಯಗಳಲ್ಲಿನ ಸ್ಥಾನಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತದೆ. ಆದರೆ, ದಕ್ಷಿಣ ರಾಜ್ಯಗಳಲ್ಲಿ ಸ್ಥಾನಗಳ ಸಂಖ್ಯೆ ಕಡಿಮೆಯಾಗುತ್ತದೆ ಅಥವಾ ಅದು ಹೆಚ್ಚಾದರೂ ಅವುಗಳ ಪಾಲು ಹೆಚ್ಚಾಗಬೇಕಾದಷ್ಟು ಹೆಚ್ಚಾಗುವುದಿಲ್ಲ ಎಂದು ದಕ್ಷಿಣ ಭಾರತದ ರಾಜ್ಯಗಳ ಮುಖ್ಯಮಂತ್ರಿಗಳು ಟೀಕಿಸುತ್ತಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ದಕ್ಷಿಣ ರಾಜ್ಯಗಳನ್ನು ಮೌನಗೊಳಿಸಲು…
-
ಖಾಸಗಿಯವರಿಗೆ ಸರ್ಕಾರಿ ಗೋದಾಮುಗಳ ಆಸ್ತಿ
ರೈತರಿಗೆ ಬೆಂಬಲ ಬೆಲೆ ಮತ್ತು ಪಡಿತರ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಕೊವಿಡ್-19 ರ ಸಾಂಕ್ರಾಮಿಕ ದಾಳಿಯ ಸಂದರ್ಭದಲ್ಲಿ ದೇಶದ ಜನತೆ ತೀವ್ರ ಆಹಾರದ ಬಿಕ್ಕಟ್ಟನ್ನು ಎದುರಿಸುತ್ತಿದ್ದಾಗ, ಜನರ ಹಸಿವು ನೀಗಿಸಲು ನೆರವಿಗೆ ಬಂದಿದ್ದೇ ಸರ್ಕಾರಿ ಗೋದಾಮುಗಳಲ್ಲಿ ಶೇಖರಿಸಿಟ್ಟಿದ್ದ ಲಕ್ಷಾಂತರ ಟನ್ ಆಹಾರ ಧಾನ್ಯಗಳು. ಬಡತನ ರೇಖೆಯ ಕೆಳಗಿನ ಕುಟುಂಬಗಳಿಗೆ ನಿರ್ಧಿಷ್ಟ ಪ್ರಮಾಣದ ಧಾನ್ಯಗಳನ್ನು ಉಚಿತವಾಗಿ ವಿತರಣೆ ಮಾಡಲು ಈ ಸರ್ಕಾರಿ ಗೋದಾಮುಗಳ ಶೇಖರಣಾ ವ್ಯವಸ್ಥೆ ಕಾರಣ. ಆಹಾರ ಧಾನ್ಯಗಳ ಬೆಲೆ ಏರಿಕೆಗೆ ಕಡಿವಾಣ ಹಾಕಲೂ,…
-
ಕೆನಡಾ: ಶ್ರೀಮಂತ ರಾಷ್ಟ್ರದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಜನತೆ
ವಿಫಲ ನಾಯಕನ ನಿರ್ಗಮನ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ತಮ್ಮ ಸ್ಥಾನಕ್ಕೆ ಹಠಾತ್ ರಾಜೀನಾಮೆ ಘೋಷಿಸಿದ್ದಾರೆ. ನಮ್ಮ ದೇಶದ ಬಹುತೇಕ ಮಾಧ್ಯಮಗಳು ಈ ರಾಜೀನಾಮೆಗೆ ನಿಜವಾದ ಕಾರಣಗಳನ್ನು ಮುಚ್ಚಿಟ್ಟು ಬೇರೆಯದೇ ಕಥೆ ಕಟ್ಟಿ ಪ್ರಸಾರ ಮಾಡುತ್ತಿವೆ. ಆರ್ಥಿಕ ಅನಿಶ್ಚಿತತೆ, ಕೆನಡಾದ ಡಾಲರ್ ಮೌಲ್ಯ ಕುಸಿತ, ಹಣದುಬ್ಬರ ಹೆಚ್ಚಳ, ಅಗತ್ಯ ವಸ್ತುಗಳ ಬೆಲೆ ಹೆಚ್ಚಳ, ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ ಜನತೆ, ಇವೆಲ್ಲವೂ ಸರ್ಕಾರದ ವಿರುದ್ದದ ಜನರ ಆಕ್ರೋಶಕ್ಕೆ ಕಾರಣವಾಗಿವೆ. ಶ್ರೀಮಂತ ರಾಷ್ಟ್ರ ಕೆನಡಾದಲ್ಲಿ ಆಳುವ ಲಿಬರಲ್ ಪಕ್ಷದ ವಿರುದ್ದ…
-
ಮೆಟ್ರೋ ರೈಲು ಪ್ರಯಾಣ ದರವೂ, ಮುಕ್ತ ಆರ್ಥಿಕ ನೀತಿಯೂ
“ನಮ್ಮ ಮೆಟ್ರೋ ದರ ಏರಿಕೆ ನಿರ್ಧಾರಕ್ಕೆ ಬಿಎಂಆರ್ ಸಿಎಲ್ ಬ್ರೇಕ್, ಸಂಸದ ತೇಜಸ್ವಿ ಸೂರ್ಯ ಮತ್ತಷ್ಟು ಪ್ರಕರ” ಇದು ಫೆಬ್ರವರಿ 9, 2026ರ ಪತ್ರಿಕೆಯೊಂದರ ತಲೆಬರಹ. ದರ ಏರಿಕೆಯಲ್ಲಿ ನಮ್ಮ ಪಾಲು ಏನಿಲ್ಲ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಇತ್ತೀಚಿನ ದರ ಏರಿಕೆಯನ್ನು ತಾತ್ಕಾಲಿಕವಾಗಿ (ʻತಾತ್ಕಾಲಿಕʼ ಎಂಬುದನ್ನು ಗಮನಿಸಿ) ತಡೆಯುವಲ್ಲಿ ಕೇಂದ್ರ ಸರ್ಕಾರದ ಪಾತ್ರವಿದೆ ಎಂದೂ ತೇಜಸ್ವಿ ಸೂರ್ಯ ಹೇಳಿದ್ದಾರೆ ಎಂದು ವರದಿಯಾಗಿದೆ. ಮೆಟ್ರೋ ದರ ಏರಿಕೆ ತಡೆಯಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಿದೆ ಎನ್ನುವುದಾದರೆ, ಕಳೆದ ವರ್ಷ…
-
ರಾಜಕೀಯ ಪಕ್ಷಗಳ ಚುನಾವಣಾ ಆಶ್ವಾಸನೆಗಳು: ಈಡೇರಿಕೆಗೆ ದಾರಿ ಯಾವುದಯ್ಯ?
ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಗ್ಯಾರೆಂಟಿ ಯೋಜನೆಗಳನ್ನು ಮುಂದುವರಿಸಲು ಹಣಕಾಸಿನ ಕೊರತೆ ಎದುರಿಸುತ್ತಿದೆ. ಇದು ಅನಿರೀಕ್ಷಿತವಾಗಿ ಎದುರಾದ ಸಮಸ್ಯೆಯೇನೂ ಅಲ್ಲ. ಮುಕ್ತ ಆರ್ಥಿಕ ನೀತಿಗಳನ್ನು ಒಪ್ಪಿ, ಅವುಗಳನ್ನು ಜಾರಿಗೆ ತರುತ್ತಿರುವ ಮತ್ತು ತಾವು ಜಾರಿಗೆ ತರುವ ಗ್ಯಾರೆಂಟಿ ಯೋಜನೆಗಳಿಗೆ ಅವಶ್ಯಕವಾದ ಸಂಪನ್ಮೂಲ ಕ್ರೋಡೀಕರಣಕ್ಕೆ ಮಾರ್ಗ ಕಂಡುಕೊಳ್ಳದೆ, ಕೇವಲ ಭರವಸೆಗಳನ್ನು ಈಡೇರಿಸಲು ಹೊರಟರೆ ಯಾವುದೇ ಸರ್ಕಾರಕ್ಕೂ ಇಂಥದೇ ಸಂಕಷ್ಟ ಎದುರಾಗುತ್ತದೆ. ಈ ಸಂಬಂಧ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ‘ಜನಶಕ್ತಿ ಕನ್ನಡ ವಾರಪತ್ರಿಕೆ’ಯ 2023ರ ಫೆಬ್ರವರಿಯಲ್ಲಿ (8ನೇ ಸಂಚಿಕೆ)…
-
ಚಿನ್ನಿಯಂಪಾಳ್ಯಂ: ಹುತಾತ್ಮರಾದ ನಾಲ್ವರು ಯುವ ಹೋರಾಟಗಾರರು
ಕಾರ್ಮಿಕರು ಪಡೆಯುತ್ತಿರುವ ಇಂದಿನ ಸೌಲಭ್ಯಗಳನ್ನು ಬಂಡವಾಳಗಾರರು ಸ್ವಇಚ್ಛೆಯಿಂದ ಕೊಟ್ಟಿದ್ದಲ್ಲ, ಪ್ರಭುತ್ವ ಕಾರ್ಮಿಕರ ಮೇಲಿನ ಕನಿಕರದಿಂದ ಇಂತಹ ಕಾರ್ಮಿಕರ ಪರವಾದ ಕಾನೂನುಗಳನ್ನು ರೂಪಿಸಿದ್ದಲ್ಲ, ಬದಲಾಗಿ ಹಲವರ ಹೋರಾಟ, ತ್ಯಾಗ, ಬಲಿದಾನ, ಚೆಲ್ಲಿದ ರಕ್ತದಿಂದ ಈ ಸೌಲಭ್ಯಗಳು ಕಾರ್ಮಿಕರಿಗೆ ದೊರಕಿವೆ. ಸ್ವಾತಂತ್ರ್ಯಕ್ಕೆ ಮುಂಚೆಯೇ, ಕೆಂಪು ಧ್ವಜ ಚಳವಳಿಯು ತಮಿಳುನಾಡಿನ ಕಾರ್ಖಾನೆಗಳಲ್ಲಿನ ಟ್ರೇಡ್ ಯೂನಿಯನ್ ಹಕ್ಕುಗಳಿಗಾಗಿ ಮಾತ್ರವಲ್ಲದೆ, ಲಿಂಗ ದಬ್ಬಾಳಿಕೆ ಮತ್ತು ಅಸಮಾನತೆಯ ವಿರುದ್ಧವೂ ಪ್ರಬಲ ಹೋರಾಟಗಳನ್ನು ನಡೆಸಿತು. ಇಂತಹ ಹೋರಾಟದಲ್ಲಿ ಹುತಾತ್ಮರಾದ ಚಿನ್ನಿಯಂಪಾಳ್ಯದ ಹುತಾತ್ಮರ ಬಲಿದಾನ ನಮಗೆ ಸದಾ ಸ್ಪೂರ್ತಿ…
-
‘ಒಂದು ರಾಷ್ಟ್ರ, ಒಂದು ಚುನಾವಣೆ’: ಪರ-ವಿರೋಧ ಚರ್ಚೆಗಳ ಸುತ್ತ
ಬಹಳಷ್ಟು ವಿರೋಧದ ನಡುವೆಯೂ, ದೇಶದಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದಕ್ಕಾಗಿ ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರವು ಭಾರತದ ಸಂವಿಧಾನಕ್ಕೆ ತಿದ್ದುಪಡಿ ತರುವ, ‘ಸಂವಿಧಾನ (129ನೇ ತಿದ್ದುಪಡಿ) ಮಸೂದೆ–2024’ ಅನ್ನು ಲೊಕಸಭೆಯಲ್ಲಿ ಮಂಡಿಸಿದೆ. ಈ ಮಸೂದೆಯ ಮೂಲಕ ಕೇಂದ್ರ ಸರ್ಕಾರವು ಸಂವಿಧಾನಕ್ಕೆ ತಿದ್ದುಪಡಿ ಮಾಡಲು ಮುಂದಡಿ ಇಟ್ಟಿದೆ. ‘ಒಂದು ರಾಷ್ಟ್ರ, ಒಂದು ಚುನಾವಣೆ’ ಪರ ಮತ್ತು ವಿರೋಧ ಚರ್ಚೆಗಳು ಎಲ್ಲೆಡೆ ನಡೆಯುತ್ತಿವೆ. ಈ ಚರ್ಚೆಯಲ್ಲಿನ ಕೆಲವೊಂದು ವಾದಗಳ ಸತ್ಯ ಅಸತ್ಯಗಳ ಕುರಿತು ವಿಮರ್ಶಿಸುವ ಸಣ್ಣದೊಂದು…
-
ವೈಕಂ ಸತ್ಯಾಗ್ರಹ: ಸಾರ್ವಜನಿಕ ಬೀದಿಯಲ್ಲಿ ‘ಕೆಳಜಾತಿ’ ಜನರು ನಡೆದಾಡುವ ಹಕ್ಕಿಗಾಗಿ ನಡೆದ ಹೋರಾಟ
ತಮಿಳುನಾಡು ಸರ್ಕಾರ ನೀಡುವ 2024ನೇ ಸಾಲಿನ ‘ವೈಕಂ ಪ್ರಶಸ್ತಿ’ಯನ್ನು ಹಿರಿಯ ಸಾಹಿತಿ ದೇವನೂರ ಮಹಾದೇವ ಅವರಿಗೆ ನೀಡಿದೆ. 2024ರ ಡಿಸೆಂಬರ್ 12ರಂದು ಕೇರಳದ ವೈಕಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹಾಗೂ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಏನಿದು ವೈಕಂ ಹೋರಾಟ? ಕೇರಳದ ವೈಕಂ ಎಂಬ ಸಣ್ಣ ಪಟ್ಟಣದಲ್ಲಿ ಮಹದೇವ ದೇವಸ್ಥಾನವಿದೆ. ಈ ದೇವಸ್ಥಾನದ ಬೀದಿಗಳ ಮೂಲಕ ದಲಿತರು, ಈಜವರು ಸೇರಿದಂತೆ ಹಿಂದುಳಿದ ಸಮುದಾಯಗಳ ಜನರು ನಡೆದಾಡುವುದನ್ನು ಬ್ರಾಹ್ಣಣರು ನಿಷೇಧಿಸಿದ್ದರು.…