ಪುರೋಹಿತಶಾಹಿ: ಹಾಗೆಂದರೇನು?

‘ಪುರೋಹಿತಶಾಹಿ’ ಪದ ಬಳಕೆ ಮಾಡಿದಾಗಲೆಲ್ಲಾ ಕೆಲವರು ‘ಹಾಗೆಂದರೇನು’ ಎಂದು ಖಾರವಾಗಿ ಪ್ರಶ್ನಿಸುತ್ತಾರೆ. ಅದಕ್ಕೆ ನನ್ನ ಉತ್ತರ ಹೀಗಿದೆ.
ನಾವೇ ಶ್ರೇಷ್ಠ, ನಾವು ಎಲ್ಲರಿಗಿಂತ ಬುದ್ದಿವಂತರು. ನಮ್ಮ ಧರ್ಮವೇ ಶ್ರೇಷ್ಠ, ನಾವು ನಂಬಿದ ದೇವರೇ ಸತ್ಯ, ಇತರರು ನಂಬಿರುವ ದೇವರುಗಳಿಗೆಲ್ಲಾ ನಾವು ನಂಬಿದ ದೇವರೇ ಮೂಲ. ನಮ್ಮ ಆಚರಣೆಗಳೇ ಶ್ರೇಷ್ಠ, ನಮ್ಮ ಆಹಾರ ಪದ್ದತಿಯೇ ಶ್ರೇಷ್ಠ, ಜಗತ್ತಿನ ಸೃಷ್ಟಿಯ ಬಗ್ಗೆ ನಾವು ನಂಬಿರುವುದೇ ಶ್ರೇಷ್ಠ, ಜನರ ಸಂಕಷ್ಟಗಳಿಗೆ ಗ್ರಹಗತಿಗಳೇ ಕಾರಣ, ಅಂತಹ ಗ್ರಹಗತಿಗಳಿಂದಾಗುವ ಕೆಡುಕನ್ನು ಪೂಜೆ, ಮಂತ್ರ, ಹೋಮ, ಹವನಗಳ ಮೂಲಕ ನಾವು ಸರಿಪಡಿಸಬಲ್ಲೆವು. ಬದುಕಿರುವಾಗ ಯಾವುದೇ ಕಾರ್ಯ ಮಾಡಿದರೂ ಮದುವೆ, ಶೋಬನ, ಮಗುವಿನ ಜನನ, ಮಗುವಿನ ನಾಮಕರಣ, ಭೂಮಿ ಕೊಳ್ಳುವ ಮುನ್ನ, ಮನೆ ಕಟ್ಟುವ ಮುನ್ನ, ಮನೆ ಬೀಳಿಸುವ ಮುನ್ನ ನಮ್ಮ ಸಲಹೆ ಪಡೆಯಬೇಕು. ನಮ್ಮಿಂದ ಪೂಜೆ ಮಾಡಿಸಬೇಕು. ಸತ್ತ ನಂತರವೂ ಸ್ವರ್ಗಕ್ಕೆ ಸೇರಿಸಲು ನಾವೇ ದಾರಿ ತೋರಿಸುತ್ತೇವೆ. ಸತ್ತ ನಿಮ್ಮ ಹಿರಿಯರ ಆತ್ಮಕ್ಕೆ ಶಾಂತಿ ದೊರಕಿಸಿಕೊಡುತ್ತೇವೆ. ಪ್ರತಿಯೊಬ್ಬರೂ ತಮ್ಮ ಯಾವುದೇ ಕಾರ್ಯ ಪ್ರಾರಂಭಿಸುವ ಮುನ್ನ ನಮ್ಮ ಸಲಹೆ ಪಡೆಯಬೇಕು. ನಾವು ಶುಭ ಗಳಿಗೆಯನ್ನು ನಿಗದಿಮಾಡಿಕೊಡುತ್ತೇವೆ.

ಈಗೆಲ್ಲಾ ಹೇಳುತ್ತಾ ಅದನ್ನೇ ಇತರರ ಮೇಲೂ ಏರುತ್ತಾ, ಜನರಿಂದ ಹಣ ಕಸಿಯುತ್ತಾ, ಅದನ್ನು ಒಪ್ಪದವರನ್ನು ಧರ್ಮದ್ರೋಹಿಗಳೆಂದು ಆರೋಪಿಸುತ್ತಾ, ‘ಧರ್ಮವನ್ನು ನೀನು ರಕ್ಷಿಸಿದರೆ ಧರ್ಮ ನಿನ್ನನ್ನು ರಕ್ಷಿಸುತ್ತದೆ’ ಎಂದು ನಂಬಿಸಿ ಯುವಕರ ಕೈಗೆ ಅಸ್ತ್ರ ಕೊಟ್ಟು ಕೊಲ್ಲಿಸುವ ಮಂದಿಯೇ ಪುರೋಹಿತಶಾಹಿಗಳು. ಪುರಾಣ ಕತೆಗಳಲ್ಲೂ ವೈಧಿಕರ ಮೌಡ್ಯ ಆಚರಣೆಗಳನ್ನು ಒಪ್ಪದ ಮತ್ತು ಅದಕ್ಕೆ ಅಡ್ಡಿಪಡಿಸಿದವರನ್ನು ರಾಕ್ಷಸರೆಂದು ಕರೆದು ಕೊಲ್ಲಲಾಗಿದೆ. ಬಸವಾದಿ ಶರಣರಿಗೆ, ಬುದ್ದ ಅನುಯಾಯಿಗಳಿಗೆ ಚಿತ್ರ ಹಿಂಸೆ ಮಾಡಲಾಗಿದೆ.

ಇದು ಎಲ್ಲಾ ಧರ್ಮಗಳ ಪುರೋಹಿತಶಾಹಿಗಳಿಗೂ ಅನ್ವಹಿಸುತ್ತದೆ.

Is this your new site? Log in to activate admin features and dismiss this message
ಲಾಗಿನ್