ವರ್ಗ: ಅವಿಭಾಗೀಕೃತ

  • ಸಾಮಾಜಿಕ ಸ್ಥಿತಿಗಳನ್ನು ಪ್ರತಿಬಿಂಬಿಸುವ ಕರೂರ್ ದುರಂತ

    ತಮಿಳುನಾಡಿನ ಕರೂರ್ ನಲ್ಲಿ ನಡೆದ ವಿಜಯ್ ಪ್ರಚಾರ ರ್ಯಾಲಿಯಲ್ಲಿ 41 ಜನರು ಸಾವನ್ನಪ್ಪಿದ ದುರಂತ ಘಟನೆಯನ್ನು ಒಂದು ಸಾಮಾನ್ಯ ಅಪಘಾತ ಎಂಬಂತೆ ನೋಡಬಾರದು. ಇದು ಚಲನಚಿತ್ರ ತಾರೆಯರನ್ನು ದೇವರಂತೆ ಪೂಜಿಸುವ ಅಭಿಮಾನಿ ಸಂಸ್ಕೃತಿಯ ಅಂತಿಮ ಅವನತಿಯನ್ನು ಬಹಿರಂಗಪಡಿಸುತ್ತದೆ. ಈ ದುರಂತ ಘಟನೆಯು ಯುವ ಪೀಳಿಗೆಯ ‘ರಾಜಕೀಯ ರಹಿತ’ ಬೆಳವಣಿಗೆಯಿಂದ ಉದ್ಭವಿಸುವ ಆಳವಾಗಿ ಬೇರೂರಿರುವ ರಚನಾತ್ಮಕ ಸಮಸ್ಯೆಗಳನ್ನು ಬೆಳಕಿಗೆ ತಂದಿದೆ. ಈ ಘಟನೆ ನಮ್ಮ ಮುಂದೆ ಒಂದು ಪ್ರಮುಖ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ರಾಜಕೀಯ ಪಕ್ಷದ ಬೆಂಬಲಿಗರು ರಾಜಕೀಯ ಪ್ರಜ್ಞೆ…

  • ಕೆನಡಾ: ಶ್ರೀಮಂತ ರಾಷ್ಟ್ರದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಜನತೆ

    ವಿಫಲ ನಾಯಕನ ನಿರ್ಗಮನ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ತಮ್ಮ ಸ್ಥಾನಕ್ಕೆ ಹಠಾತ್ ರಾಜೀನಾಮೆ ಘೋಷಿಸಿದ್ದಾರೆ. ನಮ್ಮ ದೇಶದ ಬಹುತೇಕ ಮಾಧ್ಯಮಗಳು ಈ ರಾಜೀನಾಮೆಗೆ ನಿಜವಾದ ಕಾರಣಗಳನ್ನು ಮುಚ್ಚಿಟ್ಟು ಬೇರೆಯದೇ ಕಥೆ ಕಟ್ಟಿ ಪ್ರಸಾರ ಮಾಡುತ್ತಿವೆ. ಆರ್ಥಿಕ ಅನಿಶ್ಚಿತತೆ, ಕೆನಡಾದ ಡಾಲರ್ ಮೌಲ್ಯ ಕುಸಿತ, ಹಣದುಬ್ಬರ ಹೆಚ್ಚಳ, ಅಗತ್ಯ ವಸ್ತುಗಳ ಬೆಲೆ ಹೆಚ್ಚಳ, ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ ಜನತೆ, ಇವೆಲ್ಲವೂ ಸರ್ಕಾರದ ವಿರುದ್ದದ ಜನರ ಆಕ್ರೋಶಕ್ಕೆ ಕಾರಣವಾಗಿವೆ. ಶ್ರೀಮಂತ ರಾಷ್ಟ್ರ ಕೆನಡಾದಲ್ಲಿ ಆಳುವ ಲಿಬರಲ್ ಪಕ್ಷದ ವಿರುದ್ದ…

  • ವೈಕಂ ಸತ್ಯಾಗ್ರಹ: ಸಾರ್ವಜನಿಕ ಬೀದಿಯಲ್ಲಿ ‘ಕೆಳಜಾತಿ’ ಜನರು ನಡೆದಾಡುವ ಹಕ್ಕಿಗಾಗಿ ನಡೆದ ಹೋರಾಟ

    ತಮಿಳುನಾಡು ಸರ್ಕಾರ ನೀಡುವ 2024ನೇ ಸಾಲಿನ ‘ವೈಕಂ ಪ್ರಶಸ್ತಿ’ಯನ್ನು ಹಿರಿಯ ಸಾಹಿತಿ ದೇವನೂರ ಮಹಾದೇವ ಅವರಿಗೆ ನೀಡಿದೆ. 2024ರ ಡಿಸೆಂಬರ್ 12ರಂದು ಕೇರಳದ ವೈಕಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹಾಗೂ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಏನಿದು ವೈಕಂ ಹೋರಾಟ? ಕೇರಳದ ವೈಕಂ ಎಂಬ ಸಣ್ಣ ಪಟ್ಟಣದಲ್ಲಿ ಮಹದೇವ ದೇವಸ್ಥಾನವಿದೆ. ಈ ದೇವಸ್ಥಾನದ ಬೀದಿಗಳ ಮೂಲಕ ದಲಿತರು, ಈಜವರು ಸೇರಿದಂತೆ ಹಿಂದುಳಿದ ಸಮುದಾಯಗಳ ಜನರು ನಡೆದಾಡುವುದನ್ನು ಬ್ರಾಹ್ಣಣರು ನಿಷೇಧಿಸಿದ್ದರು.…

  • Madarsa: ಮದರಸಾ ಪಾಠಶಾಲೆ -ಅದು ಅವರ ಹಕ್ಕು

    ಮದರಸಾ ಪಾಠಶಾಲೆಗಳು ಜಾತ್ಯಾತೀತ ತತ್ವಗಳಿಗೆ ವಿರುದ್ಧವಾಗಿವೆ ಎಂದು ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠ ತಳ್ಳಿಹಾಕಿದೆ. ಮುಸ್ಲಿಮರ ಶಿಕ್ಷಣ ಸಂಸ್ಥೆಗಳನ್ನು ಅನುಮಾನದಿಂದ ನೋಡುವ ಪರಿಪಾಠವಿರುವ ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ನ ಈ ತೀರ್ಪು ಮತಾಂಧರಿಗೆ ಕಪಾಳಮೋಕ್ಷವಾಗಿದೆ. ಒಂದು ನಿರ್ದಿಷ್ಟ ಧರ್ಮವು ಶಾಲೆಗಳನ್ನು ನಡೆಸಬಾರದು ಎಂದು ಪ್ರತಿಪಾದಿಸಲು ಪ್ರಾರಂಭಿಸಿದರೆ, ಅದು ಕ್ರಮೇಣ ಇತರ ಧರ್ಮಗಳು ನಡೆಸುವ ಶಾಲೆಗಳಿಗೂ ಅನ್ವಯಿಸುವ ಅಪಾಯವಿದೆ. ಹಿಂದೂ ಸಂಸ್ಥೆಗಳೂ ಶಾಲೆಗಳನ್ನು ನಡೆಸುತ್ತವೆ. ಆರ್‌ಎಸ್‌ಎಸ್ ಸರಸ್ವತಿ ಶಿಶು ವಿದ್ಯಾಮಂದಿರದಂತಹ…

  • “ಕಾಯಿರಿ, ಯೋಚಿಸಿ, ನಂತರ ಪ್ರತಿಕ್ರಿಯಿಸಿ”

    ಡಿಜಿಟಲ್  ವಂಚನೆಗಳ ಬಗ್ಗೆ ಮೋದಿಯವರ ‘ಮೂರು ಮಂತ್ರಗಳು’!! ದೇಶದಲ್ಲಿ ಡಿಜಿಟಲ್  ವಂಚನೆಗಳು ಹೆಗ್ಗಿಲ್ಲದೆ ನಡೆಯುತ್ತಿವೆ. ಲಕ್ಷಾಂತರ ಜನರು ತಮ್ಮ ಹಣ  ಹಾಗೂ ನೆಮ್ಮದಿ ಕಳೆದುಕೊಳ್ಳುತ್ತಿದ್ದಾರೆ.  ಇಂತಹ ವಂಚನೆ ದಿನೇ ದಿನೇ ಹೆಚ್ಚುತ್ತಲೇ ಇವೆ. ಸೈಬರ್ ಅಪರಾಧಿಗಳು  ಈ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಭಾರತದಲ್ಲಿ ರೂ. 1770 ಕೋಟಿವರೆಗೆ ವಂಚಿಸಿದ್ದಾರೆ. ದಿನವೊಂದರಲ್ಲಿ ಸರಾಸರಿ 6,000 ಕ್ಕೂ ಹೆಚ್ಚು ಸೈಬರ್ ಅಪರಾಧಗಳ ದೂರುಗಳನ್ನು I4C ಸ್ವೀಕರಿಸುತ್ತಿದೆ. ಇಂತಹ ವಂಚಕರ ವಿರುದ್ದ ಕಠಿಣ ಕ್ರಮ ತೆಗೆದುಕೊಂಡು, ಡಿಜಿಟಲ್  ವಂಚನೆಯಿಂದ ಪ್ರಜೆಗಳನ್ನು…

  • ಪ್ರಧಾನ ಮಂತ್ರಿ ಕೌಶಲ ವಿಕಾಸ್ ಯೋಜನೆ

    ‘ಕೌಶಲ’ ಕೊಟ್ಟಿದ್ದೇನೆ, ಉದ್ಯೋಗ ನೀನೇ ಹುಡುಕಿಕೊಳ್ಳಿ ಆಧುನಿಕ-ದಿನದ ಮಾರುಕಟ್ಟೆ ಬೇಡಿಕೆಗಳಿಗೆ ಅನುಗುಣವಾಗಿ ನುರಿತ ಉದ್ಯೋಗಿಗಳು ಮತ್ತು ನಾಯಕರ ಅಗತ್ಯವಿದೆ. ಅಬ್ಬರದ  ಪ್ರಚಾರ ಪಡೆದಿರುವ ಮತ್ತು ಹಿಂದೆಂದೂ ಮಾಡದ ಸಾಧನೆ ಎಂದು ಬಿಂಬಿಸಿಕೊಳ್ಳಲು ಹೊರಟಿರುವ ‘ಸ್ಕಿಲ್ ಇಂಡಿಯಾ’ ಯೋಜನೆ ಇದಕ್ಕೆ ಎಷ್ಟರ ಮಟ್ಟಿಗೆ ಸಹಕಾರಿಯಾಗಿದೆ ಎಂಬುದೇ ಪ್ರಶ್ನೆ. ತರಬೇತಿ ಪಡೆದ ವ್ಯಕ್ತಿಗಳಿಗೆ ಉದ್ಯೋಗದ ಗುರಿಗಳನ್ನು ಸಾಧಿಸಲು ಸಾಧ್ಯವಾಗಬೇಕಲ್ಲವೇ? ಆದರೆ, ಇದು ಆಗುತ್ತಿಲ್ಲ. ತರಬೇತಿ ಪಡೆದ ಬಹುತೇಕ ಜನರಿಗೆ ಅಂತಹ ಕ್ಷೇತ್ರಗಳಲ್ಲಿ ಉದ್ಯೋಗಗಳೇ ಸಿಗುತ್ತಿಲ್ಲ. ಇದನ್ನು ಕಂಟ್ರೋಲರ್ ಮತ್ತು ಆಡಿಟರ್…

  • mgnrega: ನರೇಗಾ: 6 ತಿಂಗಳಲ್ಲಿ 84 ಲಕ್ಷ ಜನರನ್ನು ತೆಗೆದುಹಾಕಲಾಗಿದೆ!

    *ಆರು ತಿಂಗಳಲ್ಲಿ 84.8 ಲಕ್ಷ ಜನರನ್ನು ತೆಗೆದುಹಾಕಲಾಗಿದೆ. *2022-23 ಮತ್ತು 2023-24 ರ ಆರ್ಥಿಕ ವರ್ಷಗಳಲ್ಲಿ ಒಟ್ಟು 8 ಕೋಟಿ ಜನರನ್ನು ತೆಗೆದುಹಾಕಲಾಗಿದೆ. *ವೈಯಕ್ತಿಕ ಕೆಲಸದ ದಿನಗಳನ್ನು ಕಡಿಮೆ ಮಾಡಲಾಗಿದೆ *ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯಲ್ಲಿ ಹೆಚ್ಚಿನ ಸಮಸ್ಯೆಗಳು *ಲಿಬ್  ಟೆಕ್ ವರದಿಯಿಂದ ಬಹಿರಂಗ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಉದ್ಯೋಗ ಖಾತ್ರಿ ಯೋಜನೆ ಮೇಲೆ ದಾಳಿ ನಡೆಯುತ್ತಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA)ಯಲ್ಲಿ ಆಧಾರ್ ಆಧಾರಿತ ಪಾವತಿ ವ್ಯವಸ್ಥೆ (ABPS)…

  • ಜಾಗತಿಕ ಹಸಿವಿನ ಸೂಚ್ಯಂಕ: 127 ದೇಶಗಳಲ್ಲಿ 105ನೇ ಸ್ಥಾನದಲ್ಲಿ ಭಾರತ

    ಹತ್ತು ವರ್ಷಗಳ ತಮ್ಮ ಆಡಳಿತದಲ್ಲಿ ದೇಶ ಹಾಗಾಗಿದೆ, ಹೀಗಾಗಿದೆ ಎಂದು ಪ್ರಧಾನಿ ಮೋದಿ, ಬಿಜೆಪಿ, ಮತ್ತವರ ಮಂದಿಮಾಗದರು ದೇಶ ವಿದೇಶಗಳಲ್ಲಿ ಕೊಚ್ಚಿಕೊಳ್ಳುತ್ತಿರುವ ಸಂದರ್ಭದಲ್ಲಿ, 2024ನೇ ವರ್ಷಕ್ಕೆ ಪ್ರಕಟಿಸಿದ ಜಾಗತಿಕ ಹಸಿವಿನ ಸೂಚ್ಯಂಕ (ಗ್ಲೋಬಲ್ ಹಂಗರ್ ಇಂಡೆಕ್ಸ್- GHI)ವು ಅದೆಲ್ಲವೂ ಮಾತಿನ ಆಡಂಬರ ಎಂಬುದನ್ನು ತೋರಿಸಿದೆ. ಒಟ್ಟು 127 ದೇಶಗಳಲ್ಲಿ ಭಾರತ 105ನೇ ಸ್ಥಾನದಲ್ಲಿ ನಿಂತಿದೆ. ನೆರೆಯ ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ಮ್ಯಾನ್ಮಾರ್ ದೇಶಗಳಿಗಿಂತಲೂ ಭಾರತ ಹಿಂದುಳಿದಿದೆ. 28, ಅಕ್ಟೋಬರ್ 2024; 2024ನೇ ವರ್ಷಕ್ಕೆ ಜಾಗತಿಕ ಹಸಿವಿನ ಸೂಚ್ಯಂಕ…

  • Samsung India workers strike: ಕಾರ್ಪೊರೇಟ್ ಜಗತ್ತನ್ನು ಬೆಚ್ಚಿಬೀಳಿಸಿದ 37 ದಿನಗಳು: ಸ್ಯಾಮ್ ಸಂಗ್ ಇಂಡಿಯಾ ಕಾರ್ಮಿಕರ ಐತಿಹಾಸಿಕ ಹೋರಾಟಕ್ಕೆ ಜಯ

    ಸಂಘ ಕಟ್ಟುವ ಹಕ್ಕು ಸಂವಿಧಾನ ನೀಡಿರುವ ಮೂಲಭೂತ ಹಕ್ಕು. ಅದಕ್ಕಾಗಿ ಯಾರ ಬಳಿಯೂ ಭಿಕ್ಷೆ ಬೇಡಬೇಕಾಗಿಲ್ಲ. ಇಂದು ನಾವು ಅನುಭವಿಸುತ್ತಿರುವ ಎಂಟು ಗಂಟೆಗಳ ಕೆಲಸದ ದಿನಗಳು, ರಜಾದಿನಗಳು ಮತ್ತು ವಿಶೇಷ ಸವಲತ್ತುಗಳು ಕಾರ್ಮಿಕ ವರ್ಗದ ಹೋರಾಟ ಮತ್ತು ಅವರು ಚೆಲ್ಲಿದ ರಕ್ತದಿಂದ ಬಂದಿದೆ. ಅದನ್ನು ಎಂದಿಗೂ ಬಿಟ್ಟುಕೊಡಲು ಸಾಧ್ಯವಿಲ್ಲ ಎಂಬುದನ್ನು ಸ್ಯಾಮ್ಸಂಗ್ ಕಾರ್ಮಿಕರು ತಮ್ಮ ಹೋರಾಟದ ಮೂಲಕ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ತಮಿಳುನಾಡಿನ ಕಾಂಚೀಪುರಂನಲ್ಲಿರುವ ಸ್ಯಾಮ್‌ಸಂಗ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿರುವ ಯುವ ಕಾರ್ಮಿಕರ ದೃಢ ಸಂಕಲ್ಪ ದೇಶವೇ ತಿರುಗಿ…

  • jammu-kashmir election ಕಾಶ್ಮೀರದ ಏಕೈಕ ಕೆಂಪು ದ್ವೀಪದಲ್ಲಿ ಐದನೇ ಬಾರಿಗೆ ಮೊಹಮ್ಮದ್ ಯೂಸುಫ್ ತರಿಗಾಮಿ ಗೆಲುವು

    ಕಾಶ್ಮೀರದ ಏಕೈಕ ಕೆಂಪು ದ್ವೀಪದಲ್ಲಿ ಇಸ್ಲಾಮಿಸ್ಟ್ ಮತ್ತು ಕಮ್ಯುನಿಸ್ಟರ ನಡುವಿನ ಯುದ್ಧ ಎಂದು ಹೇಳಲಾಗುವ ದಕ್ಷಿಣ ಕಾಶ್ಮೀರದ ಕುಲ್ಗಾಮ್ ವಿಧಾನಸಭಾ ಸ್ಥಾನವು ಸಿಪಿಐ(ಎಂ) ನ ಭದ್ರಕೋಟೆಯಾಗಿದೆ. ಪಕ್ಷದ ನಾಯಕ ಮೊಹಮ್ಮದ್ ಯೂಸುಫ್ ತರಿಗಾಮಿ 1996 ರಿಂದ ಇಲ್ಲಿ ಚುನಾಯಿತರಾಗುತ್ತಿದ್ದಾರೆ. ತರಿಗಾಮಿ ಅವರು ಈಗ ಐದನೇ ಬಾರಿಗೆ ಗೆದ್ದಿದ್ದಾರೆ. ನಿಷೇಧಿತ ಜಮಾತ್-ಎ-ಇಸ್ಲಾಮಿ (ಜೆಐ) ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಸಯರ್ ಅಹ್ಮದ್ ರೇಶಿ ಅವರನ್ನು ಸೋಲಿಸುವ ಮೂಲಕ ತರಿಗಾಮಿ ಈ ಗೆಲುವು ಸಾಧಿಸಿದ್ದಾರೆ. 1996 ರಿಂದ, ಕುಲ್ಗಾಮ್ ಜಿಲ್ಲೆ ಜಮ್ಮು…

Is this your new site? Log in to activate admin features and dismiss this message
ಲಾಗಿನ್