ಲೇಖಕ: Siddaiah C

  • ಹೈದರಾಬಾದ್ ವಿಮೋಚನೆ: ನೈಜ ಇತಿಹಾಸವನ್ನು ಅಳಿಸಲಾಗದು

    ಸಾವಿರಾರು ಜನರ ತ್ಯಾಗದಿಂದ ನಿರ್ಮಾಣಗೊಂಡ ತೆಲಂಗಾಣ ರೈತರ ಸಶಸ್ತ್ರ ಹೋರಾಟವು ಸೃಷ್ಟಿಸಿದ ಐತಿಹಾಸಿಕ ಪರಿಸ್ಥಿತಿಯಲ್ಲಿಯೇ ಹೈದರಾಬಾದ್ ಸಂಸ್ಥಾನವು ಭಾರತ ಒಕ್ಕೂಟದೊಂದಿಗೆ ವಿಲೀನಗೊಂಡಿತು.

  • ಎಲ್‌ಐಸಿ ರಕ್ಷಿಸುವುದು ಸರ್ಕಾರದ ಜವಾಬ್ದಾರಿ

    ಎಲ್‌ಐಸಿ ಕಳೆದ 70 ವರ್ಷಗಳಲ್ಲಿ ತನಗೆ ವಹಿಸಿದ ಕಾರ್ಯಭಾರವನ್ನು `ಜನರ ಹಣ ಜನರ ಕಲ್ಯಾಣಕ್ಕೆ’ ಎಂಬ ಧ್ಯೇಯವಾಕ್ಯದೊಂದಿಗೆ ಯಶಸ್ವಿಯಾಗಿಯೇ ಮಾಡಿದೆ. ಆದರೂ ಎಲ್‌ಐಸಿ ಮೇಲೆ ಖಾಸಗೀಕರಣದ ದಾಳಿಯನ್ನು ಆಳುವ ಸರಕಾರಗಳು ನಿಲ್ಲಿಸಿಲ್ಲ. ಜನರ ವಿಶ್ವಾಸದಿಂದ ಎಲ್‌ಐಸಿ ಇಂದಿಗೂ ಮಾರುಕಟ್ಟೆಯ ಮುಂಚೂಣಿ ಸಂಸ್ಥೆಯಾಗಿ ಮುಂದುವರಿದಿದೆ. ಇಂತಹ ಸಂಸ್ಥೆಯ ಷೇರುಗಳನ್ನು ಮಾರಾಟ ಮಾಡುವುದು ಸರಿಯಾದ ನೀತಿಯಲ್ಲ. ಬದಲಾಗಿ ಎಲ್‌ಐಸಿಗೆ ಹೆಚ್ಚಿನ ಸ್ವಾಯತ್ತತೆ ನೀಡಿ, ಸಂಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು. ಎಲ್‌ಐಸಿ ಬಲಗೊಂಡರೆ ಕೋಟ್ಯಂತರ ಪಾಲಿಸಿದಾರರ ವಿಮಾ ಭದ್ರತೆ ಮತ್ತಷ್ಟು ಬಲಪಡುತ್ತದೆ. ದೇಶದ…

  • ಟಿಎಂಸಿ ರಚನೆ- ಕಾಂಗ್ರೆಸ್ ನಿಂದ ಪ್ರಾದೇಶಿಕ ಅಧಿಕಾರಕ್ಕೆ ಮಮತಾ ಬ್ಯಾನರ್ಜಿ ಅವರ ಪಯಣ

    ಈ ಲೇಖನವು ತೃಣಮೂಲ ಕಾಂಗ್ರೆಸ್‌ನ ಮೂಲ ಮತ್ತು ಮಮತಾ ಬ್ಯಾನರ್ಜಿಯವರ ರಾಜಕೀಯ ಪಯಣವನ್ನು ಗುರುತಿಸುತ್ತದೆ. ಇದು ಕಾಂಗ್ರೆಸ್ ವಿಭಜನೆಯಿಂದ ಪಕ್ಷದ ಹೊರಹೊಮ್ಮವಿಕೆ, ಬಿಜೆಪಿ ಮತ್ತು ಕಾಂಗ್ರೆಸ್ ಎರಡರೊಂದಿಗಿನ ಅದರ ಮೈತ್ರಿ ಬದಲಾವಣೆಗಳು ಮತ್ತು ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಅಧಿಕಾರಕ್ಕೆ ಏರಲು ಎಡ ವಿರೋಧಿ ರಾಜಕೀಯವು ಹೇಗೆ ಅಡಿಪಾಯವಾಯಿತು ಎಂಬುದನ್ನು ಪರಿಶೀಲಿಸುತ್ತದೆ. ಕಾಂಗ್ರೆಸ್ ಪಕ್ಷದಲ್ಲಿ ಹುಟ್ಟಿಕೊಂಡಿತು ತೃಣಮೂಲ ಕಾಂಗ್ರೆಸ್ ಪಕ್ಷ (ಟಿಎಂಸಿ) ಒಂದು ಸಾಮೂಹಿಕ ಚಳುವಳಿಯಿಂದ ಅಥವಾ ಯಾವುದೇ ಸೈದ್ಧಾಂತಿಕ ಜಾಗೃತಿಯಿಂದ ಹೊರಹೊಮ್ಮಲಿಲ್ಲ. ಅದು ವೈಯಕ್ತಿಕ ಮಹತ್ವಾಕಾಂಕ್ಷೆಯಿಂದ ಹೊರಹೊಮ್ಮಿತು.…

  • ಎಸ್‌ಐಆರ್: ಕರ್ನಾಟಕದಲ್ಲಿ 70 ಲಕ್ಷ ಅರ್ಹ ಮತದಾರರು ಹಕ್ಕು ಕಳೆದುಕೊಳ್ಳುವರೇ?

    ಎಸ್‌ಐಆರ್: ಕರ್ನಾಟಕದಲ್ಲಿ 70 ಲಕ್ಷ ಅರ್ಹ ಮತದಾರರು ಹಕ್ಕು ಕಳೆದುಕೊಳ್ಳುವರೇ?

    ಕರ್ನಾಟಕದಲ್ಲಿ ಮತದಾರರ ಪಟ್ಟಿಯ ಡಿಜಿಟಲೀಕರಣದ ನಂತರ 1.08 ಕೋಟಿ  ಹೆಸರುಗಳನ್ನು ಪಟ್ಟಿಯಿಂದ ಅಳಿಸಲಾಗಿದೆ. ಬೆಂಗಳೂರು ನಗರದ 1.03 ಕೋಟಿ ಮತದಾರರಲ್ಲಿ 46.88 ಲಕ್ಷ ಜನರು ಕರಡು ಪಟ್ಟಿಯಿಂದ ಹೊರಗುಳಿದಿದ್ದಾರೆ. ರಾಜ್ಯದ ಒಟ್ಟು 5.54 ಕೋಟಿ ಮತದಾರರ ಪೈಕಿ, ಕರಡು ಪಟ್ಟಿಯಲ್ಲಿ 4.46 ಕೋಟಿ ಮತದಾರರ ಹೆಸರುಗಳಿವೆ. ಇವರಲ್ಲಿ 43,81,335 ಮತದಾರರಿಗೆ ನೋಟಿಸ್ ನೀಡಲಾಗುತ್ತದೆ. ಕರಡು ಪಟ್ಟಿಯಲ್ಲಿರುವ ಮತ್ತಷ್ಟು ಹೆಸರುಗಳನ್ನು ಪರಿಶೀಲನೆ ನಂತರ ಅಳಿಸಿಹಾಕುವ ಸಾಧ್ಯತೆಗಳೂ ಇವೆ. ರಾಜ್ಯದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರ ಸಂಖ್ಯೆ 5.30 ಕೋಟಿ. ಎಸ್‌ಐಆರ್‌…

  • ವಿದ್ಯುತ್‌ ವಿತರಣೆಯೂ ಖಾಸಗಿ ಕಂಪನಿಗೆ!!

    ಟಾಟಾ ಪವರ್ ಕಂಪನಿ ಲಿಮಿಟೆಡ್ ಕರ್ನಾಟಕದ 19 ಜಿಲ್ಲೆಗಳಲ್ಲಿ ವಿದ್ಯುತ್ ವಿತರಣೆಗೆ ಪರವಾನಗಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು, ವಿದ್ಯುತ್ ಸರಬರಾಜು ಕಂಪನಿಗಳು ರೈತರು ಮತ್ತು ವಿದ್ಯುತ್ ಕ್ಷೇತ್ರದ ಕಾರ್ಮಿಕರಿಂದ ಬಂದ ತೀವ್ರ ವಿರೋಧದ ನಂತರ, 2026ರ ಜುಲೈ 3ರಂದು ಹಿಂತೆಗೆದುಕೊಂಡಿದೆ. ಇದು ಜನತೆಗೆ ದೊರೆತಿರುವ ಸದ್ಯದ ಗೆಲುವಷ್ಟೇ ಎಂಬುದನ್ನು ಮರೆಯಬಾರದು. ಕೈಗಾರಿಕಾ ಮತ್ತು ವಾಣಿಜ್ಯ ಗ್ರಾಹಕರಿಗೆ ನಿರಂತರ ಹಾಗೂ ಸ್ಪರ್ಧಾತ್ಮಕ ದರದಲ್ಲಿ ಗುಣಮಟ್ಟದ ವಿದ್ಯುತ್ ಒದಗಿಸುವುದು ಟಾಟಾ ಪವರ್‌ ನ ಮುಖ್ಯ ಉದ್ದೇಶವಾಗಿದೆ ಎಂದು ಅದು ಹೇಳುತ್ತಿದೆಯಾದರೂ,…

  • ವಲಸೆ ಕಾರ್ಮಿಕರ ಮತದಾನದ ಹಕ್ಕುಗಳನ್ನು ಕಸಿದುಕೊಳ್ಳಲಿರುವ ಎಸ್‌ಐಆರ್‌

    ಕರ್ನಾಟಕದಲ್ಲಿ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಜೂನ್‌ 30ರಂದು ಆರಂಭವಾಗಿದೆ. ಅಂದಿನಿಂದಲೇ ಗಣತಿ ಫಾರಂ ಅನ್ನು ಮನೆಮನೆಗೆ ತಲುಪಿಸುವ ಹೊಣೆಯನ್ನು ಬಿಎಲ್‌ಒ ಗಳಿಗೆ ವಹಿಸಲಾಗಿದೆ. ಮತದಾರರು ತಮ್ಮ ಗಣತಿ ಫಾರಂ ಪಡೆದು, ಅದನ್ನು ಭರ್ತಿ ಮಾಡಿ, ಆಗಸ್ಟ್‌ 8ರ ಒಳಗೆ ಬಿಎಲ್‌ಒ ಗಳಿಗೆ ತಲುಪಿಸಬೇಕು. ಈ ಮೊದಲು ಜುಲೈ 29ರ ವರೆಗೆ ಸಮಯಾವಕಾಶ ಇತ್ತು. ಅದನ್ನು ವಿಸ್ತರಣೆ ಮಾಡಿ ಜುಲೈ 15ರಂದು ಚುನಾವಣಾ ಆಯೋಗ ಪ್ರಕಟಣೆ ಹೊರಡಿಸಿದೆ. ಆಗಸ್ಟ್‌ 8ರಂದು ಕರಡು ಮತದಾರರ ಪಟ್ಟಿ ಪ್ರಕಟಣೆ…

  • ʻಕಾಕ್ರೋಚ್‌ ಗಳುʼ ನವ ಫ್ಯಾಸಿಸಂ ಅನ್ನು ಸೋಲಿಸಬಹುದೇ?

    ವಿಡಂಬನಾತ್ಮಕ ಆನ್‌ಲೈನ್ ಸಂಘಟನೆಯಾಗಿ ಹುಟ್ಟಿಕೊಂಡ ʼಕಾಕ್ರೋಚ್‌ ಜನತಾ ಪಾರ್ಟಿʼ ಬೀದಿಗಿಳಿದು ಹೋರಾಟ ನಡೆಸುತ್ತಿದೆ. ಜೂನ್‌ 20ರಿಂದ ದೆಹಲಿಯ ಜಂತರ್‌ ಮಂತರ್‌ ನಲ್ಲಿ ಪ್ರಾರಂಭವಾದ ಅನಿರ್ಧಿಷ್ಟ ಕಾಲದ ಪ್ರತಿಭಟನೆ 7ನೇ ದಿನವೂ ಮುಂದುವರಿದಿದೆ. ಇದರಲ್ಲಿ ಸಹಸ್ರಾರು ಯುವಜನರು ಭಾಗವಹಿಸುತ್ತಿದ್ದಾರೆ. ಸಿಜೆಪಿ ಯನ್ನು “ದೇಶವನ್ನು ಒಡೆಯುವ ವಿಚ್ಛಿದ್ರಕಾರಿ ಶಕ್ತಿಗಳ ಬಿ ತಂಡ” ಎಂದು ಕೇಂದ್ರ ಸಚಿವರು ಆರೋಪಿಸುತ್ತಿದ್ದಾರೆ. ʼಕಾಕ್ರೋಚ್‌ ಗಳುʼ ರೈತರು, ಕಾರ್ಮಿಕರು ಮತ್ತು ಜನಸಾಮಾನ್ಯರ ಜೊತೆಗೂಡಿ, ದೇಶದ ಜನಸಾಮಾನ್ಯರ ನಿಜವಾದ ಸಮಸ್ಯೆಗಳಿಗೆ ಕಾರಣವಾದ ಉದಾರೀಕರಣ ನೀತಿಗಳ ವಿರುದ್ಧ ಹೋರಾಡಲು…

  • ನಮ್ಮ ರೂಪಾಯಿ ಇಂದಿಗೂ “ಮರಣಶಯ್ಯೆಯಲ್ಲಿದೆ”!

    ಮೇ 2026 ರಲ್ಲಿ ಅಮೆರಿಕನ್‌ ಡಾಲರ್‌ ಎದುರು ರೂಪಾಯಿ ಮೌಲ್ಯ 97ಕ್ಕೆ ಕುಸಿದು ಹೊಸ ದಾಖಲೆ ಸೃಷ್ಟಿಸಿತ್ತು. 18, ಸೆಪ್ಟೆಂಬರ್‌ 2026 ರಂದು 95.80 ಇತ್ತು. 2014ರ ಏಪ್ರಿಲ್ ನಲ್ಲಿ 60 ರೂ.ಗೆ ಒಂದು ಡಾಲರ್ ಸಿಗುತ್ತಿತ್ತು. ಇಂದು ಒಂದು ಡಾಲರ್ ಕೊಳ್ಳಬೇಕಾದರೆ 95.80 ರೂ ಕೊಡಬೇಕು. ಅಂದರೆ, ಶೇ. 60ರಷ್ಟು ಹೆಚ್ಚು ರೂಪಾಯಿ ಕೊಡಬೇಕಾಗಿದೆ. ಏಕೆ? ಡಾಲರ್‌ ಎದುರು ಮಾತ್ರವಲ್ಲ, ಈ ಪ್ರಶ್ನೆಯನ್ನು 13 ವರ್ಷಗಳ ಹಿಂದೆ ರೂಪಾಯಿ ಮೌಲ್ಯ ಇಳಿಕೆಯ ಬಗ್ಗೆ ತರಹೇವಾರಿ ಟಿಪ್ಪಣಿ…

  • ತಮಿಳುನಾಡು ಚುನಾವಣೆ: ಡಿಜಿಟಲ್ ಭ್ರಮೆಯಲ್ಲಿ ಸಿಲುಕಿರುವ ರಾಜಕೀಯ ಮತ್ತು ವಾಸ್ತವ!

    ತಮಿಳುನಾಡಿನ ವಿಧಾನಸಭಾ ಚುನಾವಣಾ ಪಲಿತಾಂಶ ಅಚ್ಚರಿಗೊಳಿಸಿದೆ. ಚಿತ್ರ ನಟ ಸಿ. ಜೋಸೆಫ್‌ ವಿಜಯ್‌ ಅವರ TVK ತನ್ನ ಮೊದಲ ಸ್ಪರ್ಧೆಯಲ್ಲೇ ದೊಡ್ಡ ಗೆಲುವು ಸಾಧಿಸಿದೆ. ಟಿವಿಕೆ 108 ಸ್ಥಾನಗಳನ್ನು ಗೆದ್ದು, ಇತರೆ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಿದೆ. ವಿಜಯ್‌ ಮುಖ್ಯಮಂತ್ರಿಯಾಗಿದ್ದಾರೆ. ಫೆಬ್ರವರಿ 2, 2024 ರಂದು ಪ್ರಾರಂಭವಾದ ಟಿವಿಕೆ ಪಕ್ಷಕ್ಕೆ ಇದೆಲ್ಲಾ ಹೇಗೆ ಸಾಧ್ಯವಾಯಿತು? ಟಿವಿಕೆ ಆರಂಭದಿಂದಲೂ ಡಿಜಿಟಲ್ ಪ್ಲಾಟ್‌ಫಾರ್ಮ್‌ ಗಳನ್ನು ತನ್ನ ಮುಖ್ಯ ವೇದಿಕೆಯನ್ನಾಗಿ ಮಾಡಿಕೊಂಡಿದೆ. ಯುವಕರು ಮತ್ತು ಮಹಿಳೆಯರನ್ನು ಆಕರ್ಷಿಸಲು ಅಭಿಯಾನಗಳನ್ನು ವಿನ್ಯಾಸಗೊಳಿಸಲಾಗಿತ್ತು. ಡಿಎಂಕೆ…

  • ಚುನಾವಣಾಬಾಂಡ್ ಎಂಬ ಬ್ರಹ್ಮಾಂಡ ಭ್ರಷ್ಟಾಚಾರ ಮತ್ತು ಕಮ್ಯೂನಿಸ್ಟ್ ಪಕ್ಷಗಳೆಂಬ ಅಪರಂಜಿ…

    ಪಶ್ಚಿಮ ಬಂಗಾಳದಲ್ಲಿ ಸತತ ಮೂವತ್ತೈದು ವರ್ಷಗಳ ಆಡಳಿತ, ಕೇರಳದಲ್ಲಿ 1957 ರಿಂದ ಆಡಳಿತ, ತ್ರಿಪುರದಲ್ಲಿ ಸತತ ಇಪ್ಪತ್ತು ವರ್ಷಗಳ ಆಡಳಿತ, ಸ್ವಾತಂತ್ರ್ಯ ನಂತರದಲ್ಲಿ ಲೋಕಸಭೆಯ ಮೊದಲ ವಿರೋಧ ಪಕ್ಷ, ಹಲವಾರು ಮುಖ್ಯಮಂತ್ರಿಗಳು, ನೂರಾರು ಮಂತ್ರಿಗಳು, ಸಾವಿರಾರು ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ಸದಸ್ಯರು… ಆದರೂ ಈಗಲೂ ಒಂದು ಕಾರ್ಯಕ್ರಮವೋ, ಸಮ್ಮೇಳನವೋ ಮಾಡಬೇಕೆಂದರೆ ಎಡಪಕ್ಷಗಳ ಅದರಲ್ಲೂ #CPIM ಪಕ್ಷದ ಕಾರ್ಯಕರ್ತರು, ನಾಯಕರು ಬಕೇಟನ್ನೋ, ಟವಲನ್ನೋ ಹಿಡಿದು ಜನರ ಬಳಿ ಕೈಯೊಡ್ಡುತ್ತಾರೆ, ಜನತೆ ಪ್ರೀತಿಯಿಂದಲೋ, ದಾಕ್ಷಿಣ್ಯದಿಂದಲೋ ನೀಡುವ ಹಣವನ್ನು ಸಂತೋಷದಿಂದ…