ವರ್ಗ: ಉದ್ಯಮಿಗಳಿಗಾಗಿ

  • ವಕ್ಫ್ ಆಸ್ತಿ ವಿವಾದ: ಯಾಕಿಷ್ಟು ಗದ್ದಲ?

    ಬಿಜೆಪಿ ಹೊಸ ಹೊಸ ಕುತಂತ್ರದ ಬಲೆ ಬೀಸುವ ಮೂಲಕ ಜನರನ್ನು ಮರುಳು ಮಾಡುತ್ತಲೇ ಇರುವುದನ್ನು ನೋಡುತ್ತಲೇ ಬಂದಿದ್ದೇವೆ. ಇಂದು ವಕ್ಪ್ ಆಸ್ತಿ ವಿಷಯದಲ್ಲಿ ಮುಸ್ಲೀಮರು ಹಿಂದೂಗಳ ಆಸ್ತಿ ಕಸಿದುಕೊಳ್ಳುತ್ತಿದ್ದಾರೆ ಎಂಬ ಮತ್ತೊಂದು ಕುತಂತ್ರದ ಬಲೆ ಬೀಸಿದ್ದಾರೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಕ್ಪ್ ಬೋರ್ಡ್ ತಿದ್ದುಪಡಿ ಮಸೂದೆ ತರಲು ಮುಂದಾಗಿರುವ ಈ ಸಂದರ್ಭದಲ್ಲಿ, ಇದಕ್ಕೆ ಪೂರಕವಾಗಿ ಬಹುಸಂಖ್ಯಾತ ಸಮುದಾಯದ ಜನರ ಬೆಂಬಲ ಪಡೆಯಲು, ಕರ್ನಾಟಕದ ವಕ್ಪ್ ಮಂಡಳಿಯು ಹಿಂದೂ ರೈತರ ಮತ್ತು ಮಂದಿರಗಳ ಭೂಮಿ ಕಸಿದುಕೊಳ್ಳುತ್ತಿದೆ ಎಂದು…

  • ಶೇ. 8 ರಷ್ಟು ಕಾರ್ಪೊರೇಟ್ ತೆರಿಗೆ ಕಡಿತ

    ಸರ್ಕಾರಕ್ಕೆ ವರ್ಷವೊಂದರಲ್ಲಿ ಲಕ್ಷ ಕೋಟಿ ರೂ. ನಷ್ಟ ಮೋದಿ ಸರ್ಕಾರದ 10 ವರ್ಷಗಳ ಸಾಧನೆಗಳಲ್ಲಿ ಉದ್ಯಮಿಗಳ ಸಂಪತ್ತು ವೃದ್ಧಿಗೆ ಸಹಕರಿಸುತ್ತಿರುವುದು ಒಂದು ಬಹುದೊಡ್ಡ ಸಾಧನೆ. ಅದರಲ್ಲೊಂದು ಸಾಧನೆ ಕಾರ್ಪೊರೇಟ್ ತೆರಿಗೆ ಕಡಿತ. ಶೇ. 30 ರಷ್ಟಿದ್ದ ಕಾರ್ಪೊರೇಟ್ ತೆರಿಗೆಯನ್ನು ಶೇ. 22ಕ್ಕೆ  ಕಡಿತ ಮಾಡುವ ಮೂಲಕ ಮೋದಿ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಸರ್ಕಾರಕ್ಕೆ ಬರಬೇಕಾದ ಆದಾಯದಲ್ಲಿ ಅಂದಾಜು 4 ಲಕ್ಷ ಕೋಟಿ ರೂ. ಕಳೆದುಕೊಂಡಿದೆ. ಇದರರ್ಥ, ಇಷ್ಟು ದೊಡ್ಡ ಮೊತ್ತದ ಸಂಪತ್ತನ್ನು ಉದ್ಯಮಿಗಳ ಸಂಪತ್ತಿನ ವೃದ್ಧಿಗೆ…

  • ಸಂಪತ್ತಿನ ಅಸಮಾನತೆಯನ್ನು ಬಹಿರಂಗಪಡಿಸಿದ ಅಂಬಾನಿ ಮಗನ ಮದುವೆ

    ಪಡಿತರದ ಮೂಲಕ ತಿಂಗಳಿಗೆ 5 ಕೆಜಿ ಉಚಿತ ಧಾನ್ಯಗಳನ್ನು ಪಡೆಯುತ್ತಿರುವ 80 ಕೋಟಿ ಜನರಿರುವ ದೇಶದಲ್ಲಿ, 5,000 ಕೋಟಿ ರೂ. ವೆಚ್ಚ ಮಾಡಿ ಅಂಬಾನಿ ಕುಟುಂಬ ತನ್ನ ಮಗನ ಮದುವೆ ಮಾಡಿದೆ. ಕೆಲವರು ಇದನ್ನು ‘ಕಷ್ಟಪಟ್ಟು ಗಳಿಸಿದ ಹಣವನ್ನು ಈ ರೀತಿ ಖರ್ಚುಮಾಡುವುದು ತಪ್ಪೇನೂ ಅಲ್ಲ ಎನ್ನುತ್ತಾರೆ, ಮತ್ತೆ ಕೆಲವರು ಇದನ್ನು ಭಾರತದಲ್ಲಿ ಬೆಳೆಯುತ್ತಿರುವ ಅಸಮಾನತೆಯ ಸಂಕೇತವಾಗಿ ಕಾಣುತ್ತಾರೆ. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಕೆಲವರು ಮಾತ್ರ ಅತ್ಯಧಿಕ ಸಂಪತ್ತನ್ನು ಗಳಿಸಲು ಅವಕಾಶ ಮತ್ತು ಬಹುಸಂಖ್ಯಾತ ಜನರು ಕಡು ಬಡತನದಲ್ಲಿರಲು…

  • ಪಿಎಂ ಫಸಲ್ ಭೀಮಾ ಯೋಜನೆ: ರೈತರಿಗಿಂತ ವಿಮಾ ಕಂಪನಿಗಳಿಗೇ ಹೆಚ್ಚು ಲಾಭ

    ಕಳೆದ 10 ವರ್ಷಗಳ ಮೋದಿ ಆಡಳಿತದಲ್ಲಿ ರೂಪಿಸಿ ಜಾರಿಗೆ ತರಲಾದ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಒಂದು. ಕೃಷಿ ವಿಮಾ ಯೋಜನೆಯನ್ನು ಖಾಸಗಿ ವಿಮಾ ಕಂಪನಿಗಳಿಗೂ ತೆರೆದಿಟ್ಟಿದೆ. ಈ ಯೋಜನೆ ರೈತರ ಲಾಭಕ್ಕಿಂತ ಖಾಸಗಿ ವಿಮಾ ಕಂಪನಿಗಳಿಗೇ ಹೆಚ್ಚು ಲಾಭ ತಂದುಕೊಡುತ್ತಿದೆ. ದಾಖಲೆಗಳ ಮೇಲಷ್ಟೇ ಈ ಯೋಜನೆಯು ರೈತ ಸ್ನೇಹಿ ಎಂಬ ಚಿತ್ರವನ್ನು ಪ್ರಸ್ತುತಪಡಿಸುತ್ತದೆ. ಆದರೆ ವಾಸ್ತವದಲ್ಲಿ ಆ ರೀತಿಯಲ್ಲಿ ಇಲ್ಲ. ಇತ್ಯರ್ಥ/ಹಕ್ಕುಗಳ ಸ್ವೀಕೃತಿಯಲ್ಲಿ ವಿಳಂಬ ಮತ್ತು ತಾಂತ್ರಿಕ ದೋಷಗಳಂತಹ ಅನೇಕ ಸಮಸ್ಯೆಗಳನ್ನು…

  • ಪೇಟಿಎಂ ಕುಸಿತ: ಹೂಡಿಕೆದಾರರ 15,000 ಕೋಟಿ ರೂ. ಕಣ್ಮರೆ 

    ನರೇಂದ್ರ ಮೋದಿಯವರ 10 ವರ್ಷಗಳ ಆಡಳಿತದ ಅಂತ್ಯದಲ್ಲಿ ಮತ್ತೊಂದು ಮೆಘಾ ಹಗರಣ ಬೆಳಕಿಗೆ ಬಂದಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ ಪರವಾನಗಿಯನ್ನು ರದ್ದುಪಡಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ರಿಸರ್ವ್ ಬ್ಯಾಂಕ್ ಈಗಾಗಲೇ ಹೊಸ ಗ್ರಾಹಕರನ್ನು ಸೇರಿಸಲು ನಿರ್ಬಂಧ ಮತ್ತು ಹಾಲಿ ಗ್ರಾಹಕರಿಂದ ಹಣ ಪಡೆಯುವುದನ್ನು ನಿಷೇಧಿಸುವ ಅನೇಕ ನಿರ್ಬಂಧಗಳನ್ನು ವಿಧಿಸಿದ್ದರೆ, ಆ ಕಂಪನಿಯ ಸಂಸ್ಥಾಪಕ ಮತ್ತು ಅದರ ದೊಡ್ಡ ಷೇರುದಾರರಾಗಿರುವ ಉತ್ತರ ಪ್ರದೇಶದ ವಿಜಯ್ ಶೇಖರ್ ಶರ್ಮಾ ಅವರು ಕಂಪನಿಯ ಆಡಳಿತ ಮಂಡಳಿಗೆ ರಾಜೀನಾಮೆ ನೀಡಿದ್ದಾರೆ. ಆರ್‌ಬಿಐ ಒತ್ತಾಯದ…