ಎಚ್ ಎಂ ಟಿ ಕಾರ್ಖಾನೆ ಮುಚ್ಚಲು ಕಾರ್ಮಿಕರು ಕಾರಣವಲ್ಲ

ಕಾರ್ಖಾನೆಗಳು ಅನುಭವಿಸುವ ನಷ್ಟಕ್ಕೆ ಅಲ್ಲಿನ ಕಾರ್ಮಿಕರನ್ನು ಹೊಣೆ ಮಾಡುವ ಕೆಲಸ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹಾಗಾದರೆ, ಕಾರ್ಮಿಕರು ಕೆಲಸಮಾಡುವ ಯಾವುದೇ ಕಂಪನಿ ಲಾಭ ಗಳಿಸುತ್ತಿಲ್ಲವೇ? ಅದು ಖಾಸಗಿ ಕಂಪನಿ ಇರಬಹುದು, ಸಾರ್ವಜನಿಕ ಕಂಪನಿ ಇರಬಹುದು. ಕಾರ್ಮಿಕರ ಶ್ರಮವಿಲ್ಲದೇ ಲಾಭ ಗಳಿಸಲು ಸಾಧ್ಯವೇ? ವಾಚ್ ತಯ್ಯಾರಿಕಾ ಖಾಸಗೀ ಕಂಪನಿಗಳಿಂದ ಲಾಭ ಗಳಿಸಲು ಸಾಧ್ಯವೆಂದಾದರೆ, ಸಾರ್ವಜನಿಕ ಕಂಪನಿಗಳಿಂದ ಅದು ಏಕೆ ಸಾಧ್ಯವಿಲ್ಲ? ಖಾಸಗೀ ಕಾರ್ಖಾನೆಗಳ ಕಾರ್ಮಿಕರೂ ಸಂಘಟಿತರಾಗಿದ್ದಾರೆ. ಅವರೂ ತಮ್ಮ ಬೇಡಿಕೆಗಳನ್ನು ಹೋರಾಟದ ಮೂಲಕವೇ ಗಳಿಸಿಕೊಳ್ಳುತ್ತಿದ್ದಾರೆ. ಆದರೂ ಆ ಕಂಪನಿಗಳು ಮುಚ್ಚುವುದಿಲ್ಲ.ಖಾಸಗೀ ಕಂಪನಿಗಳು, ತನ್ನ ಉತ್ಪನ್ನಗಳಿಗೆ ಸಂಬಂದಿಸಿದ ತಜ್ಞ ಅಧಿಕಾರಿಗಳನ್ನು ನೇಮಿಸಿಕೊಳ್ಳುತ್ತವೆ. ಆದರೆ, ಸರ್ಕಾರಿ ಕಂಪನಿಗಳು ರಾಜಕೀಯ ಒತ್ತಡಕ್ಕೆ ಮಣಿದು ಅಧಿಕಾರಿಗಳನ್ನು ನೇಮಿಸಿಕೊಳ್ಳುತ್ತದೆ. ಸರ್ಕಾರವೂ ಖಾಸಗೀಕರಣ ನೀತಿಯ ಕಾರಣದಿಂದ ಉದ್ದೇಶಪೂರ್ವಕವಾಗಿ ಅಂತಹ ಅಧಿಕಾರಿಗಳನ್ನೇ ನೇಮಿಸುತ್ತದೆ. ಖಾಸಗೀ ಕಂಪನಿಗಳು ತನ್ನ ಉತ್ಪನ್ನಗಳನ್ನು ಹೆಚ್ಚಿಸಿಕೊಳ್ಳಲು ಮತ್ತು ಗ್ರಾಹಕರನ್ನು ಆಕರ್ಷಿಸಲು, ಕಾಲ ಕಾಲಕ್ಕೆ ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಲೇ ಇರುತ್ತವೆ. ಸರ್ಕಾರಿ ಕಂಪನಿಗಳ ಬದ್ದತೆಯಿಲ್ಲದ ಅಧಿಕಾರಿ ವರ್ಗ, ಇಂತಹ ಯಾವುದೇ ಹೊಸ ಚಿಂತನೆಗಳನ್ನು ಮಾಡಲು ಮುಂದಾಗುವುದಿಲ್ಲ. ಮತ್ತು ಖಾಸಗೀ ಕಂಪನಿಗಳು ತಮ್ಮ ಪ್ರತಿ ಸ್ಪರ್ಧಿ ಕಂಪನಿಗಳನ್ನು ಮುಳುಗಿಸಲು ಸದಾ ಪ್ರಯತ್ನ ಮಾಡುತ್ತಿರುತ್ತವೆ. ಇಂತಹ ತಂತ್ರಗಳಿಗೆ ಮತ್ತು ಅವುಗಳು ಕೊಡುವ ಅಲ್ಪ ‘ಕಾಣಿಕೆ’ಗಳಿಗೆ ಸರ್ಕಾರಿ ಕಂಪನಿಗಳ ಅಧಿಕಾರಿಗಳು, ತಮ್ಮದೇ ಕಾರ್ಖಾನೆಗೆ ಬೀಗ ಜಡಿಯಲು ಬೇಕಾಗುವಂತಹ ವ್ಯವಸ್ಥೆ ಮಾಡಿಕೊಳ್ಳುತ್ತಿರುತ್ತಾರೆ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳದೇ ಇರುವುದು, ಹೊಸ ವಿನ್ಯಾಸ ರಚಿಸದೇ ಇರುವುದು, ಹೊಸ ಗ್ರಾಹಕರನ್ನು ಸೆಳೆಯುವ ಯಾವುದೇ ಪ್ರಯತ್ನ ಮಾಡದೇ ಇರುವುದು, ಕ್ರಮೇಣ ತನ್ನ ಉತ್ಪನ್ನಗಳ ಮಾರಾಟ ಕಡಿಮೆಯಾಗುವಂತೆ ನೋಡಿಕೊಳ್ಳುವುದು, ಮಾರಾಟ ಕಡಿಮೆಯಾಗಿರುವ ನೆಪ ಮಾಡಿ, ಉತ್ಪನ್ನ ಕಡಿತಗೊಳಿಸುವುದು, ಈ ಎಲ್ಲಾ ಕಾರಣ ನೀಡಿ ಕಾರ್ಮಿಕರ ಸೌಲಭ್ಯಗಳಿಗೆ ಕತ್ತರಿ ಹಾಕುವ ಮೂಲಕ, ಕಾರ್ಮಿಕರಿಗೆ ಕಿರುಕುಳ ಕೊಡುವುದು ಇಂತಹ ಹಲವು ಕ್ರಮಗಳಿಂದ ತಮ್ಮ ಕಾರ್ಖಾನೆ ಮುಚ್ಚಲು ಬೇಕಾದಂತಹ ಸಿದ್ದತೆ ಮಾಡಿಕೊಳ್ಳುತ್ತಾರೆ, ಕಾರ್ಮಿಕರ ಸಂಬಳ ಸವಲತ್ತು ಗಳನ್ನು ಕಡಿತಗೊಳಿಸುತ್ತಾರೆ, ಕಾರ್ಮಿಕರು ಮುಷ್ಕರಕ್ಕೆ ಇಳಿಯುವಂತಹ ಪ್ರಚೋದನಾಕಾರಿ ಕ್ರಮ ಕೈಗೊಂಡು, ಕಂಪನಿಯ ನಷ್ಟಕ್ಕೆ ಕಾರ್ಮಿಕರನ್ನು ಹೊಣೆ ಮಾಡುವುದು ನಡೆದೇ ಇದೆ.
ಇದೆಲ್ಲವನ್ನೂ ಸರ್ಕಾರ ಕಣ್ಣುಮುಚ್ಚಿ ನೋಡುತ್ತಿರುತ್ತದೆ. ದೇಶದಲ್ಲಿ ಉದಾರೀಕರಣ ಮತ್ತು ಖಾಸಗೀಕರಣ ನೀತಿ ಜಾರಿಗೆ ಬಂದ ನಂತರ, ಸಾರ್ವಜನಿಕ ಕ್ಷೇತ್ರದ ಕಂಪನಿಗಳನ್ನು ಮುಚ್ಚಲು ಅಥವಾ ಅದನ್ನು ಖಾಸಗೀಕರಣ ಮಾಡಲು ಸರ್ಕಾರ ಆತೊರೆಯುತ್ತಿರುವುದರಿಂದ, ಅವುಗಳ ಪುನಶ್ಚೇತನಕ್ಕೆ ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಬಂಡವಾಳಶಾಹಿಗಳು, ಇಂತಹ ಸಾರ್ವಜನಿಕ ಕಂಪನಿಗಳ ಆಸ್ತಿಗಳನ್ನು ಕಬಳಿಸಲು ಸದಾ ಅವಣಿಸುತ್ತಿರುತ್ತವೆ.

ಖಾಸಗೀ ಕಂಪನಿಗಳು, ತನ್ನ ಉತ್ಪನ್ನಗಳಿಗೆ ಸಂಬಂದಿಸಿದ ತಜ್ಞ ಅಧಿಕಾರಿಗಳನ್ನು ನೇಮಿಸಿಕೊಳ್ಳುತ್ತವೆ. ಆದರೆ, ಸರ್ಕಾರಿ ಕಂಪನಿಗಳು ರಾಜಕೀಯ ಒತ್ತಡಕ್ಕೆ ಮಣಿದು ಅಧಿಕಾರಿಗಳನ್ನು ನೇಮಿಸಿಕೊಳ್ಳುತ್ತದೆ. ಸರ್ಕಾರವೂ ಖಾಸಗೀಕರಣ ನೀತಿಯ ಕಾರಣದಿಂದ ಉದ್ದೇಶಪೂರ್ವಕವಾಗಿ ಅಂತಹ ಅಧಿಕಾರಿಗಳನ್ನೇ ನೇಮಿಸುತ್ತದೆ. ಖಾಸಗೀ ಕಂಪನಿಗಳು ತನ್ನ ಉತ್ಪನ್ನಗಳನ್ನು ಹೆಚ್ಚಿಸಿಕೊಳ್ಳಲು ಮತ್ತು ಗ್ರಾಹಕರನ್ನು ಆಕರ್ಷಿಸಲು, ಕಾಲ ಕಾಲಕ್ಕೆ ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಲೇ ಇರುತ್ತವೆ. ಸರ್ಕಾರಿ ಕಂಪನಿಗಳ ಬದ್ದತೆಯಿಲ್ಲದ ಅಧಿಕಾರಿ ವರ್ಗ, ಇಂತಹ ಯಾವುದೇ ಹೊಸ ಚಿಂತನೆಗಳನ್ನು ಮಾಡಲು ಮುಂದಾಗುವುದಿಲ್ಲ. ಮತ್ತು ಖಾಸಗೀ ಕಂಪನಿಗಳು ತಮ್ಮ ಪ್ರತಿ ಸ್ಪರ್ಧಿ ಕಂಪನಿಗಳನ್ನು ಮುಳುಗಿಸಲು ಸದಾ ಪ್ರಯತ್ನ ಮಾಡುತ್ತಿರುತ್ತವೆ. ಇಂತಹ ತಂತ್ರಗಳಿಗೆ ಮತ್ತು ಅವುಗಳು ಕೊಡುವ ಅಲ್ಪ ‘ಕಾಣಿಕೆ’ಗಳಿಗೆ ಸರ್ಕಾರಿ ಕಂಪನಿಗಳ ಅಧಿಕಾರಿಗಳು, ತಮ್ಮದೇ ಕಾರ್ಖಾನೆಗೆ ಬೀಗ ಜಡಿಯಲು ಬೇಕಾಗುವಂತಹ ವ್ಯವಸ್ಥೆ ಮಾಡಿಕೊಳ್ಳುತ್ತಿರುತ್ತಾರೆ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳದೇ ಇರುವುದು, ಹೊಸ ವಿನ್ಯಾಸ ರಚಿಸದೇ ಇರುವುದು, ಹೊಸ ಗ್ರಾಹಕರನ್ನು ಸೆಳೆಯುವ ಯಾವುದೇ ಪ್ರಯತ್ನ ಮಾಡದೇ ಇರುವುದು, ಕ್ರಮೇಣ ತನ್ನ ಉತ್ಪನ್ನಗಳ ಮಾರಾಟ ಕಡಿಮೆಯಾಗುವಂತೆ ನೋಡಿಕೊಳ್ಳುವುದು, ಮಾರಾಟ ಕಡಿಮೆಯಾಗಿರುವ ನೆಪ ಮಾಡಿ, ಉತ್ಪನ್ನ ಕಡಿತಗೊಳಿಸುವುದು, ಈ ಎಲ್ಲಾ ಕಾರಣ ನೀಡಿ ಕಾರ್ಮಿಕರ ಸೌಲಭ್ಯಗಳಿಗೆ ಕತ್ತರಿ ಹಾಕುವ ಮೂಲಕ, ಕಾರ್ಮಿಕರಿಗೆ ಕಿರುಕುಳ ಕೊಡುವುದು ಇಂತಹ ಹಲವು ಕ್ರಮಗಳಿಂದ ತಮ್ಮ ಕಾರ್ಖಾನೆ ಮುಚ್ಚಲು ಬೇಕಾದಂತಹ ಸಿದ್ದತೆ ಮಾಡಿಕೊಳ್ಳುತ್ತಾರೆ, ಕಾರ್ಮಿಕರ ಸಂಬಳ ಸವಲತ್ತುಗಳನ್ನು ಕಡಿತಗೊಳಿಸುತ್ತಾರೆ, ಕಾರ್ಮಿಕರು ಮುಷ್ಕರಕ್ಕೆ ಇಳಿಯುವಂತಹ ಪ್ರಚೋದನಾಕಾರಿ ಕ್ರಮ ಕೈಗೊಂಡು, ಕಂಪನಿಯ ನಷ್ಟಕ್ಕೆ ಕಾರ್ಮಿಕರನ್ನು ಹೊಣೆ ಮಾಡುವುದು ನಡೆದೇ ಇದೆ.
ಇದೆಲ್ಲವನ್ನೂ ಸರ್ಕಾರ ಕಣ್ಣುಮುಚ್ಚಿ ನೋಡುತ್ತಿರುತ್ತದೆ. ದೇಶದಲ್ಲಿ ಉದಾರೀಕರಣ ಮತ್ತು ಖಾಸಗೀಕರಣ ನೀತಿ ಜಾರಿಗೆ ಬಂದ ನಂತರ, ಸಾರ್ವಜನಿಕ ಕ್ಷೇತ್ರದ ಕಂಪನಿಗಳನ್ನು ಮುಚ್ಚಲು ಅಥವಾ ಅದನ್ನು ಖಾಸಗೀಕರಣ ಮಾಡಲು ಸರ್ಕಾರ ಆತೊರೆಯುತ್ತಿರುವುದರಿಂದ, ಅವುಗಳ ಪುನಶ್ಚೇತನಕ್ಕೆ ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಬಂಡವಾಳಶಾಹಿಗಳು, ಇಂತಹ ಸಾರ್ವಜನಿಕ ಕಂಪನಿಗಳ ಆಸ್ತಿಗಳನ್ನು ಕಬಳಿಸಲು ಸದಾ ಅವಣಿಸುತ್ತಿರುತ್ತವೆ.

ಕಾರಾಮಿಕರು ಸೋಮಾರಿಗಳೇ?

ಸರ್ಕಾರಿ ಒಡೆತನದ ಕಂಪನಿಗಳ ಕಾರ್ಮಿಕರು ಸೋಮಾರಿಗಳು ಎಂದು ಕೆಲವರು ಆರೋಪಿಸುತ್ತಾರೆ. ಆದರೆ, ಸಾರ್ವಜನಿಕ ಕಂಪನಿಗಳಾದ ಬಿ ಇ ಎಲ್, ಎಚ್ ಎ ಎಲ್, ಬಿ ಎಚ್ ಇಎಲ್, ಮತ್ತು ಕಲ್ಲಿದ್ದಲು, ಉಕ್ಕು, ತೈಲ ಸಂಸ್ಕರಣೆ ವಲಯದಲ್ಲಿರುವ ಕಂಪನಿಗಳೂ ಸೇರಿದಂತೆ ಹಲವು ಕಂಪನಿಗಳು ಹೆಚ್ಚಿನ ಲಾಭ ಗಳಿಸುತ್ತಿವೆಯಲ್ಲ? ಅವುಗಳು ಲಾಭ ಗಳಿಸಲು ಅಲ್ಲಿನ ಕಾರ್ಮಿಕರ ಶ್ರಮವೂ ಇದೆಯಲ್ಲವೇ? ಆದರೂ ಅಂತಹ ಕಂಪನಿಗಳ ಶೇರುಗಳನ್ನು ಕೇಂದ್ರ ಸರ್ಕಾರ ಮಾರಾಟ ಮಾಡಲು ಕಾರಣವೇನು ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಸರ್ಕಾರಿ ಒಡೆತನದಲ್ಲಿರುವ ವಿಮಾ ವಲಯ, ಬ್ಯಾಂಕಿಂಗ್ ವಲಯಗಳು ಹೆಚ್ಚು ಲಾಭ ಗಳಿಸುತ್ತಿದ್ದರೂ ಅವುಗಳ ಶೇರುಗಳನ್ನು ಮಾರಾಟ ಮಾಡುವ ಮತ್ತು ಆ ವಲಯಗಳನ್ನು ವಿದೇಶಿಯರಿಗೆ ಮತ್ತು ಖಾಸಗಿಯವರಿಗೆ ತೆರೆಯಲು ಸರ್ಕಾರ ಮುಂದಾಗಿದೆ. ಇಂತಹ ಸರ್ಕಾರದ ಕ್ರಮಕ್ಕೆ ಅಲ್ಲಿನ ನೌಕರರನ್ನು ಹೊಣೆ ಮಾಡಲು ಸಾಧ್ಯವೇ?

ಸಾರ್ವಜನಿಕ ಸಂಸ್ಥೆಗಳು ಮುಚ್ಚಲು ಕಾರಣ, ನಮ್ಮ ಆಳುವ ಬಂಡವಾಳಶಾಹಿ ವರ್ಗ ಅನುಸರಿಸುತ್ತಿರುವ ನೀತಿಗಳೇ ಕಾರಣ ವಿನಃ, ಅದಕ್ಕೆ ಅಲ್ಲಿನ ಕಾರ್ಮಿಕರು/ನೌಕರರು ಕಾರಣರಲ್ಲ ಎಂಬುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕೇ?

Is this your new site? Log in to activate admin features and dismiss this message
ಲಾಗಿನ್