ಮಕ್ಕಳನ್ನು ಮತ್ತವರ ಪೋಷಕರನ್ನು ಬಲೆಗೆ ಬೀಳಿಸುವ RSS ಖೆಡ್ಡಾ

“….ಈ ಎಲ್ಲಾ ಅಭ್ಯಾಸಗಳನ್ನು ಮುಗಿಸಿಕೊಂಡ ಸಂಘ ಸೇವಕರನ್ನು ಈ ಮುಂದಿನ ಕೆಲಸಕಾರ್ಯಗಳಿಗೆ ಬಳಸಿಕೊಳ್ಳುತ್ತದೆ.
‘ಕೇರಳದ ಯಾವುದಾದರೂ ಕ್ರೈಸ್ತ, ಮುಸ್ಲೀಂ ಜನ ವಿಭಾಗ ಹೆಚ್ಚಿರುವ ಅಥವಾ ಅವರದ್ದೇ ಆಡಳಿತವಿರುವ ವಿದ್ಯಾಲಯದೊಳಗೆ ನುಸುಳಿಕೊಳ್ಳುವುದು. ಆ ವಿದ್ಯಾಲಯದ ಹಿರಿಯ ಪ್ರಾಥಮಿಕ ಶಾಲೆಯ ಹಾಗೂ ಹೈಸ್ಕೂಲಿನ ತರಗತಿಗಳಿಗೆ ಹೋಗಿ ಪಾಠ ಮಾಡುತ್ತಲೇ ಒಂದೊಂದು ಮಾಯಾ ವಲಯದೊಳಗೆ ಮಕ್ಕಳನ್ನು ಬೀಳಿಸುವುದು. ಪ್ರತಿಯೊಂದು ತರಗತಿಯನ್ನು ಮುಗಿಸಿ ಹೊರ ಬರುವಾಗ ಮಕ್ಕಳ ಕೈಗಳಲ್ಲಿ ಅಡ್ರೆಸ್ ಬರೆಯುವ ಫಾರ್ಮ್ ಕೊಟ್ಟು ಅದನ್ನು ಭರ್ತಿ ಮಾಡಿಕೊಂಡು ತರುವಂತೆ ಹೇಳಿ ತಮ್ಮನ್ನು ಸಂಪರ್ಕಿಸಲು ಸಾಧ್ಯವಾಗುವಂತೆ ತಮ್ಮ ಫೋನ್ ನಂಬರ್ ಕೊಡುವುದು. ಈ ಲೆಕ್ಕದ ಮಾಯಾಜಾಲದ ವಿಷಯ ಮಕ್ಕಳ ಮನೆಯನ್ನು ತಲುಪಿದರೆ ಖಂಡಿತವಾಗಿಯೂ ಪೋಷಕರು ತಮ್ಮನ್ನು ಸಂಪರ್ಕಿಸುತ್ತಾರೆ. ಅವರನ್ನು ಲಕ್ಷ್ಮಿಪೂಜೆ, ವಿದ್ಯೆ, ಗೋಪಾಲಾರ್ಚನೆ ಮುಂತಾದ ಕಾರ್ಯಕ್ರಮಗಳಿಗೆ ಆಹ್ವಾನಿಸುವುದರ ಮೂಲಕ ತಮ್ಮ ಖೆಡ್ಡಾಕ್ಕೆ ಬೀಳಿಸುವುದು. ಹೀಗೆ ಹಿಂದೂರಾಷ್ಟ್ರ ಎನ್ನುವ ಸಂಕಲ್ಪದ ಕಡೆಗೆ ಅವರುಗಳ ಮನಸ್ಸನ್ನು ತಿರುಗಿಸುವುದು.’

‘ನನ್ನ ಜೀವನದಲ್ಲಿ 500ಕ್ಕೂ ಮಿಕ್ಕಿದ ವಿದ್ಯಾಲಯಗಳಲ್ಲಿ ತರಗತಿಗಳನ್ನು ತೆಗೆದುಕೊಂಡಿದ್ದೇನೆ. ಈ ಮೊದಲು ಹೇಳಿದ ಪೂಜೆಗಳನ್ನು ಮಾಡಲು ತರಬೇತಿ ಹೊಂದಿದ ಆರೆಸ್ಸೆಸ್ ಕಾರ್ಯಕರ್ತರುಗಳಿದ್ದರು. ಆ ಪೂಜೆ ಎನ್ನುವುದು ಹೆತ್ತವರ ಆಸಕ್ತಿಗಳನ್ನು ಗುರುತಿಸಿ ಅವರು ಆಕರ್ಷಿತರಾಗುವ ರೀತಿಯಲ್ಲಿ ಇರುತ್ತದೆ. ಅಷ್ಟೊಂದು ವಿಶೇಷವಾದ ತರಬೇತಿಯನ್ನು ಸಂಘವು ಅವರಿಗೆ ಆ ವಿಚಾರದಲ್ಲಿ ನೀಡಲಾಗಿರುತ್ತದೆ. ‘ಚಾಲಕುಡಿ’ಯ ಕಾರ್ಮಲ್ ಹೈಸ್ಕೂಲಿನಿಂದ ನಾನು ಮೊದಲಿಗೆ ನನ್ನ ಗಣಿತದ ಅಧ್ಯಾಪನವನ್ನು ಪ್ರಾರಂಭಿಸಿದೆ. ಅಲ್ಲಿರುವ ಮಕ್ಕಳನ್ನು ‘ಪತಂಜಲಿ ಯೋಗ ವಿದ್ಯಾಪೀಠ’ ಸಂಘದ ಸಂಸ್ಥೆಗೆ ಕರೆದುಕೊಂಡು ಹೋಗಿ ಪೂಜೆ, ಯೋಗಗಳ ಬಗ್ಗೆ ತರಬೇತಿ ನೀಡಲಾಯಿತು. ಸುಮಾರು ಇನ್ನೂರು ಮಕ್ಕಳೂ, ಪೋಷಕರೂ ಸೇರಿದ ಆ ಕಾರ್ಯಕ್ರಮದಲ್ಲಿ ಈ ದೇಶದ ಕ್ರೈಸ್ತರು, ಮುಸ್ಲೀಮರು ದೇಶದ್ರೋಹಿಗಳು, ಅವರು ಈ ಭಾರತಾಂಬೆಯನ್ನು ಹರಿದು ಚಿಂದಿಮಾಡಲು ಬಂದವರು ಎಂದು ಹೇಳಿ ಅವರ ಯೋಚನೆಯನ್ನು ಆ ದಿಕ್ಕಿನಲ್ಲಿ ತಿರುಗುವಂತೆ ಮಾಡಲಾಯಿತು. ಮೊದಲ ಕಾರ್ಯಕ್ರಮವೇ ಬಹಳ ಯಶಸ್ವಿಯಾಯಿತು ಎಂದು ಸಂಘ ತಿಳಿಸಿತು. ಹೀಗೆ ಹಲವಾರು ನಕಲಿ ಹೆಸರಿನಲ್ಲಿ, ನಕಲಿ ಸಂಸ್ಥೆಗಳ ಹೆಸರಿನಲ್ಲಿ ಆರೆಸ್ಸೆಸ್ ತನ್ನ ‘ಹಿಂದೂರಾಷ್ಟ್ರ’ದ ಗುರಿಯನ್ನು ತಲುಪಲು ಹಲವಾರು ವಿದ್ಯಾಸಂಸ್ಥೆಗಳಲ್ಲಿ ನುಸುಳಿಕೊಂಡು ಕಾರ್ಯ ನಿರ್ವಹಿಸುವ ವ್ಯವಸ್ಥೆ ಮಾಡಿದೆ.
‘ಮರ್ಯಾದ ಪುರುಷನಾದ ರಾಮನ ರಾಮರಾಜ್ಯವನ್ನು ಸಫಲಗೊಳಿಸುವ ಬದಲಾಗಿ ಕಾಮದಾಹಿಗಳ, ಅಧಿಕಾರದಾಹಿಗಳ ರಾವಣರಾಜ್ಯದ ಸಫಲತೆಗಾಗಿ ಇವರ ಈ ಹೋರಾಟ, ಈ ಪ್ರಯತ್ನ. ರಾಮನನ್ನು ಸಹ ಮಾಯದ ಬಲೆಯಲ್ಲಿ ಸಿಕ್ಕಿಸಿದ ಮಾರೀಚನಾಗಿ ನಾನು ಮಾರ್ಪಾಡಾಗುತ್ತಿದ್ದೇನೆ’ ಎಂದು ನನಗೆ ಗೊತ್ತಾಗುವಷ್ಟರಲ್ಲಿ ಬಹಳಷ್ಟು ತಡವಾಗಿ ಹೋಗಿತ್ತು.”
(ಸುಧೀಶ್ ಮಿನ್ನಿ ಅವರ ‘ನರಕದ ಗರ್ಭ ಗುಡಿಯೊಳಗೆ’ ಪುಸ್ತಕದಿಂದ. ಲೇಖಕರು 5 ವರ್ಷದ ಮಗುವಾಗಿದ್ದಾಲೇ ಸಂಘದ ಸಂಪರ್ಕಕ್ಕೆ ಸೇರಿ, 24 ವರ್ಷಗಳ ಕಾಲ ಆರೆಸ್ಸೆಸ್ ನಲ್ಲಿದ್ದು ಸಂಘದ ‘ಪ್ರಚಾರಕ್’ ಆಗಿದ್ದವರು.)

RSS Kheda traps children and their parents

Is this your new site? Log in to activate admin features and dismiss this message
ಲಾಗಿನ್