ವರ್ಗ: ಎಲ್ ಪಿ ಜಿ ನೀತಿಗಳು

  • ಭಾರತದಲ್ಲಿ ಅಂದು ʻತೈಲ ನಿಧಿʼ ಖಾತೆ ಇತ್ತು

    ಅಮೆರಿಕ- ಇಸ್ರೇಲ್‌ ಮತ್ತು ಇರಾನ್‌ ಯುದ್ಧದ ಪರಿಣಾಮ ಈಗಾಗಲೇ ಅಡುಗೆ ಅನಿಲದ ಬೆಲೆ ಹೆಚ್ಚಳವಾಗಿದೆ. ಯುದ್ದ ಮುಂದುವರೆದರೆ ಇದು ಇನ್ನೂ ಹೆಚ್ಚಾಗಬಹುದು. ಪೆಟ್ರೋಲ್‌, ಡೀಸೆಲ್‌ ಬೆಲೆಗಳೂ ಹೆಚ್ಚಾಗುವ ಆತಂಕವಿದೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ನಿಯಂತ್ರಣ ಮಾಡಲು ಸಾಧ್ಯವಿಲ್ಲವೇಕೇ? ಈ ಪ್ರಶ್ನೆಗೆ ಸಂಬಂಧಿಸಿದ ಸೀತಾರಾಂ ಯೆಚೂರಿಯವರ ಲೇಖನದ ಆಯ್ದ ಭಾಗ ಇಲ್ಲಿದೆ. (#ಆಟೋರಿಕ್ಷಾಚಾಲಕ_ಪತ್ರಿಕೆಯ 1997ರ ಆಗಸ್ಟ್‌ ಮತ್ತು ಸೆಪ್ಟೆಂಬರ್ ತಿಂಗಳ ಸಂಚಿಕೆಯಲ್ಲಿ ಪ್ರಕಟವಾದ ಲೇಖನಗಳು ಇಲ್ಲಿವೆ ) ತೈಲ ನಿಧಿ ಕೊರತೆ ಎಂದರೇನು? ಈ ಕೊರತೆ ಉಂಟಾಗಿರುವುದು ಹೇಗೆ?…

  • ಬಿಪಿಎಲ್ ಕಾರ್ಡ್: ಬದಲಾಗಬೇಕಿದೆ ‘ಬಡತನ ರೇಖೆ’ಯ ಮಾನದಂಡ

    7.76 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ ಗಳನ್ನು ರದ್ದುಗೊಳಿಸಲು ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಕೇಂದ್ರದ ಸೂಚನೆಯಂತೆ ಕ್ರಮ ತೆಗೆದುಕೊಳ್ಳಲು ಆಹಾರ ಇಲಾಖೆ ಮುಂದಾಗಿದೆ. ರಾಜ್ಯದಲ್ಲಿ ಒಟ್ಟು 13 ಲಕ್ಷ ಅನರ್ಹ ಬಿಪಿಎಲ್ ಕಾರ್ಡುಗಳಿವೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಈಗಾಗಲೇ 3,65,614 ಪಡಿತರ ಚೀಟಿಗಳನ್ನು ರದ್ದು ಮಾಡಲಾಗಿದೆ ಎಂದು ಸರ್ಕಾರ ಹೇಳಿದೆ. ಬಿಪಿಎಲ್ ಕಾರ್ಡ್ ಪಡೆಯಲು ಸರ್ಕಾರ ನಿಗದಿಪಡಿಸಿರುವ ಮಾನದಂಡವೆಂದರೆ, ಕುಟುಂಬದ ವಾರ್ಷಿಕ ಆದಾಯ 1,20,000 ರೂಪಾಯಿ. ಇಷ್ಟು ಆದಾಯ ಇರುವ ಕುಟುಂಬದವರು…

  • ಸ್ಮಾರ್ಟ್ ಮೀಟರ್  ಹಗರಣದ ಚರ್ಚೆಯೂ, ಮುಚ್ಚಿಟ್ಟ ಗ್ರಾಹಕರ ಸುಲಿಗೆಯ ನೀತಿಯೂ

    ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ಗುತ್ತಿಗೆ ಹಗರಣ ದೊಡ್ಡ ಸುದ್ದಿಯಾಗಿದೆ. ರಾಜಕೀಯ ಪಕ್ಷಗಳು ಈ ಹಗರಣಗದ ಬಗ್ಗೆಯಷ್ಟೇ ಮಾತನಾಡುತ್ತಿವೆ. 2025-26ರ ರಾಜ್ಯ ಬಜೆಟ್ ಅಧಿವೇಶನದಲ್ಲಿ ಬಿಜೆಪಿ ನಾಯಕರೊಬ್ಬರು ಸ್ಮಾರ್ಟ್ ಮೀಟರ್ ಕುರಿತೇ 45 ನಿಮಷಗಳ ಕಾಲ ಮಾತನಾಡಿದರೂ, ಸ್ಮಾರ್ಟ್ ಮೀಟರ್ ಅಳವಡಿಕೆಯ ಉದ್ದೇಶವೇನು? ಆ ನಂತರ, ಗ್ರಾಹಕರು ಅನುಭವಿಸುವ ನೋವೇನು? ಕೃಷಿ ಪಂಪ್ ಸೆಟ್ ಹೊಂದಿರುವ ರೈತರ ಮತ್ತು ಕೃಷಿಯ ಮೇಲಾಗುವ ಪರಿಣಾಮಗಳೇನು? ಈ ಅಂಶಗಳ ಬಗ್ಗೆ ಏನೂ ಮಾತನಾಡಲಿಲ್ಲ. ಸಮವರ್ತಿ ಪಟ್ಟಿಯಲ್ಲಿರುವ ವಿದ್ಯುತ್ ಕ್ಷೇತ್ರದ ರಾಜ್ಯಗಳ ಹಕ್ಕನ್ನು…

  • ಬೆಂಗಳೂರಿನಲ್ಲಿ 16.6 ಕಿಮೀ ಉದ್ದದ ಸುರಂಗ ಮಾರ್ಗ ಬಳಕೆಗೆ 330 ರೂಪಾಯಿ ಟೋಲ್!!

    ಮೂಲಭೂತ ಸೌಕರ್ಯ ಅಭಿವೃದ್ಧಿ ಎಂದರೆ ಖಾಸಗಿ ಸಹಭಾಗಿತ್ವವೇ ಅಗಿರಬೇಕೆ? ಎಲ್ಲರೂ ಸುಂಕ, ಟೋಲ್, ಸೇವಾ ಶುಲ್ಕ ಹೆಸರಿನಲ್ಲಿ ಹಣ ಕೊಟ್ಟು ಮೂಲಸೌಕರ್ಯಗಳ ಪ್ರಯೋಜನಗಳನ್ನು ಪಡೆಯಬೇಕೇ? ಮೂಲಭೂತ ಸೌಕರ್ಯ ಎಂದರೆ ಹಣವುಳ್ಳವರಿಗೆ ಮಾಡುವ ಸೌಕರ್ಯಗಳೇ? ಶಿಕ್ಷಣ, ಆರೋಗ್ಯ ರಕ್ಷಣೆ ವ್ಯಾಪಾರದ ಸರಕುಗಳಂತಾಬೇಕೆ? ರಾಜಸ್ವ ಸಂಗ್ರಹ ಮತ್ತು ಹೂಡಿಕೆ ಹೆಚ್ಚಿಸಲು ಸಾರ್ವಜನಿಕ ಆಸ್ತಿಗಳ ನಗದೀಕರಣ ಮಾಡಬೇಕೆ? ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಜೆಟ್ ಗಳನ್ನು ಅವಲೋಕಿಸಿದರೆ ಇಂತಹ ಪ್ರಶ್ನೆಗಳು ಮೂಡುತ್ತವೆ.  ಕರ್ನಾಟಕ ರಾಜ್ಯ ಬಜೆಟ್ ಪ್ರಸ್ತಾಪದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಯೋಜನೆಗಳ…

  • ವಿಮಾ ವಲಯದಲ್ಲಿ ಎಫ್‌ಡಿಐ ಮಿತಿಯನ್ನು ಶೇ. 100ಕ್ಕೆ ಹೆಚ್ಚಿಸಲು ಪ್ರಸ್ತಾಪ

    ವಿಮಾ ಕಾಯ್ದೆ ತಿದ್ದುಪಡಿಗಳು ಯಾರಿಗಾಗಿ? ವಿಮಾ ವಲಯದಲ್ಲಿ ಶೇ. 26ರಷ್ಟು ಎಫ್‌ ಡಿಐಗೆ ವಾಜಪೇಯಿ ಸರ್ಕಾರ ಅನುವು ಮಾಡಿಕೊಟ್ಟಿತು. ಮೋದಿ ಸರ್ಕಾರ 2015ರಲ್ಲಿ ಇದನ್ನು ಶೇ. 49ಕ್ಕೆ, ನಂತರ 2021ರಲ್ಲಿ ಶೇ. 74ಕ್ಕೆ ಏರಿಸಿದರು. ಈಗ ಇದನ್ನು ಶೇ. 100ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರ ಮುಂದಾಗಿದೆ. “2047ರ ವರೆಗೆ ಎಲ್ಲರಿಗೂ ವಿಮೆ” ಎಂಬ ಕಾರಣವನ್ನು ಸರ್ಕಾರ ನೀಡುತ್ತಿದೆ. ಈ ಸಂಬಂಧ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲು ಹಣಕಾಸು ಸೇವೆಗಳ ಇಲಾಖೆ ಮುಂದಾಗಿದೆ. ಈ ಮೂಲಕ ವಿಮಾ ಕ್ಷೇತ್ರವನ್ನು ಹಾನಿ…

  • ಉಜ್ವಲ ಯೋಜನೆ: PMUY

    ಉಚಿತ ಸಂಪರ್ಕವಷ್ಟೆ, ಉಚಿತ ಅನಿಲವಲ್ಲ   “ನೋಡಿ ಇಲ್ಲಿ, ಹಳ್ಳಿಗಳಲ್ಲಿ ಬಡ ಮಹಿಳೆಯರು ಸೌದೆ ಒಲೆಯಲ್ಲಿ ಅಡುಗೆ ಮಾಡುತ್ತಿದ್ದಾರೆ. ಸೌದೆಯ ಹೊಗೆ ಮಹಿಳೆಯರ ಕಣ್ಣುಗಳಲ್ಲಿ ನೀರು ಸುರಿಸುತ್ತಿದೆ. ಈ ಬಡ ಮಹಿಳೆಯರಿಗೆ ಸಬ್ಸಿಡಿ ದರದಲ್ಲಿ ಅಡುಗೆ ಅನಿಲ ಕೊಡಬೇಕಿದೆ. ಉಳ್ಳವರು ತಾವು ಪಡೆಯುತ್ತಿರುವ ಅಡುಗೆ ಅನಿಲದ ಸಬ್ಸಿಡಿಯನ್ನು ಬಿಟ್ಟುಕೊಡಿ” ಇದು ಮೋದಿ ಸರ್ಕಾರದ ‘ಗಿವ್ ಇಟ್ ಅಪ್’ ಎಂಬ ಕರೆಗೆ ಸ್ಪಂದಿಸುವಂತೆ ‘ಉಳ್ಳವರಿಗೆ’(?) ಮಾಡಿದ ಕರೆಯ ಒಂದು ಜಾಹಿರಾತು. ಪ್ರಧಾನ್ ಮಂತ್ರಿ ಉಜ್ವಲ ಯೋಜನೆ(PMUY) ಯ ಜಾಹಿರಾತು…

  • ಕಾಶ್ಮೀರದ ಸಂಪತ್ತನ್ನು ದೋಚಲು 370ನೇ ವಿಧಿ ರದ್ದು

    2019ರ ಆಗಸ್ಟ್ 5ರಂದು ಸಂವಿಧಾನದ 370ನೇ ವಿಧಿಯ ಮೂಲಕ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಷೇಶ ಸ್ಥಾನಮಾನವನ್ನು ತೆಗೆದು ಹಾಕಿ, 35ಎ ವಿಧಿಯನ್ನು ನಿರರ್ಥಕಗೊಳಿಸಿ, ಅದಕ್ಕೆ ಇದ್ದ ರಾಜ್ಯದ ಸ್ಥಾನಮಾನವನ್ನು ರದ್ದುಗೊಳಿಸಿ, ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿರುವುದನ್ನೂ ಮೋದಿ ಸರ್ಕಾರದ ದೊಡ್ಡ ಸಾಧನೆ, ಎಂದು ಬಿಂಬಿಸಲಾಗಿದೆ. ಆದರೆ, 370ನೇ ವಿಧಿ ರದ್ದುಗೊಳಿಸಿರುವ ನಿಜವಾದ ಉದ್ದೇಶವನ್ನು ಮರೆಮಾಚಲಾಗಿದೆ. ಭಾರತ 1990ರ ದಶಕದಲ್ಲಿ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ (LPG) ನೀತಿಗಳನ್ನು ಒಪ್ಪಿಕೊಂಡಿರುವುದು ಎಲ್ಲರಿಗೂ ಗೊತ್ತೇ ಇದೆ. ಈ LPG  ನೀತಿಗಳನ್ನು…

  • ರಿಸರ್ವ್ ಬ್ಯಾಂಕ್ ನಲ್ಲಿನ ಮೀಸಲು ನಿಧಿಯನ್ನೂ ಬಿಡದ ಮೋದಿ ಸರ್ಕಾರ

    ಭಾರತ ಒಕ್ಕೂಟ ಸರ್ಕಾರದ ಪ್ರಧಾನಿ ಪಟ್ಟ ಅಲಂಕಿಸಿದ ಮೋದಿ, ತಮ್ಮಅಧಿಕಾರಾವಧಿಯ 9ವರ್ಷಗಳಲ್ಲಿ 4.7 ಲಕ್ಷ ಕೋಟಿ ರೂ ಮೌಲ್ಯದ ಸಾರ್ವಜನಿಕ ಆಸ್ತಿಗಳನ್ನು ಮಾರಿದರು, ತಮ್ಮ ಅವಧಿಯಲ್ಲೇ ನೂರು ಲಕ್ಷ ಕೋಟಿ ರೂ. (ರೂ. 100 ಲಕ್ಷ ಕೋಟಿ ) ಸಾಲ ಮಾಡಿ, 2014ರ ವರೆಗೂ ರೂ. 55 ಲಕ್ಷ ಕೋಟಿ ಇದ್ದ ಒಕ್ಕೂಟ ಸರ್ಕಾರದ ಸಾಲವನ್ನು ರೂ. 155 ಲಕ್ಷ ಕೋಟಿಗೆ ಹೆಚ್ಚಿಸಿದರು. ಇದೂ ಸಾಲದು ಎಂಬಂತೆ, ಆಪತ್ತಿನ ಕಾಲಕ್ಕೆ ಕೂಡಿಟ್ಟಿದ್ದ ರಿಸರ್ವ್ ಬ್ಯಾಂಕಿನ ಮೀಸಲು ಹಣದ…

  • ಶಿಕ್ಷಣ ಎಂಬುದು ಸರಕಲ್ಲ

    ಸರ್ಕಾರವು ಸಾರ್ವಜನಿಕರಿಗೆ ಶಿಕ್ಷಣವನ್ನು ಒದಗಿಸುವ ತನ್ನ ಸಾಮಾಜಿಕ ಜವಾಬ್ದಾರಿಯನ್ನು ಸಂಪೂರ್ಣವಾಗಿ ಖಾಸಗಿಯವರಿಗೆ ಹಸ್ತಾಂತರಿಸುವ ಕಡೆಗೆ ಪ್ರಯಾಣಿಸಿದೆ.  ಸಾಮಾಜಿಕ ಒಳಿತಿಗಾಗಿ ಶಿಕ್ಷಣ. ಶಿಕ್ಷಣ ಎಂಬುದು ಮಾರಟದ ಸರಕಲ್ಲ. ಇದನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಬಾರದು ಅಥವಾ ಖರೀದಿಸಬಾರದು. ನೆಲ್ಸನ್ ಮಂಡೇಲಾ ಅವರು “ಖಾಸಗೀಕರಣವು ಶಿಕ್ಷಣದ ಹಕ್ಕನ್ನು ಮೊಟಕುಗೊಳಿಸುತ್ತದೆ” ಎಂದು ಹೇಳಿದ್ದರು. ಖ್ಯಾತ ಶಿಕ್ಷಣ ತಜ್ಞ ಪಾವೊಲೊ ಫ್ರಿಯಾರಿ ಅವರ ಪ್ರಕಾರ, “ಶಿಕ್ಷಣವು ತುಳಿತಕ್ಕೊಳಗಾದ ಜನರ ಸೃಜನಶೀಲತೆಯನ್ನು ಹೊರತರುವುದು ಮತ್ತು ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ದಮನಕಾರಿ ಸಮಾಜದಲ್ಲಿ ಸ್ವಾತಂತ್ರ್ಯದ ಶಕ್ತಿಯನ್ನು…

  • ‘ಕಿಸಾನ್ ಸಮ್ಮಾನ್’ ಮರೆಯಲ್ಲಿವೆ ಮುಕ್ತ ಮಾರುಕಟ್ಟೆ ವ್ಯವಸ್ಥೆಯ ಜಾರಿಗೆ ಉನ್ನಾರಗಳು

    “ನರೇಂದ್ರ ಮೋದಿಯವರು ‘ಕಿಸಾನ್ ಸಮ್ಮಾನ್’ ಯೋಜನೆಯ ಮೂಲಕ ರೈತರ ಖಾತೆಗೆ ಪ್ರತಿ ವರ್ಷ 6,000 ರೂ. ಹಾಕುತ್ತಿದ್ದಾರೆ. ಇದರಿಂದ ರೈತರ ಆದಾಯ ಹೆಚ್ಚಾಗಿದೆ. ಇದು ರೈತರ ಆರ್ಥಿಕ ಅಗತ್ಯಗಳನ್ನು ಪೂರೈಸಲು ಕಾರಣವಾಗಿದೆ. ರೈತರಿಗೆ ವರ್ಷಕ್ಕೆ 60 ಸಾವಿರ ಕೋಟಿ ರೂಪಾಯಿಗಳನ್ನು ಮೋದಿ ಸರ್ಕಾರ ಕೊಡುತ್ತಿದೆ. 2022-23 ರಲ್ಲಿ ಒಟ್ಟು ರೂ. 58,201.85 ಕೋಟಿಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಗಿದೆ. ಯೋಜನೆ ಪ್ರಾರಂಭವಾದಾಗಿಂದ 2023 ರ ಜುಲೈ ವರೆಗೆ 11 ಕೋಟಿಗೂ ಹೆಚ್ಚು ರೈತರಿಗೆ 2.60 ಲಕ್ಷ ಕೋಟಿ ರೂ.ಗಳನ್ನು…

Is this your new site? Log in to activate admin features and dismiss this message
ಲಾಗಿನ್