ವರ್ಗ: ಹಗರಣ
-
ಲಲಿತ್ ಮೋದಿಯ 1,975 ಕೋಟಿ ರೂ. ವಂಚನೆ ಪ್ರಕರಣ ಏನಾಯ್ತು?
ತಾಯಿ ಕೇಂದ್ರ ಸಚಿವರಾಗಿ ಆರೋಪಿಯ ನೆರವಿಗೆ ನಿಂತರೆ, ಪತಿ ಮತ್ತು ಮಗಳು ಆರೋಪಿ ಪರ ವಕೀಲರು!! ಅವರು, ನಮ್ಮ ಸಂವಿಧಾನವನ್ನು ರಕ್ಷಣೆ ಮಾಡುವುದಾಗಿ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆಯಾಗಿದ್ದರು. ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ ಆರೋಪ ಹೊತ್ತು, ಜಾರಿ ನಿರ್ದೇಶನಾಲಯದ ತನಿಖೆಯಿಂದ ತಪ್ಪಿಸಿಕೊಳ್ಳಲು, ಲಂಡನ್‌ಗೆ ಪರಾರಿಯಾಗಿ, ಅಲ್ಲಿಯೇ ನೆಲೆಸಿರುವ ಆರೋಪಿಯೊಬ್ಬರ ವಿದೇಶ ಪ್ರಯಾಣ ದಾಖಲೆಗಳನ್ನು ಸುಗಮಗೊಳಿಸಲು ಆ ಸಚಿವರು ನೆರವು ನೀಡುತ್ತಾರೆ! ಅದನ್ನು ಮಾನವೀಯ ನೆಲೆಯಿಂದ ಮಾಡಿದ್ದಾಗಿ ಅವರು, ಅವರ ಪಕ್ಷ…
-
2ಜಿ ಹಗರಣದಲ್ಲಿ ಭಾಗಿಯಾದವರಿಗೆ ಶಿಕ್ಷೆಯಾಗಲೇ ಇಲ್ಲ
ಉದ್ಯಮಿಗಳು, ರಾಜಕಾರಣಿಗಳು ದೋಚಿದ ರೂ. 1.76 ಲಕ್ಷ ಕೋಟಿ ಸಾರ್ವಜನಿಕರ ಪಾಲಿಗೆ ದಕ್ಕಲೇ ಇಲ್ಲ ಬಹುಕೋಟಿ ಮೌಲ್ಯದ 2ಜಿ ಹಗರಣ, ಕಲ್ಲಿದ್ದಲು ಹಗರಣ ಯಾರಿಗೆ ಗೊತ್ತಿಲ್ಲ ಹೇಳಿ? ಈ ಹಗರಣಗಳನ್ನೇ ಪ್ರಮುಖ ಅಸ್ತ್ರವನ್ನಾಗಿ ಇಟ್ಟುಕೊಂಡು, ದೇಶಾದ್ಯಂತ, ಅಣ್ಣಾ ಹಜಾರೆ ನೇತೃತ್ವದಲ್ಲಿ ಭ್ರಷ್ಟಾಚಾರ ವಿರೋಧಿ ಆಂದೋಲನ ನಡೆದದ್ದು, ಬಿಜೆಪಿ ಮತ್ತು ಸಂಘಪರಿವಾರ ಅದರ ಹಿಂದೆ ಇದ್ದದ್ದು, ಕಾರ್ಪೊರೇಟ್ ಒಡೆತನದ ಮಾಧ್ಯಮಗಳು ವ್ಯಾಪಕ ಪ್ರಚಾರ ಕೊಟ್ಟಿದ್ದು, ಈ ಆಂದೋಲದಲ್ಲಿ ಕೇಜ್ರಿವಾಲ್, ಕಿರಣ್ ಬೇಡಿ ಜೊತೆಗೂಡಿದ್ದು, ವಿಧ್ಯಾರ್ಥಿಗಳು, ಯುವಜನರು ‘ನಾನೂ…
-
ಸ್ಮಾರ್ಟ್ ಮೀಟರ್ ಹಗರಣದ ಚರ್ಚೆಯೂ, ಮುಚ್ಚಿಟ್ಟ ಗ್ರಾಹಕರ ಸುಲಿಗೆಯ ನೀತಿಯೂ
ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ಗುತ್ತಿಗೆ ಹಗರಣ ದೊಡ್ಡ ಸುದ್ದಿಯಾಗಿದೆ. ರಾಜಕೀಯ ಪಕ್ಷಗಳು ಈ ಹಗರಣಗದ ಬಗ್ಗೆಯಷ್ಟೇ ಮಾತನಾಡುತ್ತಿವೆ. 2025-26ರ ರಾಜ್ಯ ಬಜೆಟ್ ಅಧಿವೇಶನದಲ್ಲಿ ಬಿಜೆಪಿ ನಾಯಕರೊಬ್ಬರು ಸ್ಮಾರ್ಟ್ ಮೀಟರ್ ಕುರಿತೇ 45 ನಿಮಷಗಳ ಕಾಲ ಮಾತನಾಡಿದರೂ, ಸ್ಮಾರ್ಟ್ ಮೀಟರ್ ಅಳವಡಿಕೆಯ ಉದ್ದೇಶವೇನು? ಆ ನಂತರ, ಗ್ರಾಹಕರು ಅನುಭವಿಸುವ ನೋವೇನು? ಕೃಷಿ ಪಂಪ್ ಸೆಟ್ ಹೊಂದಿರುವ ರೈತರ ಮತ್ತು ಕೃಷಿಯ ಮೇಲಾಗುವ ಪರಿಣಾಮಗಳೇನು? ಈ ಅಂಶಗಳ ಬಗ್ಗೆ ಏನೂ ಮಾತನಾಡಲಿಲ್ಲ. ಸಮವರ್ತಿ ಪಟ್ಟಿಯಲ್ಲಿರುವ ವಿದ್ಯುತ್ ಕ್ಷೇತ್ರದ ರಾಜ್ಯಗಳ ಹಕ್ಕನ್ನು…
-
ತನಿಖೆಯ ಹಾದಿಯಲ್ಲಿ ಸಾವಿನ ಸರಮಾಲೆಯನ್ನೇ ಸೃಷ್ಟಿಸಿದ ‘ವ್ಯಾಪಂ ಹಗರಣ’
ಚಿತ್ರ ಕೃಪೆ: ದಿ ಹಿಂದೂ ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕಾಗಿ 2026ರ ಮೇ 3ರಂದು ನಡೆಸಲಾದ NEET ಪರೀಕ್ಷೆಯನ್ನು ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ರದ್ದುಗೊಳಿಸಿ, ಮರುಪರೀಕ್ಷೆ ನಡೆಸುವುದಾಗಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಘೋಷಿಸಿದೆ. ಅಪಾರ ಒತ್ತಡ ಭರಿಸಿ, ಹಣ ವ್ಯಯಿಸಿ, ಪರೀಕ್ಷೆ ಬರೆದಿದ್ದ ಲಕ್ಷಾಂತರ ವಿದ್ಯಾರ್ಥಿಗಳ ಕನಸಿನ ಗೋಪುರ ಕುಸಿದಿದ್ದು, ಭರವಸೆಗೆ ಭಂಗ ಉಂಟಾಗಿದೆ. ಈ ಸಂದರ್ಭದಲ್ಲಿ, ಮಧ್ಯಪ್ರದೇಶದಲ್ಲಿ 2013ರಲ್ಲಿ ಬೆಳಕಿಗೆ ಬಂದ Vyapam ಹಗರಣವನ್ನು ನೆನಪಿಸಿಕೊಳ್ಳುವುದು ಅಗತ್ಯ ಎನಿಸುತ್ತಿದೆ. ವ್ಯಾಪಂ ಹಗರಣಕ್ಕೆ ಸಂಬಂಧಿಸಿ ನಡೆದ ತನಿಖೆಯ…
-
ಕಲ್ಲಿದ್ದಲು ಹಗರಣದಲ್ಲಿ ಭಾಗಿಯಾದವರಿಗೆ ಶಿಕ್ಷೆಯಾಗಲೇ ಇಲ್ಲ
2012ರಲ್ಲಿ ಮನಮೋಹನ್ ಸಿಂಗ್ ಸರ್ಕಾರವನ್ನು ಅಲುಗಾಡಿಸಿದ ಬಹುಕೋಟಿ ಮೌಲ್ಯದ ಹಗರಣಗಳಲ್ಲಿ ಕಲ್ಲಿದ್ದಲು ಹಗರಣ ಮತ್ತು 2ಜಿ ಹಗರಣ ಮೊದಲೆರಡು ಸ್ಥಾನಲ್ಲಿದ್ದವು. ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ಕಂಪನಿಗಳಿಗೆ ಕಲ್ಲಿದ್ದಲು ಬ್ಲಾಕ್‌ಗಳನ್ನು ಹೇಗೆ ನೀಡಲಾಯಿತು ಎಂಬುದರ ಕುರಿತಾಗಿ 2012ರಲ್ಲಿ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ವರದಿ ಬಂದ ನಂತರ ಕಲ್ಲಿದ್ದಲು ಹಗರಣ ರಾಷ್ಟ್ರೀಯ ದೊಡ್ಡ ಹಗರಣವಾಗಿ ಮಾರ್ಪಟ್ಟಿದೆ. 2004 ಮತ್ತು 2009ರ ನಡುವೆ ಪಾರದರ್ಶಕವಲ್ಲದ ರೀತಿಯಲ್ಲಿ 194 ಕಲ್ಲಿದ್ದಲು ಬ್ಲಾಕ್‌ಗಳನ್ನು ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಖಾಸಗಿ…
-
ಅದಾನಿ ಲಂಚ ಪ್ರಕರಣವೂ- ದುಬಾರಿ ವಿದ್ಯುತ್ ದರವೂ
2029 ಕೋಟಿ ರೂ. ಲಂಚದ ವ್ಯವಹಾರ ನಡೆಸಿರುವ ಆರೋಪದ ಮೇಲೆ ಗೌತಮ್ ಅದಾನಿ ವಿರುದ್ದ ಅಮೆರಿಕ ನ್ಯಾಯಾಲವೊಂದು ಬಂಧನದ ವಾರೆಂಟ್ ಹೊರಡಿಸಿದೆ. ಅದಾನಿ ಆಪ್ತ ಮಿತ್ರ ನರೇಂದ್ರ ಮೋದಿ ಮತ್ತು ಅದಾನಿ ನೆಚ್ಚಿನ ಪಕ್ಷ ಭಾರತೀಯ ಜನತಾ ಪಕ್ಷ ಅಡಳಿತ ನಡೆಸುತ್ತಿರುವ ಈ ಸಂದರ್ಭದಲ್ಲಿ ಸಹಸ್ರ ಕೋಟಿ ರೂ. ಮೊತ್ತದ ಲಂಚದ ಅವ್ಯವಹಾರ ನಡೆಸಿದ ಅದಾನಿಗೆ ಶಿಕ್ಷೆ ಆಗುತ್ತದೆಯೋ ಇಲ್ಲವೋ ಆದರೆ, ಈ ಲಂಚದ ವ್ಯವಹಾರವು, ವಿದ್ಯುತ್ ಗೆ ದುಬಾರಿ ದರ ವಿಧಿಸುವ ಮೂಲಕ ಜನಸಾಮಾನ್ಯರನ್ನು ನಿರಂತರ…
-
ಪಿಎಂ ಕೇರ್ಸ್ ನಿಧಿ: ಸಹಸ್ರಾರು ಕೋಟಿ ಹಣ ಸಾರ್ವಜನಿಕರಿಗೋ ಅಥವಾ ಸಂಘಪರಿವಾರಕ್ಕೊ?
ಕೊರೋನಾ ಅವಧಿಯಲ್ಲಿ, ಮಾರ್ಚ್ 28, 2020 ರಂದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ‘ಪಿಎಂ ಕೇರ್ಸ್ ಫಂಡ್’ ಎಂಬ ನಿಧಿಯನ್ನು ರಚಿಸಿದರು. ಮೋದಿ ಈ ಪ್ರತಿಷ್ಠಾನದ ಅಧ್ಯಕ್ಷರಾಗಿ ಮತ್ತು ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರುಗಳನ್ನು ಸದಸ್ಯರನ್ನಾಗಿ ನೇಮಿಸಿಕೊಂಡರು. ಈ ನಿಧಿಗೆ ಸಾವಿರಾರು ಕೋಟಿ ರೂ.ಗಳನ್ನು ದಾನ ಪಡೆಯಲಾಗಿದೆ. ಆದರೆ ಇಲ್ಲಿಯವರೆಗೆ ಪಿಎಂ ಕೇರ್ಸ್ ನಿಧಿಗೆ ಎಷ್ಟು ಹಣ ನೀಡಲಾಗಿದೆ, ಬಂದ ಹಣವನ್ನು…
-
ರಫೆಲ್ ಒಪ್ಪಂದ:
ಅಂತ್ಯ ಕಾಣದ ಭಾರತದ ಅತಿದೊಡ್ಡ ರಕ್ಷಣಾ ಹಗರಣ ಭಾರತದ ಅತಿದೊಡ್ಡ ರಕ್ಷಣಾ ಹಗರಣ ಎಂದೇ ಹೇಳಲಾದ, 2016ರಲ್ಲಿ ಪ್ರಾನ್ಸ್ ದೇಶದ ಡಸ್ಸಾಲ್ಟ್ ಏವಿಯೇಷನ್ ಕಂಪನಿಯ ಜೊತೆಗೆ ರೂ. 59,000 ಕೋಟಿ ಮೊತ್ತದ, 36 ರಫೆಲ್ ಯುದ್ಧ ವಿಮಾನ ಒಪ್ಪಂದದ ಕುರಿತು ಬರೆಯುವ ಪ್ರಯತ್ನ ಮಾಡುತ್ತೇನಾದರೂ, ಇದರ ಸಂಪೂರ್ಣ ವಿವರ ಬರೆದರೆ ಒಂದು ದೊಡ್ಡ ಪುಸ್ತಕವೇ ಆಗುತ್ತದೆ. ಈ ಹಗರಣದ ಕುರಿತಂತೆ ಈಗಾಗಲೇ, ಸ್ವತಂತ್ರ ಪತ್ರಕರ್ತರಾದ ರವಿ ನಾಯರ್ ಮತ್ತು ಪರಂಜಾಯ್ ಗುಹಾ ಠಾಕುರ್ತಾ 2022ರಲ್ಲಿ “ರಫೇಲ್ ಡೀಲ್…
-
14.56 ಲಕ್ಷ ಕೋಟಿ ರೈಟ್ಆಫ್: 20 ಲಕ್ಷ ಕೋಟಿಗೂ ಹೆಚ್ಚು NPA
ಮೋದಿ ಸರ್ಕಾರದ 10 ವರ್ಷಗಳ ಸಾಧನೆಗಳಲ್ಲಿ ಬ್ಯಾಂಕುಗಳಲ್ಲಿ ಸಾರ್ವಜನಿಕರ ಸಂಪತ್ತನ್ನು ಲೂಟಿ ಮಾಡಲು ದೊಡ್ಡ ಉದ್ಯಮಿಗಳಿಗೆ ಮುಕ್ತ ಅವಕಾಶ ಕೊಟ್ಟಿರುವುದೂ ಒಂದು ಸಾಧನೆ. ಆದರೆ, ಅವರ ಸಾಧನೆಗಳ ಪ್ರಚಾರದ ಪಟ್ಟಿಯಲ್ಲಿ ಈ ಅಂಶ ಸೇರಿಸಿಲ್ಲ. 2014-15 ರಿಂದ 2021-22ರ 8 ವರ್ಷಗಳ ಅವಧಿಯಲ್ಲಿ 12,49,698 ಕೋಟಿ ರೂಗಳ ಸಾಲ ರೈಟ್ ಆಫ್ (write off) ಮಾಡಲಾಗಿತ್ತು. 2022-23ರ ಆರ್ಥಿಕ ವರ್ಷದ ಮೊದಲ 9 ತಿಂಗಳ ಅವಧಿಯಲ್ಲಿ 91,000 ಕೋಟಿ ಸಾಲ ರೈಟ್ ಆಫ್ ಮಾಡಲಾಗಿದೆ ಎಂದು ರಾಜ್ಯಸಭೆಗೆ…
-
ಚುನಾವಣಾ ಬಾಂಡ್: ಬಿಜೆಪಿಗೆ ಬಂದ ಹಣ 9,200 ಕೋಟಿ ರೂ
ಬಿಜೆಪಿ ಪಕ್ಷಕ್ಕೆ ಹರಿದು ಬರುತ್ತಿರುವ ಚುನಾವಣಾ ನಿಧಿ ಎಷ್ಟು? ಆ ನಿಧಿಯ ಮೂಲ ಯಾವುದು? ಬಿಜೆಪಿ ಒಂದೆಡೆ ‘ಪಿಎಂ ಕೇರ್ ನಿಧಿ’ ಹೆಸರಿನಲ್ಲಿ ಸಂಗ್ರಹಿಸಿದ ಹಣ ಮತ್ತು ಅದನ್ನು ಯಾವುದಕ್ಕೆ ಬಳಸಲಾಗುತ್ತದೆ ಎಂಬ ವಿವರಗಳನ್ನು ಸಾರ್ವಜನಿಕರಿಂದ ಮುಚ್ಚಿಡುತ್ತದೆ. ಮತ್ತೊಂದಡೆ, ‘ಚುನಾವಾಣಾ ಬಾಂಡ್’ ಗಳ ಮೂಲಕ ಪಕ್ಷದ ನಿಧಿಗೆ ಯಾವ ಮೂಲದಿಂದ ಮತ್ತು ಎಷ್ಟು ಹಣ ಬಂದಿದೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಸಲು ನಿರಾಕರಿಸುತ್ತಿದೆ. ದೇಣಿಗೆ ಪಡೆಯುವ ಹಕ್ಕು ರಾಜಕೀಯ ಪಕ್ಷಗಳಿಗಿದ್ದರೆ, ಅದನ್ನು ಯಾರು ಕೊಟ್ಟರು ಎಂದು ತಿಳಿಯುವ ಹಕ್ಕು…