ವರ್ಗ: ರಾಜಕೀಯ

  • ಚೀನಾದ ಮೇಲಿನ ದ್ವೇಷ ಸಾಧನೆ ವ್ಯಾಪಾರದಲ್ಲಿ ಲಾಭ ಸಂಪಾದನೆ

    ಚೀನಾ ದೇಶ ಭಾರತದ ಪರಮ ಶತ್ರು ಎಂದು ಬಿಜೆಪಿ ಮತ್ತು ಸಂಘಪರಿವಾರವು ಜನರ ನಡುವೆ ಪ್ರಚಾರ ಮಾಡುತ್ತಲೇ, ಚೀನಾದ ಜೊತೆಗಿನ ವ್ಯಾಪಾರ ವಹಿವಾಟು ನಡೆಯುವಂತೆ ನೋಡಿಕೊಂಡಿದ್ದಾರೆ. ಚೀನಾದಲ್ಲಿ ಭಾರತದ ಉತ್ಪನ್ನಗಳ ಮಾರಾಟ ಮತ್ತು ಭಾರತದಲ್ಲಿ ಚೀನಾ ಉತ್ಪನ್ನಗಳ ಮಾರಾಟ ನಡೆಯುತ್ತಿವೆ. ಭಾರತದ ಹಲವು ಉದ್ಯಮಗಳಲ್ಲಿ ಚೀನಾ ಮತ್ತು ಭಾರತದ ಬಂಡವಾಳಗಾರರ ಸಹಭಾಗಿತ್ವವಿದೆ. ಚೀನಾದಲ್ಲಿ ಭಾರತದ ಹೂಡಿಕೆ, ಭಾರತದಲ್ಲಿ ಚೀನಾ ಹೂಡಿಕೆಗಳಿವೆ. ಒಮ್ಮೆ ಬಾಬಾ ರಾಮ್ ದೇವ್ ‘ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಿ’ ಎಂದು ಭಾರತೀಯರಿಗೆ ಕರೆಕೊಟ್ಟಿದ್ದರು. ಅದಾದ ಒಂದೆರೆಡು…

  • ಬೆಂಗಳೂರಿನಲ್ಲಿ 16.6 ಕಿಮೀ ಉದ್ದದ ಸುರಂಗ ಮಾರ್ಗ ಬಳಕೆಗೆ 330 ರೂಪಾಯಿ ಟೋಲ್!!

    ಮೂಲಭೂತ ಸೌಕರ್ಯ ಅಭಿವೃದ್ಧಿ ಎಂದರೆ ಖಾಸಗಿ ಸಹಭಾಗಿತ್ವವೇ ಅಗಿರಬೇಕೆ? ಎಲ್ಲರೂ ಸುಂಕ, ಟೋಲ್, ಸೇವಾ ಶುಲ್ಕ ಹೆಸರಿನಲ್ಲಿ ಹಣ ಕೊಟ್ಟು ಮೂಲಸೌಕರ್ಯಗಳ ಪ್ರಯೋಜನಗಳನ್ನು ಪಡೆಯಬೇಕೇ? ಮೂಲಭೂತ ಸೌಕರ್ಯ ಎಂದರೆ ಹಣವುಳ್ಳವರಿಗೆ ಮಾಡುವ ಸೌಕರ್ಯಗಳೇ? ಶಿಕ್ಷಣ, ಆರೋಗ್ಯ ರಕ್ಷಣೆ ವ್ಯಾಪಾರದ ಸರಕುಗಳಂತಾಬೇಕೆ? ರಾಜಸ್ವ ಸಂಗ್ರಹ ಮತ್ತು ಹೂಡಿಕೆ ಹೆಚ್ಚಿಸಲು ಸಾರ್ವಜನಿಕ ಆಸ್ತಿಗಳ ನಗದೀಕರಣ ಮಾಡಬೇಕೆ? ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಜೆಟ್ ಗಳನ್ನು ಅವಲೋಕಿಸಿದರೆ ಇಂತಹ ಪ್ರಶ್ನೆಗಳು ಮೂಡುತ್ತವೆ.  ಕರ್ನಾಟಕ ರಾಜ್ಯ ಬಜೆಟ್ ಪ್ರಸ್ತಾಪದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಯೋಜನೆಗಳ…

  • ಕ್ಷೇತ್ರ ಮರುವಿಂಗಡಣೆ: ದಕ್ಷಿಣದ ಕ್ಷೇತ್ರಗಳನ್ನು ಕಡಿಮೆ ಮಾಡುವುದು ಒಕ್ಕೂಟ ವ್ಯವಸ್ಥೆಯ ಮೇಲಿನ ದಾಳಿ

    Image Credit: NDTV ಭಾರತದ ಒಕ್ಕೂಟವು ಜಟಿಲ ಸಮಸ್ಯೆಯನ್ನು ಎದುರಿಸುತ್ತಿದೆ. 2026ರಲ್ಲಿ ಜನಸಂಖ್ಯೆಯ ಆಧಾರದ ಮೇಲೆ ಸಂಸದೀಯ ಸ್ಥಾನಗಳ ಪುನರ್ ವಿಂಗಡಣೆ ಪ್ರಕ್ರಿಯೆಯು ‘ದಕ್ಷಿಣದವರ ತಲೆಯ ಮೇಲೆ ತೂಗುಗತ್ತಿ’ಎಂದು ತಮಿಳುನಾಡು ಮುಖ್ಯಮಂತ್ರಿ ಎಚ್ಚರಿಸಿದ್ದಾರೆ. ಉತ್ತರದ ರಾಜ್ಯಗಳಲ್ಲಿನ ಸ್ಥಾನಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತದೆ. ಆದರೆ, ದಕ್ಷಿಣ ರಾಜ್ಯಗಳಲ್ಲಿ ಸ್ಥಾನಗಳ ಸಂಖ್ಯೆ ಕಡಿಮೆಯಾಗುತ್ತದೆ ಅಥವಾ ಅದು ಹೆಚ್ಚಾದರೂ ಅವುಗಳ ಪಾಲು ಹೆಚ್ಚಾಗಬೇಕಾದಷ್ಟು ಹೆಚ್ಚಾಗುವುದಿಲ್ಲ ಎಂದು ದಕ್ಷಿಣ ಭಾರತದ ರಾಜ್ಯಗಳ ಮುಖ್ಯಮಂತ್ರಿಗಳು ಟೀಕಿಸುತ್ತಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ದಕ್ಷಿಣ ರಾಜ್ಯಗಳನ್ನು ಮೌನಗೊಳಿಸಲು…

  • ರಾಜಕೀಯ ಪಕ್ಷಗಳ ಚುನಾವಣಾ ಆಶ್ವಾಸನೆಗಳು: ಈಡೇರಿಕೆಗೆ ದಾರಿ ಯಾವುದಯ್ಯ?

    ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಗ್ಯಾರೆಂಟಿ ಯೋಜನೆಗಳನ್ನು ಮುಂದುವರಿಸಲು ಹಣಕಾಸಿನ ಕೊರತೆ ಎದುರಿಸುತ್ತಿದೆ. ಇದು ಅನಿರೀಕ್ಷಿತವಾಗಿ ಎದುರಾದ ಸಮಸ್ಯೆಯೇನೂ ಅಲ್ಲ. ಮುಕ್ತ ಆರ್ಥಿಕ ನೀತಿಗಳನ್ನು ಒಪ್ಪಿ, ಅವುಗಳನ್ನು ಜಾರಿಗೆ ತರುತ್ತಿರುವ ಮತ್ತು  ತಾವು ಜಾರಿಗೆ ತರುವ ಗ್ಯಾರೆಂಟಿ ಯೋಜನೆಗಳಿಗೆ ಅವಶ್ಯಕವಾದ ಸಂಪನ್ಮೂಲ ಕ್ರೋಡೀಕರಣಕ್ಕೆ ಮಾರ್ಗ ಕಂಡುಕೊಳ್ಳದೆ, ಕೇವಲ ಭರವಸೆಗಳನ್ನು ಈಡೇರಿಸಲು ಹೊರಟರೆ ಯಾವುದೇ ಸರ್ಕಾರಕ್ಕೂ ಇಂಥದೇ ಸಂಕಷ್ಟ ಎದುರಾಗುತ್ತದೆ. ಈ ಸಂಬಂಧ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ  ‘ಜನಶಕ್ತಿ ಕನ್ನಡ ವಾರಪತ್ರಿಕೆ’ಯ 2023ರ ಫೆಬ್ರವರಿಯಲ್ಲಿ (8ನೇ ಸಂಚಿಕೆ)…

  • ‘ಒಂದು ರಾಷ್ಟ್ರ, ಒಂದು ಚುನಾವಣೆ’: ಪರ-ವಿರೋಧ ಚರ್ಚೆಗಳ ಸುತ್ತ

    ಬಹಳಷ್ಟು ವಿರೋಧದ ನಡುವೆಯೂ, ದೇಶದಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದಕ್ಕಾಗಿ ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರವು ಭಾರತದ ಸಂವಿಧಾನಕ್ಕೆ ತಿದ್ದುಪಡಿ ತರುವ, ‘ಸಂವಿಧಾನ (129ನೇ ತಿದ್ದುಪಡಿ) ಮಸೂದೆ–2024’ ಅನ್ನು ಲೊಕಸಭೆಯಲ್ಲಿ ಮಂಡಿಸಿದೆ. ಈ ಮಸೂದೆಯ ಮೂಲಕ ಕೇಂದ್ರ ಸರ್ಕಾರವು ಸಂವಿಧಾನಕ್ಕೆ ತಿದ್ದುಪಡಿ ಮಾಡಲು ಮುಂದಡಿ ಇಟ್ಟಿದೆ. ‘ಒಂದು ರಾಷ್ಟ್ರ, ಒಂದು ಚುನಾವಣೆ’ ಪರ ಮತ್ತು ವಿರೋಧ ಚರ್ಚೆಗಳು ಎಲ್ಲೆಡೆ ನಡೆಯುತ್ತಿವೆ. ಈ ಚರ್ಚೆಯಲ್ಲಿನ ಕೆಲವೊಂದು ವಾದಗಳ ಸತ್ಯ ಅಸತ್ಯಗಳ ಕುರಿತು ವಿಮರ್ಶಿಸುವ ಸಣ್ಣದೊಂದು…

  • ಚನ್ನಪಟ್ಟಣದಲ್ಲಿ ಜೆಡಿಎಸ್ ಸೋಲು:

    ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಪಕ್ಷಗಳ ಬಲ ಕುಸಿದು ಕ್ರಮೇಣ ನಾಶವಾಗುತ್ತವೆ ಇತ್ತೀಚೆಗೆ ನಡೆದ ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯಲ್ಲಿ ಜನತಾ ದಳ (ಜ್ಯಾತ್ಯಾತೀತ) ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋತಿದ್ದಾರೆ. ಅದರ ನಾಯಕರು ಈ ಸೋಲಿಗೆ ಯಾವ್ಯಾವುದೋ ಕಾರಣಗಳನ್ನು ತೋರಿಸುತ್ತಿದ್ದಾರೆ. ಅವುಗಳಲ್ಲಿ ಮುಸ್ಲಿಮರು ಜೆಡಿಎಸ್ ಗೆ ಮತ ಹಾಕಲಿಲ್ಲ ಎಂಬುದೊಂದು ಕಾರಣ. ಇದು ಬಹುತೇಕ ನಿಜವೂ ಆಗಿರಬಹುದು. ಆದರೆ, ಒಮ್ಮೆ ಬಿಜೆಪಿ ಅಥವಾ ಸಂಘಪರಿವಾರದ ಜೊತೆಗೂಡಿದ, ಅದರ ಜೊತೆ ಚುನಾವಣಾ ಮೈತ್ರಿ ಮಾಡಿಕೊಂಡ ಯಾವ ಪಕ್ಷಗಳೂ ಮತ್ತಷ್ಟು ಬೆಳೆಯಲು…

  • ಸಿಪಿಐ(ಎಂ) ಸಮ್ಮೇಳನಗಳು

    ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಮೂಲಕ ಪಕ್ಷದ ರಾಜಕೀಯ ನೀತಿಗಳನ್ನು ರೂಪಿಸುವ ಮತ್ತು ನಾಯಕತ್ವವನ್ನು ಆಯ್ಕೆ ಮಾಡುವ ಪ್ರಕ್ರಿಯೆ: ಸಿಪಿಐ(ಎಂ) ತನ್ನ ಆಂತರಿಕ ಪ್ರಜಾಪ್ರಭುತ್ವವನ್ನು ಕಟ್ಟುನಿಟ್ಟಿನಿಂದ ಆಚರಿಸುವ ಒಂದು ರಾಜಕೀಯ ಪಕ್ಷ. ಇದರಲ್ಲಿ ಸಮ್ಮೇಳನಗಳು  ಪ್ರಮುಖ ಪಾತ್ರ ವಹಿಸುತ್ತವೆ. ಪ್ರತಿ 3 ವರ್ಷಗಳಿಗೊಮ್ಮೆ ನಡೆಯುವ ಪಕ್ಷದ ಮಹಾಧಿವೇಶನಕ್ಕೆ ಮೂರು ತಿಂಗಳ ಮೊದಲು ಕರಡು ರಾಜಕೀಯ ನಿರ್ಣಯವನ್ನು ಪಕ್ಷವು ಸಾರ್ವಜನಿಕಗೊಳಿಸುತ್ತದೆ. ಪಕ್ಷದ ಘಟಕಗಳು ಮತ್ತು ಸದಸ್ಯರು ಕರಡು ರಾಜಕೀಯ ನಿರ್ಣಯದ ಬಗ್ಗೆ ಪ್ರತಿಕ್ರಿಯಿಸಲು ಮತ್ತು ತಿದ್ದುಪಡಿಗಳನ್ನು ಸೂಚಿಸಲು ಅವಕಾಶ ನೀಡಲಾಗುತ್ತದೆ. ಪಕ್ಷದ…

Is this your new site? Log in to activate admin features and dismiss this message
ಲಾಗಿನ್