ವರ್ಗ: ಹೋರಾಟಗಳು

  • ಧರ್ಮಸ್ಥಳ ಗ್ರಾಮ: ಏನಿದು ಪದ್ಮಲತಾ ಪ್ರಕರಣ

    ಧರ್ಮಸ್ಥಳ ಗ್ರಾಮದಲ್ಲಿ ತಾನು ಸ್ವಚ್ಛತಾ ಕಾರ್ಯದಲ್ಲಿ ನಿಯುಕ್ತನಾಗಿದ್ದವನಾಗಿದ್ದು, ಆ ಅವಧಿಯಲ್ಲಿ ಒತ್ತಾಯಪೂರ್ವಕವಾಗಿ ಹಲವಾರು ದೇಹಗಳನ್ನು ಹೂಳುವ ಕೆಲಸ ಮಾಡಿದ್ದೇನೆಂದು ಅನಾಮಧೇಯ ವ್ಯಕ್ತಿಯೊಬ್ಬರ ದೂರು, ನಂತರದ ಬೆಳವಣಿಗೆಗಳನ್ನು ರಾಜ್ಯ, ದೇಶ ಮಾತ್ರವಲ್ಲದೆ ಜಗತ್ತಿನ ಮಾಧ್ಯಮಗಳು ಸುದ್ದಿಮಾಡುತ್ತಿವೆ. ರಾಜ್ಯ ಸರ್ಕಾರದಿಂದ ಎಸ್ ಐಟಿ ರಚನೆಯಾಗಿ ತನಿಖೆಯೂ ಆರಂಭವಾಗಿದೆ. ಅಸ್ತಿಪಂಜರಗಳನ್ನು ಹುಡುಕುವ ಕಾರ್ಯವೂ ಅಲ್ಲಿ ನಡೆಯುತ್ತಿದೆ. ಲಕ್ಷಾಂತರ ಜನರ ದೃಷ್ಟಿ ಅತ್ತಕಡೆಯೇ ಇದೆ. ಈ ಸಂದರ್ಭದಲ್ಲಿ 1986ರಲ್ಲಿ ಹತ್ಯೆಗೀಡಾದ ವಿಧ್ಯಾರ್ಥಿನಿ ಪದ್ಮಲತಾ ಪ್ರಕರಣದ ಕುರಿತು ಜನರು ಮತ್ತೆ ಮಾತನಾಡತೊಡಗಿದ್ದಾರೆ. ಈ ಪ್ರಕರಣ…

  • ಚಿಕಾಗೋ ನಗರದ ‘ಹೇಮಾರ್ಕೆಟ್ ಹುತಾತ್ಮರು’

    ಮೇ 4 ರಂದು, ಸ್ಥಳೀಯ ಹೋರಾಟಗಾರರು ವ್ಯಾಗನ್ನಿನ ಮೇಲೆ ನಿಂತು ಮಾಡುವ ಭಾಷಣಗಳನ್ನು ಕೇಳಲು ಸುಮಾರು 2,500 ಕಾರ್ಮಿಕರು ಪ್ಯಾಕಿಂಗ್ ಹೌಸ್ ಜಿಲ್ಲೆಯ ಹೇಮಾರ್ಕೆಟ್ ಚೌಕದಲ್ಲಿ ಒಟ್ಟುಗೂಡಿದರು. ರಾತ್ರಿ ಹತ್ತು ಗಂಟೆಯ ಕೆಲವು ನಿಮಿಷಗಳ ನಂತರ, ಚಿಕಾಗೋದಲ್ಲಿ ಜೋರು ಗಾಳಿ ಬೀಸಲಾರಂಭಿಸಿತು. ಮೊದಲ ಹನಿ ಮಳೆ ಬೀಳುತ್ತಿದ್ದಂತೆ, ಹೇಮಾರ್ಕೆಟ್ ಚೌಕದಲ್ಲಿ ಜನಸಮೂಹವು ಅಲ್ಲಿಂದ ಹೊರಡಲು ಪ್ರಾರಂಭಿಸಿತು. ಕಾರ್ಮಿಕ ನಾಯಕರು ಪೊಲೀಸರ ಕ್ರೌರ್ಯವನ್ನು ಖಂಡಿಸಿ, ಎಂಟು ಗಂಟೆಗಳ ದಿನದ ಬೇಡಿಕೆ ಬಗ್ಗೆ ಮಾತನಾಡುತ್ತಿದ್ದರು. ರಾತ್ರಿ ಹತ್ತು ಗಂಟೆಯ ಹೊತ್ತಿಗೆ…

  • ಹೋರಾಟಕ್ಕಿಳಿದ ಬೆಂಗಳೂರಿನ ಟೆಕ್ಕಿಗಳು

    “ಆರೋಗ್ಯಕರ ಕೆಲಸ-ಜೀವನ ಸಮತೋಲನ ಪ್ರತಿಯೊಬ್ಬ ನೌಕರನ ಹಕ್ಕು” ಸಾಫ್ಟ್‌ವೇರ್ ಉದ್ಯೋಗಿಗಳೆಂದರೆ, ಅವರಿಗೇನು ಕಡಿಮೆ ಇದೆ? ಉತ್ತಮ ಸಂಬಳ ಸಿಗುತ್ತೆ, ಹವಾನಿಯಂತ್ರಣ ಕೊಠಡಿಗಳಲ್ಲಿ ಆರಾಮವಾಗಿ ಕೆಲಸ ಮಾಡುತ್ತಾರೆ, ದುಬಾರಿ ಕಾರುಗಳಲ್ಲಿ ಓಡಾಡುತ್ತಾರೆ, ಉನ್ನತ ದರ್ಜೆಯ ಜೀವನ ನಡೆಸುತ್ತಾರೆ ಎಂದೆಲ್ಲಾ ಹಲವರು ಭಾವಿಸುತ್ತಾರೆ. ಆದರೆ, “ನಾವು ಮನುಷ್ಯರು… ಕಂಪನಿಗಳ ಗುಲಾಮರಲ್ಲ”,  “ಆರೋಗ್ಯಕರ ಕೆಲಸ-ಜೀವನ ಸಮತೋಲನ ಪ್ರತಿಯೊಬ್ಬ ನೌಕರನ ಹಕ್ಕು” ಎಂಬ ಘೋಷಣೆಗಳೊಂದಿಗೆ ಟೆಕ್ಕಿಗಳೂ ಹೋರಾಟಕ್ಕಿಳಿದಿದ್ದಾರೆ. ಎಲ್ಲಾ ಕೈಗಾರಿಕೆಗಳಂತೆ ಐಟಿ ಕ್ಷೇತ್ರದಲ್ಲಿಯೂ ಕಾರ್ಮಿಕ ಕಾನೂನುಗಳನ್ನು ಜಾರಿಗೆ ತರಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಕೆಲವರು…

  • ಚಿನ್ನಿಯಂಪಾಳ್ಯಂ: ಹುತಾತ್ಮರಾದ ನಾಲ್ವರು ಯುವ ಹೋರಾಟಗಾರರು

    ಕಾರ್ಮಿಕರು ಪಡೆಯುತ್ತಿರುವ ಇಂದಿನ ಸೌಲಭ್ಯಗಳನ್ನು ಬಂಡವಾಳಗಾರರು ಸ್ವಇಚ್ಛೆಯಿಂದ ಕೊಟ್ಟಿದ್ದಲ್ಲ, ಪ್ರಭುತ್ವ ಕಾರ್ಮಿಕರ ಮೇಲಿನ ಕನಿಕರದಿಂದ ಇಂತಹ ಕಾರ್ಮಿಕರ ಪರವಾದ ಕಾನೂನುಗಳನ್ನು ರೂಪಿಸಿದ್ದಲ್ಲ, ಬದಲಾಗಿ ಹಲವರ ಹೋರಾಟ, ತ್ಯಾಗ, ಬಲಿದಾನ, ಚೆಲ್ಲಿದ ರಕ್ತದಿಂದ ಈ ಸೌಲಭ್ಯಗಳು ಕಾರ್ಮಿಕರಿಗೆ ದೊರಕಿವೆ. ಸ್ವಾತಂತ್ರ್ಯಕ್ಕೆ ಮುಂಚೆಯೇ, ಕೆಂಪು ಧ್ವಜ ಚಳವಳಿಯು ತಮಿಳುನಾಡಿನ ಕಾರ್ಖಾನೆಗಳಲ್ಲಿನ ಟ್ರೇಡ್ ಯೂನಿಯನ್ ಹಕ್ಕುಗಳಿಗಾಗಿ ಮಾತ್ರವಲ್ಲದೆ, ಲಿಂಗ ದಬ್ಬಾಳಿಕೆ ಮತ್ತು ಅಸಮಾನತೆಯ ವಿರುದ್ಧವೂ ಪ್ರಬಲ ಹೋರಾಟಗಳನ್ನು ನಡೆಸಿತು. ಇಂತಹ ಹೋರಾಟದಲ್ಲಿ ಹುತಾತ್ಮರಾದ ಚಿನ್ನಿಯಂಪಾಳ್ಯದ ಹುತಾತ್ಮರ ಬಲಿದಾನ ನಮಗೆ ಸದಾ ಸ್ಪೂರ್ತಿ…

  • ಗ್ಯಾಟ್ ಒಪ್ಪಂದದ ವಿರುದ್ಧ ಹೋರಾಟ: ರಾಜಭವನದ ಮುಂದೆ ಚೆಲ್ಲಿದ ರಕ್ತ

    ಗ್ಯಾಟ್ (GATT-General Agriment on Tariffs and Trade) ಒಪ್ಪಂದ ದೇಶದ ಮೇಲೆ, ಕೃಷಿ ಮತ್ತು ರೈತರ ಮೇಲೆ, ಕಾರ್ಮಿಕರು, ವಿದ್ಯಾರ್ಥಿ, ಯುವಜನ, ಮಹಿಳೆಯರ ಮೇಲೆ, ಒಟ್ಟಾರೆ ಜನಸಾಮಾನ್ಯರ ಬದುಕಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು, ಆ ಒಪ್ಪಂದದ ವಿರುದ್ಧ 1990ರ ದಶಕದಿಂದಲೂ ಕಮ್ಯೂನಿಸ್ಟರು ದಿಟ್ಟವಾದ ಹೋರಾಟ ನಡೆಸುತ್ತಾ ಬಂದಿದ್ದಾರೆ. ‘ಜೈಲ್ ಬರೋ’ ಸೇರಿದಂತೆ ದೇಶಾದ್ಯಂತ ಲಕ್ಷಾಂತರ ಜನರು ಭಾಗಿಯಾಗಿದ್ದ ಹಲವು ಹೋರಾಟಗಳಲ್ಲಿ, 1994ರಲ್ಲಿ ಬೆಂಗಳೂರಿನಲ್ಲಿ ನಡೆದ ‘ರಾಜಭವನ ಚಲೋ’ ಕಾರ್ಯಕ್ರಮವೂ ಒಂದು. ಈ ಹೋರಾಟದಲ್ಲಿ…

  • ಸಾಮ್ರಾಟ್ ಅಶೋಕ ಗಾರ್ಮೆಂಟ್ ಕಾರ್ಮಿಕರ ಹೋರಾಟ

    ನಗರದಲ್ಲಿ 22 ಕಾರ್ಖಾನೆ ಹೊಂದಿರುವ ಸುಮಾರು ಏಳು ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿರುವ ಅಶೋಕ ಸಾಮ್ರಾಟ್ ಸಿದ್ದ ಉಡುಪು (EK ಗಾರ್ಮೆಂಟ್ಸ್) ಕಾರ್ಖಾನೆಯ ಕಾರ್ಮಿಕರು ತಮ್ಮ ಹೋರಾಟವನ್ನು ತೀರ್ವಗೊಳಿಸಿದ್ದಾರೆ. 1996ರ ಮಾರ್ಚ್ 15 ರಂದು ಸಿಐಟಿಯು ಸಂಯೋಜಿತ ಬೆಂಗಳೂರು ಜಿಲ್ಲಾ ಗಾರ್ಮೆಂಟ್ಸ್ ವರ್ಕರ್ಸ್ ಯೂನಿಯನ್ನಿನ ಅಧ್ಯಕ್ಷರು ಹಾಗೂ ಸಿಐಟಿಯು ಜಿಲ್ಲಾ ಮುಖಂಡರಾದ ಆರ್. ಶ್ರೀನಿವಾಸ್ ವಿಧಾನಸೌಧದ ಎದುರು ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸುವುದರ ಮೂಲಕ ಹೋರಾಟವನ್ನು ತೀರ್ವಗೊಳಿಸಿದರು. ಕನಿಷ್ಠ ಸೌಲಭ್ಯವಿಲ್ಲ ಶೇಕಡ 95 ರಷ್ಟು ಮಹಿಳೆಯರೇ ಇರುವ…

  • ಮೈಕೊ ಕಾರ್ಮಿಕರ 1979ರ ಐತಿಹಾಸಿಕ ಹೋರಾಟ

    (2002ರಲ್ಲಿ ಬಿಡುಗಡೆಯಾದ ನನ್ನ ಕಿರು ಪುಸ್ತಕದ ಪೂರ್ಣ ಬರಹ ಇಲ್ಲಿದೆ.) ಬೆಂಗಳೂರು  ನಗರದಲ್ಲಿ ಬೃಹತ್ ಖಾಸಗಿ ಕಂಪನಿಯಾದ ‘ಮೈಕೋ’ (MICO) ಎಂದೇ ಖ್ಯಾತನಾಮ ಹೊಂದಿರುವ ಮೋಟರ್ ಇಂಡಸ್ಟ್ರೀಸ್ ಕಂಪನಿ (ಇಂದಿನ ಭಾಷ್ ಕಂಪನಿ) 1954ರಲ್ಲಿ ಸ್ಥಾಪನೆಗೊಂಡಿತು. ಪಶ್ಚಿಮ ಜರ್ಮನಿಯ ಏಕಸ್ವಾಮ್ಯ ಬಂಡವಾಳಗಾರರ ಒಂದು ಬಹುರಾಷ್ಟ್ರೀಯ ಕಂಪನಿ ಇದನ್ನು ಸ್ಥಾಪಿಸಿತು. ಕಾರ್ಮಿಕರಿಗೆ ನಿಕೃಷ್ಠ ವೇತನ, ಅಧಿಕ ಕೆಲಸದ ಹೊರೆ, ಅಧಿಕ ಲಾಭ, ಇದು ಈ ಮಾಲೀಕರ ಧೋರಣೆಯಾಗಿತ್ತು. ಕಾರ್ಖಾನೆ ಹೆಚ್ಚು ಹೆಚ್ಚು ಲಾಭಗಳಿಸುತ್ತಾ ತನ್ನ ಬಂಡವಾಳವನ್ನು ವೃದ್ಧಿಸಿಕೊಳ್ಳತೊಡಗಿತ್ತು. 1972ರಲ್ಲಿ ಅದರ…

Is this your new site? Log in to activate admin features and dismiss this message
ಲಾಗಿನ್