ಲೇಖಕ: Siddaiah C

  • AI : ಡೇಟಾ ಯಾರದ್ದು? ಯಾರಿಗೆ ಲಾಭ?

    ಚಿತ್ರದ ಕೊಡುಗೆ: Chat GPT AI ಯಾರಿಗೆ ಸೇವೆ ಸಲ್ಲಿಸುತ್ತದೆ? ಜನರಿಗೆ? ಅಥವಾ ಕಾರ್ಪೊರೇಟ್ ಗಳಿಗೆ? ಭವಿಷ್ಯವು AI ಸಂಕೇತಗಳಲ್ಲಿಲ್ಲ, ಅದು ಅದರ ನಿಯಂತ್ರಣ ಯಾರ ಬಳಿ ಇದೆ ಎಂಬುದರಲ್ಲಿ ಅಡಗಿದೆ. ಈ ತಾಂತ್ರಿಕ ಕ್ರಾಂತಿಯು ಮಾನವ ಸಮಾಜವನ್ನು ಸಮಾನತೆಯತ್ತ ಕೊಂಡೊಯ್ಯುತ್ತದೆಯೇ? ಅಥವಾ ಸಂಪತ್ತಿನ ಕೇಂದ್ರೀಕರಣಕ್ಕೆ ಮತ್ತೊಂದು ಅಸ್ತ್ರವಾಗುತ್ತದೆಯೇ? ನಾವು ಅದನ್ನು ವಿಮೋಚನೆಗಾಗಿ ಸಾಧನವಾಗಿ ಬಳಸಿದರೆ, ಅದು ಮಾನವ ಸಾಮರ್ಥ್ಯಗಳ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ. ಅದನ್ನು ಪ್ರಾಬಲ್ಯದ ಯಂತ್ರವಾಗಿ ಬಳಸಿದರೆ, ಅದು ಅಸಮಾನತೆಗಳನ್ನು ಇನ್ನಷ್ಟು ಹೆಚ್ಚಿಸುತ್ತದೆ. ನಾವು…

  • ಭಾರತದಲ್ಲಿ ಅಂದು ʻತೈಲ ನಿಧಿʼ ಖಾತೆ ಇತ್ತು

    ಅಮೆರಿಕ- ಇಸ್ರೇಲ್‌ ಮತ್ತು ಇರಾನ್‌ ಯುದ್ಧದ ಪರಿಣಾಮ ಈಗಾಗಲೇ ಅಡುಗೆ ಅನಿಲದ ಬೆಲೆ ಹೆಚ್ಚಳವಾಗಿದೆ. ಯುದ್ದ ಮುಂದುವರೆದರೆ ಇದು ಇನ್ನೂ ಹೆಚ್ಚಾಗಬಹುದು. ಪೆಟ್ರೋಲ್‌, ಡೀಸೆಲ್‌ ಬೆಲೆಗಳೂ ಹೆಚ್ಚಾಗುವ ಆತಂಕವಿದೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ನಿಯಂತ್ರಣ ಮಾಡಲು ಸಾಧ್ಯವಿಲ್ಲವೇಕೇ? ಈ ಪ್ರಶ್ನೆಗೆ ಸಂಬಂಧಿಸಿದ ಸೀತಾರಾಂ ಯೆಚೂರಿಯವರ ಲೇಖನದ ಆಯ್ದ ಭಾಗ ಇಲ್ಲಿದೆ. (#ಆಟೋರಿಕ್ಷಾಚಾಲಕ_ಪತ್ರಿಕೆಯ 1997ರ ಆಗಸ್ಟ್‌ ಮತ್ತು ಸೆಪ್ಟೆಂಬರ್ ತಿಂಗಳ ಸಂಚಿಕೆಯಲ್ಲಿ ಪ್ರಕಟವಾದ ಲೇಖನಗಳು ಇಲ್ಲಿವೆ ) ತೈಲ ನಿಧಿ ಕೊರತೆ ಎಂದರೇನು? ಈ ಕೊರತೆ ಉಂಟಾಗಿರುವುದು ಹೇಗೆ?…

  • ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಾಗುತ್ತಿದೆಯೇ?

    Gemini AI image “ದೇಶದ ಜನಸಂಖ್ಯೆಯಲ್ಲಿ ಮುಸ್ಲಿಮರ ಪ್ರಮಾಣ 1950ರಿಂದ 2015ರ ನಡುವೆ ಶೇ.43ರಷ್ಟು ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಹಿಂದೂಗಳ ಪ್ರಮಾಣ ಶೇ. 7.8ರಷ್ಟು ಇಳಿಕೆಯಾಗಿದೆ. ಇದರಿಂದ ಮುಸ್ಲಿಮರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ ಮತ್ತು ಹಿಂದೂಗಳ ಜನಸಂಖ್ಯೆ ಭಾರಿ ಪ್ರಮಾಣದಲ್ಲಿ ಕುಸಿಯುತ್ತಿದೆ” ಎಂದು ಪ್ರಧಾನಿಯ ಆರ್ಥಿಕ ಸಲಹಾ ಸಮಿತಿಯ ಅಧಿಕಾರಿಗಳು ಸಿದ್ದಪಡಿಸಿರುವ ವರದಿ ಹೇಳಿದೆ. 2024ರ ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆಯ ಮಧ್ಯೆ ಬಿಡುಗಡೆ ಮಾಡಿರುವ ಈ ವರದಿ ಬಹಳಷ್ಟು ಅಸತ್ಯಗಳಿಂದ ಕೂಡಿದೆ. ಸಂಘಪರಿವಾರ ಮತ್ತು…

  • ʻಲ್ಯಾಂಡ್‌ ಲಾರ್ಡ್ʼ ಸಿನಿಮಾ

    ಜಾತಿವಾದ ಮತ್ತು ಊಳಿಗಮಾನ್ಯ ಪದ್ಧತಿ ಎಂಬ ಎರಡು ಶಕ್ತಿ ಸಿದ್ಧಾಂತಗಳ ಹಿಂಸಾಚಾರಕ್ಕೆ ನಲುಗಿದವರ ಕತೆ ಪ್ರೀತಿ- ಪ್ರೇಮದ ಕತೆಗಳು, ಪುರೋಹಿತಶಾಹಿ ಹಿಡಿತವಿರುವ ವ್ಯವಸ್ಥೆಯನ್ನು ಉಳಿಸಿ, ಅದನ್ನು ಮತ್ತಷ್ಟು ಬಲಿಷ್ಟಗೊಳಿಸಲು ಬೇಕಾದ ಕತೆಗಳು, ದೇವರು, ಧರ್ಮಗಳ ಬಗೆಗಿನ ಕತೆಗಳು, ಮತ್ತಷ್ಟು ಮೌಢ್ಯತೆಗಳನ್ನು ಬಿತ್ತುವ ಕತೆಗಳನ್ನು ಇಂದಿನ ಬಹುತೇಕ ಸಿನಿಮಾಗಳಲ್ಲಿ ಕಾಣುತ್ತೇವೆ. ಇದಕ್ಕೆ ಹೊರತಾಗಿ ಜಾತಿವಾದ ಮತ್ತು ಊಳಿಗಮಾನ್ಯ ಪದ್ಧತಿ ಎಂಬ ಎರಡು ಶಕ್ತಿ ಸಿದ್ಧಾಂತಗಳ ಹಿಂಸಾಚಾರಕ್ಕೆ ನಲುಗಿದವರ ಇತಿಹಾಸ ಹೊಂದಿರುವ ಕತೆಗಳನ್ನು ಸಿನಿಮಾಗಳ ಕಥಾ ವಸ್ತುಗಳನ್ನಾಗಿ ಮಾಡಿಕೊಳ್ಳುವುದು ಅಪರೂಪ…

  • ಚೆನ್ನೈನಲ್ಲಿ ಕಾರ್ಲ್ ಮಾರ್ಕ್ಸ್ ಪ್ರತಿಮೆ ಸ್ಥಾಪನೆ

    ಜ್ಞಾನ ಮಂಟಪದಲ್ಲಿ ಬೆಳಗುವ ಮಹಾನ್ ತತ್ವಜ್ಞಾನಿ ಚೆನ್ನೈನ ಹೆಗ್ಗುರುತುಗಳಲ್ಲಿ ಒಂದಾದ ಕನ್ನೆಮಾರಾ ಸಾರ್ವಜನಿಕ ಗ್ರಂಥಾಲಯ (Connemara Public Library) ಸಂಕೀರ್ಣದಲ್ಲಿ ಫೆಬ್ರವರಿ 6, 2026ರಂದು ತಮಿಳುನಾಡು ಸರ್ಕಾರವು ವಿಶ್ವ ಶ್ರಮಜೀವಿಗಳ ಮಹಾನ್ ನಾಯಕ ಕಾರ್ಲ್ ಮಾರ್ಕ್ಸ್ ಅವರ ಪ್ರತಿಮೆಯನ್ನು ಸ್ಥಾಪಿಸಿ, ಅದನ್ನು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಉದ್ಘಾಟಿಸಿದ್ದು ಒಂದು ಐತಿಹಾಸಿಕ ಘಟನೆಯಾಗಿದೆ. ತನ್ನ ತತ್ವಶಾಸ್ತ್ರಗಳಿಂದ ಜಗತ್ತನ್ನೇ ಬದಲಾಯಿಸಿದ ಒಬ್ಬ ಮಹಾನ್‌ ಪ್ರತಿಭೆಯನ್ನು ಜ್ಞಾನದ ನಿಧಿಯಾದ ಗ್ರಂಥಾಲಯ ಸಂಕೀರ್ಣದಲ್ಲಿ ಇರಿಸುವುದು ಸೂಕ್ತವಾಗಿದೆ. ಐತಿಹಾಸಿಕವಾಗಿ ಹೇಳುವುದಾದರೆ, ಈ ಪ್ರದೇಶದಲ್ಲಿ ಮಾರ್ಕ್ಸ್…

  • ʻಅಗ್ನಿಪಥ್ʼ ಯೋಜನೆಯ ಒಳ-ಹೊರಗು

    ‘ಅಗ್ನಿಪಥ್’ ಯೋಜನೆಯು ದೇಶಭಕ್ತಿ ಪ್ರೇರಿತ ಯುವಕರಿಗೆ ನಾಲ್ಕು ವರ್ಷಗಳ ಅವಧಿಗೆ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡುತ್ತದೆ ಎನ್ನುತ್ತದೆ ನರೇಂದ್ರ ಮೋದಿ ಸರ್ಕಾರ. ‘ಅಗ್ನಿಪಥ್’ ಯೋಜನೆ ತರುವ ಮೂಲಕ ಸೈನಿಕರಿಗೆ ಕಡಿಮೆ ಸಂಬಳ, ಸೇವಾ ಅವಧಿ ಕಡಿತ ಮತ್ತು ನಿವೃತ್ತಿ ನಂತರದ ಪಿಂಚಣಿಗೆ ಕತ್ತರಿ ಹಾಕಿದೆ. ಜೊತೆಗೆ ‘ಅಗ್ನಿವೀರ’ರನ್ನು ನಿರುದ್ಯೋಗಿಗಳ ದೊಡ್ಡ ಸಾಲಿನಲ್ಲಿ ನಿಲ್ಲುವಂತೆ ಮಾಡಿದೆ. ಅಗ್ನಿಪಥ್ ಮೂಲಕ ಆಯ್ಕೆಯಾಗುವ ಶೇ. 75ರಷ್ಟು ಅಗ್ನಿವೀರರಿಗೆ 1. ಸರ್ಕಾರದ ಯಾವುದೇ ಭವಿಷ್ಯ ನಿಧಿಗೆ ಕೊಡುಗೆ ನೀಡುವ ಅಗತ್ಯವಿಲ್ಲ.…

  • ವೆನೆಜುವೆಲಾದ ಮೇಲೆ ಅಮೆರಿಕ ಮಿಲಿಟರಿ ದಾಳಿ: ಪ್ರಕ್ಷುಬ್ಧ ಜಗತ್ತು

    ವೆನೆಜುವೆಲಾದ ಮೇಲೆ ಅಮೆರಿಕ ನಡೆಸಿದ ಮಿಲಿಟರಿ ದಾಳಿ ಖಂಡಿಸಿ ಜಗತ್ತಿನೆಲ್ಲಡೆ ಪ್ರತಿಭಟನೆಗಳು ಭುಗಿಲೆದ್ದಿವೆ.  ಅಮೆರಿಕದಲ್ಲೂ “ನಮ್ಮ ಹೆಸರಿನಲ್ಲಿ ಜನರನ್ನು ಕೊಲ್ಲಬೇಡಿ”, “ತೈಲಕ್ಕಾಗಿ ಯುದ್ಧ ಬೇಡ” ಮುಂತಾದ ಘೋಷಣೆಗಳನ್ನು ಹೊಂದಿರುವ ಬ್ಯಾನರ್‌ ಗಳನ್ನು ಹಿಡಿದು ಪ್ರತಿಭಟಿಸುತ್ತಿದ್ದಾರೆ. ಒಂದು ಪ್ರಜಾಪ್ರಭುತ್ವ ದೇಶದ ನಾಯಕನನ್ನು ಬಂಧಿಸಿ, ಕಣ್ಣು ಕಟ್ಟಿ ಕರೆದುಕೊಂಡು ಹೋಗುವುದು 18 ನೇ ಶತಮಾನದ ಗುಲಾಮಗಿರಿಯನ್ನು ನೆನಪಿಸುತ್ತದೆ. ಇದು ಒಬ್ಬ ವ್ಯಕ್ತಿಯಾಗಿ ಮಡುರೊಗೆ ಮಾಡಿದ ಅನ್ಯಾಯ ಮಾತ್ರವಲ್ಲ, ಇದು ಜಗತ್ತಿನ ಪ್ರತಿಯೊಂದು ಸಣ್ಣ ದೇಶಗಳ ಭದ್ರತೆಗೆ ಬೆದರಿಕೆಯಾಗಿದೆ. ಸಾಮ್ರಾಜ್ಯಶಾಹಿಯ ಈ…

  • ಆಸ್ಟ್ರೇಲಿಯಾದಲ್ಲಿ ಭಯೋತ್ಪಾದಕರ ದಾಳಿ

    ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಯಹೂದಿಗಳ ಮೇಲಿನ ಭಯೋತ್ಪಾದಕರ ದಾಳಿಯು, ಧಾರ್ಮಿಕ ದ್ವೇಷ, ಜನಾಂಗೀಯತೆ, ದ್ವೇಷ ಭಾಷಣಗಳು ಹಾಗೂ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವ ಉನ್ಮಾದದ ​​ಭಾವನೆಗಳು ಜಗತ್ತಿನಲ್ಲಿ ಏನೆಲ್ಲಾ ಅನಾಹುತ ಉಂಟುಮಾಡುತ್ತವೆ ಎಂಬುದಕ್ಕೆ ಮತ್ತೊಂದು ಸಾಕ್ಷಿಯಾಗಿದೆ. ದ್ವೇಷವು ಮತ್ತಷ್ಟು ದ್ವೇಷವನ್ನು ಹುಟ್ಟುಹಾಕುತ್ತದೆಯೇ ಹೊರತು, ಅದು ಶಾಂತಿ ಅಥವಾ ಸಾಮರಸ್ಯವನ್ನು ತರುವುದಿಲ್ಲ. ಆಸ್ಟ್ರೇಲಿಯಾದ ಸಿಡ್ನಿಯಲ್ಲಿನ ಬೊಂಡಿ ಬೀಚ್‌ನಲ್ಲಿ (Australia Bondi Beach) ತಂದೆ ಮತ್ತು ಮಗ ಯಹೂದಿಗಳ ಮೇಲೆ ಭಯೋತ್ಪಾದಕ ದಾಳಿ ನಡೆಸಿರುವುದು ಆಘಾತಕಾರಿಯಾಗಿದೆ. ಡಿಸೆಂಬರ್‌ 14ರಂದು ಭಾನುವಾರ ಬೀಚ್‌…

  • ಎಚ್ ಎಂ ಟಿ ಕಾರ್ಖಾನೆ ಮುಚ್ಚಲು ಕಾರ್ಮಿಕರು ಕಾರಣರೇ?

    ಕಾರ್ಖಾನೆಗಳು ಅನುಭವಿಸುವ ನಷ್ಟಕ್ಕೆ ಅಲ್ಲಿನ ಕಾರ್ಮಿಕರನ್ನು ಹೊಣೆ ಮಾಡುವ ಕೆಲಸ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹಾಗಾದರೆ, ಕಾರ್ಮಿಕರು ಕೆಲಸಮಾಡುವ ಯಾವುದೇ ಕಂಪನಿ ಲಾಭ ಗಳಿಸುತ್ತಿಲ್ಲವೇ? ಅದು ಖಾಸಗಿ ಕಂಪನಿ ಇರಬಹುದು, ಸಾರ್ವಜನಿಕ ಕಂಪನಿ ಇರಬಹುದು. ಕಾರ್ಮಿಕರ ಶ್ರಮವಿಲ್ಲದೇ ಲಾಭ ಗಳಿಸಲು ಸಾಧ್ಯವೇ? ವಾಚ್ ತಯ್ಯಾರಿಕಾ ಖಾಸಗೀ ಕಂಪನಿಗಳಿಂದ ಲಾಭ ಗಳಿಸಲು ಸಾಧ್ಯವೆಂದಾದರೆ, ಸಾರ್ವಜನಿಕ ಕಂಪನಿಗಳಿಂದ ಅದು ಏಕೆ ಸಾಧ್ಯವಿಲ್ಲ? ಖಾಸಗೀ ಕಾರ್ಖಾನೆಗಳ ಕಾರ್ಮಿಕರೂ ಸಂಘಟಿತರಾಗಿದ್ದಾರೆ. ಅವರೂ ತಮ್ಮ ಬೇಡಿಕೆಗಳನ್ನು ಹೋರಾಟದ ಮೂಲಕವೇ ಗಳಿಸಿಕೊಳ್ಳುತ್ತಿದ್ದಾರೆ. ಆದರೂ ಆ ಕಂಪನಿಗಳು…

  • “ಪುಕ್ಕಟೆ ಸಿಕ್ಕಿದ್ರೆ ನಂಗೊಂದು, ನಮ್ಮಪ್ಪನಿಗೂ ಒಂದಿರ್ಲಿ ಅನ್ನೋ ಮಂದಿಗೆ… ಕೆಜಿ ಅಕ್ಕಿ”

    ಪೋಟೊ ಕೊಡುಗೆ: ಹಿಂದೂಸ್ತಾನ್ ಟೈಮ್ಸ್ ʻʻಪುಕ್ಕಟೆ ಸಿಕ್ಕಿದ್ರೆ ನಂಗೊಂದು, ನಮ್ಮಪ್ಪನಿಗೂ ಒಂದಿರ್ಲಿ ಅನ್ನೋ ಮಂದಿಗೆ ರೂಪಾಯಿಗೊಂದು ಕೆಜಿ ಅಕ್ಕಿ!” ಇದು 27 ಏಪ್ರಿಲ್,2013ರ ಕನ್ನಡಪ್ರಭ ಪತ್ರಿಕೆಯಲ್ಲಿನ ‘ಬೆತ್ತಲೆ ಪ್ರಪಂಚ’ ಅಂಕಣದಲ್ಲಿ ಪ್ರತಾಪ್ ಸಿಂಹ ಬರೆದ ಲೇಖನದ ತಲೆಬರಹ. ಈ ಲೇಖನದಲ್ಲಿ, “2004ರಲ್ಲಿ ಪ್ರಧಾನಿ ಸ್ಥಾನವನ್ನು ನಿರಾಕರಿಸುವ ನಾಟಕವಾಡಿ, ರಾಷ್ಟ್ರೀಯ ಸಲಹಾ ಮಂಡಳಿ (ಎನ್ಎಸಿ) ಮೂಲಕ ಪರೋಕ್ಷವಾಗಿ ಸರ್ಕಾರದ ಕಡಿವಾಣ ಕೈಗೆತ್ತಿಕೊಂಡ ಸೋನಿಯಾ ಗಾಂಧಿ ನೇತೃತ್ವದ ಈ ಸಮಿತಿಯಲ್ಲಿ ತರ್ಲೆ ಕಮ್ಯುನಿಸ್ಟರೇ ತುಂಬಿಕೊಂಡಿದ್ದಾರೆ. ಇವರ ಸಲಹೆಯ ಫಲವೇ ನರೇಗಾ…