ವರ್ಗ: ಮುಕ್ತ ಆರ್ಥಿಕ ನೀತಿ

  • 13 ವರ್ಷಗಳ ನಂತರವೂ “ನಮ್ಮ ಕರೆನ್ಸಿ ಮರಣಶಯ್ಯೆಯಲ್ಲಿದೆ” !

    ಮೇ 19, 2026 ರಂದು ಅಮೆರಿಕನ್‌ ಡಾಲರ್‌ ಎದುರು ರೂಪಾಯಿ ಮೌಲ್ಯ 96.52ಕ್ಕೆ ಕುಸಿದು ಮತ್ತೊಂದು ಹೊಸ ದಾಖಲೆ ಸೃಷ್ಟಿಸಿದೆ.  2014ರ ಏಪ್ರಿಲ್ ನಲ್ಲಿ 60 ರೂ.ಗೆ ಒಂದು ಡಾಲರ್ ಸಿಗುತ್ತಿತ್ತು. ಇಂದು ಒಂದು ಡಾಲರ್ ಕೊಳ್ಳಬೇಕಾದರೆ 96 ರೂ ಕೊಡಬೇಕು. ಅಂದರೆ, ಶೇ. 60ರಷ್ಟು ಹೆಚ್ಚು ರೂಪಾಯಿ ಕೊಡಬೇಕಾಗಿದೆ ಏಕೆ? ಡಾಲರ್‌ ಎದುರು ಮಾತ್ರವಲ್ಲ, ಪಾಕಿಸ್ತಾನದ ಮತ್ತು ಬಾಂಗ್ಲಾದೇಶದ ಕರೆನ್ಸಿ ಎದುರೂ ರೂಪಾಯಿ ಮೌಲ್ಯ ಕಳಕೊಂಡಿದೆ ಏಕೆ? ಈ ಪ್ರಶ್ನೆಯನ್ನು 13 ವರ್ಷಗಳ ಹಿಂದೆ ರೂಪಾಯಿ…

  • ಖಾಸಗಿಯವರಿಗೆ ಸರ್ಕಾರಿ ಗೋದಾಮುಗಳ ಆಸ್ತಿ

    ರೈತರಿಗೆ ಬೆಂಬಲ ಬೆಲೆ ಮತ್ತು ಪಡಿತರ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಕೊವಿಡ್-19 ರ ಸಾಂಕ್ರಾಮಿಕ ದಾಳಿಯ ಸಂದರ್ಭದಲ್ಲಿ ದೇಶದ ಜನತೆ ತೀವ್ರ ಆಹಾರದ ಬಿಕ್ಕಟ್ಟನ್ನು ಎದುರಿಸುತ್ತಿದ್ದಾಗ, ಜನರ ಹಸಿವು ನೀಗಿಸಲು ನೆರವಿಗೆ ಬಂದಿದ್ದೇ ಸರ್ಕಾರಿ ಗೋದಾಮುಗಳಲ್ಲಿ ಶೇಖರಿಸಿಟ್ಟಿದ್ದ ಲಕ್ಷಾಂತರ ಟನ್ ಆಹಾರ ಧಾನ್ಯಗಳು. ಬಡತನ ರೇಖೆಯ ಕೆಳಗಿನ ಕುಟುಂಬಗಳಿಗೆ ನಿರ್ಧಿಷ್ಟ ಪ್ರಮಾಣದ ಧಾನ್ಯಗಳನ್ನು ಉಚಿತವಾಗಿ ವಿತರಣೆ ಮಾಡಲು ಈ ಸರ್ಕಾರಿ ಗೋದಾಮುಗಳ ಶೇಖರಣಾ ವ್ಯವಸ್ಥೆ ಕಾರಣ. ಆಹಾರ ಧಾನ್ಯಗಳ ಬೆಲೆ ಏರಿಕೆಗೆ ಕಡಿವಾಣ ಹಾಕಲೂ,…

  • ಮೆಟ್ರೋ ರೈಲು ಪ್ರಯಾಣ ದರವೂ, ಮುಕ್ತ ಆರ್ಥಿಕ ನೀತಿಯೂ

    “ನಮ್ಮ ಮೆಟ್ರೋ ದರ ಏರಿಕೆ ನಿರ್ಧಾರಕ್ಕೆ ಬಿಎಂಆರ್‌ ಸಿಎಲ್‌ ಬ್ರೇಕ್‌, ಸಂಸದ ತೇಜಸ್ವಿ ಸೂರ್ಯ ಮತ್ತಷ್ಟು ಪ್ರಕರ” ಇದು ಫೆಬ್ರವರಿ 9, 2026ರ ಪತ್ರಿಕೆಯೊಂದರ ತಲೆಬರಹ. ದರ ಏರಿಕೆಯಲ್ಲಿ ನಮ್ಮ ಪಾಲು ಏನಿಲ್ಲ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಇತ್ತೀಚಿನ ದರ ಏರಿಕೆಯನ್ನು ತಾತ್ಕಾಲಿಕವಾಗಿ (ʻತಾತ್ಕಾಲಿಕʼ ಎಂಬುದನ್ನು ಗಮನಿಸಿ) ತಡೆಯುವಲ್ಲಿ ಕೇಂದ್ರ ಸರ್ಕಾರದ ಪಾತ್ರವಿದೆ ಎಂದೂ ತೇಜಸ್ವಿ ಸೂರ್ಯ ಹೇಳಿದ್ದಾರೆ ಎಂದು ವರದಿಯಾಗಿದೆ. ಮೆಟ್ರೋ ದರ ಏರಿಕೆ ತಡೆಯಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಿದೆ ಎನ್ನುವುದಾದರೆ, ಕಳೆದ ವರ್ಷ…

  • ಅಡುಗೆ ಅನಿಲದ ಬೆಲೆ ಯಾಕಿಷ್ಟು ದುಬಾರಿ?

    ಅಡುಗೆ ಅನಿಲದ ಬೆಲೆ ಏಕಿಷ್ಟು ದುಬಾರಿ? ಬೆಲೆ ಏರಿಕೆಗೆ ಮುಕ್ತ ಆರ್ಥಿಕ ನೀತಿ ಹೇಗೆ ಕಾರಣ? ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಸೇರಿದಂತೆ ಈ ಹಿಂದಿನ ಸರ್ಕಾರಗಳು ಗೃಹಬಳಕೆಯ ಅಡುಗೆ ಅನಿಲದ ಮೇಲಿನ ಸಬ್ಸಿಡಿ ತೆಗೆಯಲು ಏನೆಲ್ಲಾ ತಂತ್ರಗಳನ್ನು ಮಾಡಿದವು? ಭಾರತ ಸರ್ಕಾರದ ಅಂತಿಮ ಗುರಿ ಏನು? ಇವೆಲ್ಲವುಗಳ ಕುರಿತು ಒಂದು ವಿಶ್ಲೇಷಣಾ ವರದಿ ಇಲ್ಲಿದೆ. *ಡಬ್ಲ್ಯೂಟಿಒ ಒಪ್ಪಂದ ಜಾರಿಮಾಡಲು ವಿಶ್ವ ವ್ಯಾಪಾರ ಸಂಘಟನೆ (WTO)ಯ ಜೊತೆ 1991 ರಲ್ಲಿ ಭಾರತ ಸರ್ಕಾರ ಮಾಡಿಕೊಂಡ ಒಪ್ಪಂದದ ಒಂದು ಅಂಶ ಅಡುಗೆ…

  • ಬಹುರಾಷ್ಟ್ರೀಯ ಕಂಪನಿಗಳ ಹಿಡಿತದೆಡೆಗೆ ಟ್ಯಾಕ್ಸಿ ಸೇವೆ

    (ನಾನು ಟ್ಯಾಕ್ಸಿ ಚಾಲಕನಾಗಿದ್ದ ನವೆಂಬರ್ 21, 2014ರಂದು ನನ್ನ ಫೇಸ್ಬುಕ್ ಬರಹ) OLA!!! Nimma Snehitharannu Ola ge refer maadi 2014 model car annu attach maadi haagu referral incentives amount Rs 10,000 hanavannu attach madidha thakshana padeyiri.Hechina mahithigagi samparkisi.Anjali, Shiv Kumar or Siddharth.Contact no. 080-69000158 OLA ಎಂಬ ಹೆಸರಿನ ಟ್ರಾವಲ್ ಏಜೆನ್ಸಿಯಿಂದ ಹೀಗೊಂದು ಮೆಸೇಜ್ ನನ್ನ ಸ್ನೇಹಿತನ ಮೊಬೈಲ್ ಗೆ ಬಂತು. ಮೆಸೇಜ್ ನೋಡಿ…

  • ಪ್ರಧಾನ್ ಮಂತ್ರಿ ಜನ್ ಧನ್ ಯೋಜನೆ

    ಹಾಲು ಕರೆಯಲು ಪಾತ್ರೆ ಬಂತು, ಹಾಲು ಕೊಡುವ ಹಸುವೇ ಇಲ್ಲ! ‘ಭಾರತದ ಕಟ್ಟಕಡೆಯ ನಾಗರಿಕನಿಗೂ ಆರ್ಥಿಕ ಸೇವೆ ಸಿಗುವಂತಾಗಲು ಮತ್ತು ದೇಶದ ಆರ್ಥಿಕ ವಾಹಿನಿಯಲ್ಲಿ ಪಾಲ್ಗೊಳ್ಳುವಂತೆ ಮಾಡುವ ಸಲುವಾಗಿ’ ಎಂಬ ಘೋಷಣೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ‘ಪ್ರಧಾನ ಮಂತ್ರಿ ಜನ್ ಧನ್ ಯೋಜನೆ’ಯನ್ನು ಆಗಸ್ಟ್ 15, 2014 ರಂದು  ಘೋಷಿಸಿದರು, ಆಗಸ್ಟ್ 24, 2014 ರಂದು ಇದು ಜಾರಿಗೆ ಬಂತು. ಪ್ರಧಾನ್ ಮಂತ್ರಿ ಜನ್ ಧನ್ ಯೋಜನೆ ಜಾರಿಗೆ ತರುವ ಮೂಲಕ ದೇಶದ ಎಲ್ಲಾ ಬಡವರೂ ಬ್ಯಾಂಕ್…

  • ‘ಕಿಸಾನ್ ಸಮ್ಮಾನ್’ ಮರೆಯಲ್ಲಿವೆ ಮುಕ್ತ ಮಾರುಕಟ್ಟೆ ವ್ಯವಸ್ಥೆಯ ಜಾರಿಗೆ ಉನ್ನಾರಗಳು

    “ನರೇಂದ್ರ ಮೋದಿಯವರು ‘ಕಿಸಾನ್ ಸಮ್ಮಾನ್’ ಯೋಜನೆಯ ಮೂಲಕ ರೈತರ ಖಾತೆಗೆ ಪ್ರತಿ ವರ್ಷ 6,000 ರೂ. ಹಾಕುತ್ತಿದ್ದಾರೆ. ಇದರಿಂದ ರೈತರ ಆದಾಯ ಹೆಚ್ಚಾಗಿದೆ. ಇದು ರೈತರ ಆರ್ಥಿಕ ಅಗತ್ಯಗಳನ್ನು ಪೂರೈಸಲು ಕಾರಣವಾಗಿದೆ. ರೈತರಿಗೆ ವರ್ಷಕ್ಕೆ 60 ಸಾವಿರ ಕೋಟಿ ರೂಪಾಯಿಗಳನ್ನು ಮೋದಿ ಸರ್ಕಾರ ಕೊಡುತ್ತಿದೆ. 2022-23 ರಲ್ಲಿ ಒಟ್ಟು ರೂ. 58,201.85 ಕೋಟಿಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಗಿದೆ. ಯೋಜನೆ ಪ್ರಾರಂಭವಾದಾಗಿಂದ 2023 ರ ಜುಲೈ ವರೆಗೆ 11 ಕೋಟಿಗೂ ಹೆಚ್ಚು ರೈತರಿಗೆ 2.60 ಲಕ್ಷ ಕೋಟಿ ರೂ.ಗಳನ್ನು…

  • ಉಬರ್ ಬಸ್ಸುಗಳು ಬೆಂಗಳೂರಿಗೂ ಬರಲಿವೆ; ಇನ್ನೆಷ್ಟು ದಿನ ಉಳಿಯಲಿವೆ ಬಿಎಂಟಿಸಿ ಬಸ್ಸುಗಳು?

    ಒಂದು ವರ್ಷದ ಹಿಂದೆ ಕೊಲ್ಕತ್ತಾದಲ್ಲಿ ಬಸ್ ಸೇವೆಗೆ ಇಳಿದಿದ್ದ ‘ಉಬರ್’ ಅಪ್ಲಿಕೇಶನ್ಈಗ ದೆಹಲಿ ಪ್ರೀಮಿಯಂ ಬಸ್ಸುಗಳ ಯೋಜನೆಯಡಿಯಲ್ಲಿ ಬಸ್ಸುಗಳನ್ನು ನಿರ್ವಹಿಸಲು ದೆಹಲಿ ಸಾರಿಗೆ ಇಲಾಖೆಯಿಂದ ಅಗ್ರಿಗೇಟರ್ ಪರವಾನಗಿ (aggregator license) ಯನ್ನು ಪಡೆದುಕೊಂಡಿದೆ. ಬೆಂಗಳೂರು ಮತ್ತು ಹೈದಾರಾಬಾದ್ ನಂತಹ ನಗರಗಳಲ್ಲಿಯೂ ಕಾರ್ಯಾಚರಣೆ ನಡೆಸಲು ಉಬರ್ ಸಿದ್ದತೆ ನಡೆಸುತ್ತಿದೆ. ಈ ಮೂಲಕ  ಇಡೀ ರಸ್ತೆ ಸಾರಿಗೆ ವಲಯವನ್ನೇ ನುಂಗಿಹಾಕುವಲ್ಲಿ ವಿದೇಶಿ ಮತ್ತು ಸ್ವದೇಶಿ ಖಾಸಗಿ ಅಗ್ರಿಗೇಟರ್ ಕಂಪನಿಗಳು ದಾಪುಗಾಲು ಹಾಕುತ್ತಿವೆ. ಕ್ರಮೇಣವಾಗಿ, ಸರ್ಕಾರ ಸಾರ್ವಜನಿಕ ಸಾರಿಗೆ ಸೇವೆ ಒದಗಿಸುವ…

Is this your new site? Log in to activate admin features and dismiss this message
ಲಾಗಿನ್