ವರ್ಗ: ಉಗ್ರರ ದಾಳಿ

  • ಆಸ್ಟ್ರೇಲಿಯಾದಲ್ಲಿ ಭಯೋತ್ಪಾದಕರ ದಾಳಿ

    ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಯಹೂದಿಗಳ ಮೇಲಿನ ಭಯೋತ್ಪಾದಕರ ದಾಳಿಯು, ಧಾರ್ಮಿಕ ದ್ವೇಷ, ಜನಾಂಗೀಯತೆ, ದ್ವೇಷ ಭಾಷಣಗಳು ಹಾಗೂ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವ ಉನ್ಮಾದದ ​​ಭಾವನೆಗಳು ಜಗತ್ತಿನಲ್ಲಿ ಏನೆಲ್ಲಾ ಅನಾಹುತ ಉಂಟುಮಾಡುತ್ತವೆ ಎಂಬುದಕ್ಕೆ ಮತ್ತೊಂದು ಸಾಕ್ಷಿಯಾಗಿದೆ. ದ್ವೇಷವು ಮತ್ತಷ್ಟು ದ್ವೇಷವನ್ನು ಹುಟ್ಟುಹಾಕುತ್ತದೆಯೇ ಹೊರತು, ಅದು ಶಾಂತಿ ಅಥವಾ ಸಾಮರಸ್ಯವನ್ನು ತರುವುದಿಲ್ಲ. ಆಸ್ಟ್ರೇಲಿಯಾದ ಸಿಡ್ನಿಯಲ್ಲಿನ ಬೊಂಡಿ ಬೀಚ್‌ನಲ್ಲಿ (Australia Bondi Beach) ತಂದೆ ಮತ್ತು ಮಗ ಯಹೂದಿಗಳ ಮೇಲೆ ಭಯೋತ್ಪಾದಕ ದಾಳಿ ನಡೆಸಿರುವುದು ಆಘಾತಕಾರಿಯಾಗಿದೆ. ಡಿಸೆಂಬರ್‌ 14ರಂದು ಭಾನುವಾರ ಬೀಚ್‌…

  • ಪಹಲ್ಗಾಮ್: ರಾಷ್ಟ್ರವನ್ನೇ ಬೆಚ್ಚಿಬೀಳಿಸಿದ ಭಯೋತ್ಪಾದಕ ದಾಳಿ

    2025ರ ಏಪ್ರಿಲ್ 22ರಂದು ಭಯೋತ್ಪಾದಕರ ಕ್ರೂರ ಕೃತ್ಯದಲ್ಲಿ 26 ಪ್ರವಾಸಿಗರನ್ನು ಭಯೋತ್ಪಾದಕರು ಕ್ರೂರವಾಗಿ ಗುಂಡಿಕ್ಕಿ ಕೊಂದಿದ್ದು ರಾಷ್ಟ್ರವನ್ನೇ ಬೆಚ್ಚಿಬೀಳಿಸಿದೆ. ಭಯೋತ್ಪಾದಕರ ದಾಳಿಯನ್ನು ಖಂಡಿಸಿ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದವು. ದಾಳಿಯಲ್ಲಿ ಮಡಿದವರಿಗೆ ಮುಂಬತ್ತಿ ಬೆಳಗುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು. ಕಾಶ್ಮೀರದ ಜನರು ಈ ದಾಳಿಯನ್ನು ಖಂಡಿಸಿ ಕಣಿವೆಯಲ್ಲಿ ಬಂದ್ ನಡೆಸಿದರು. 35 ವರ್ಷಗಳಲ್ಲಿ ಮೊದಲ ಬಾರಿಗೆ ಕಾಶ್ಮೀರಿಗಳು ಭಯೋತ್ಪಾದಕ ದಾಳಿಯನ್ನು ಖಂಡಿಸಿ ಸಂಪೂರ್ಣ ಬಂದ್ ಪ್ರತಿಭಟನೆ ನಡೆಸಿದರು. ಈ ದಾಳಿಯು ಮೋದಿ ಸರ್ಕಾರದ ಭದ್ರತಾ ವೈಫಲ್ಯವನ್ನು ಎತ್ತಿ…

  • ಪುಲ್ವಾಮ ದಾಳಿ: ಉತ್ತರ ಸಿಗದ ಹಲವು ಪ್ರಶ್ನೆಗಳು

    2019ರ ಲೋಕಸಭಾ ಚುನಾವಣೆಗೆ ಕೇವಲ 3 ತಿಂಗಳು ಬಾಕಿ ಇದೆ ಎನ್ನುವಾಗ, ಜಮ್ಮು- ಕಾಶ್ಮೀರದ ಪುಲ್ವಾಮದಲ್ಲಿ ಭಯೋತ್ಪಾದಕರ ದಾಳಿ ನಡೆದು, ನಮ್ಮ 40 ಯೋಧರು ಪ್ರಾಣತೆತ್ತರು. ಈ ದಾಳಿಯ ಹೊಣೆಯನ್ನು ಮೋದಿ ಸರಕಾರವೇ ಹೊರಬೇಕಿತ್ತು. ಆದರೆ, ಸೈನಿಕರ ಸಾವನ್ನು ನಂತರದ ಲೋಕಸಭಾ ಚುನಾವಣೆಯ ಲಾಭಕ್ಕಾಗಿ ಬಿಜೆಪಿ ಮತ್ತು ಸಂಘಪರಿವಾರ ಬಳಸಿಕೊಂಡಿತು. ಅಂತಿಮವಾಗಿ, ಮೇ 2019 ರಲ್ಲಿ ನಡೆದ ಸಂಸತ್ತಿನ ಚುನಾವಣೆಯಲ್ಲಿ ಬಿಜೆಪಿ ಶೇ. 37 ಮತಗಳನ್ನಷ್ಟೇ ಪಡೆದು, ಲೋಕಸಭೆಯಲ್ಲಿ ಬಹುಮತ ಪಡೆದು ಕೇಂದ್ರದಲ್ಲಿ ಅಧಿಕಾರ ಹಿಡಿಯಿತು. ಆದರೆ,…