ಲೇಖಕ: Siddaiah C

  • ಸಿಪಿಐ(ಎಂ) ಸಮ್ಮೇಳನಗಳು

    ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಮೂಲಕ ಪಕ್ಷದ ರಾಜಕೀಯ ನೀತಿಗಳನ್ನು ರೂಪಿಸುವ ಮತ್ತು ನಾಯಕತ್ವವನ್ನು ಆಯ್ಕೆ ಮಾಡುವ ಪ್ರಕ್ರಿಯೆ: ಸಿಪಿಐ(ಎಂ) ತನ್ನ ಆಂತರಿಕ ಪ್ರಜಾಪ್ರಭುತ್ವವನ್ನು ಕಟ್ಟುನಿಟ್ಟಿನಿಂದ ಆಚರಿಸುವ ಒಂದು ರಾಜಕೀಯ ಪಕ್ಷ. ಇದರಲ್ಲಿ ಸಮ್ಮೇಳನಗಳು  ಪ್ರಮುಖ ಪಾತ್ರ ವಹಿಸುತ್ತವೆ. ಪ್ರತಿ 3 ವರ್ಷಗಳಿಗೊಮ್ಮೆ ನಡೆಯುವ ಪಕ್ಷದ ಮಹಾಧಿವೇಶನಕ್ಕೆ ಮೂರು ತಿಂಗಳ ಮೊದಲು ಕರಡು ರಾಜಕೀಯ ನಿರ್ಣಯವನ್ನು ಪಕ್ಷವು ಸಾರ್ವಜನಿಕಗೊಳಿಸುತ್ತದೆ. ಪಕ್ಷದ ಘಟಕಗಳು ಮತ್ತು ಸದಸ್ಯರು ಕರಡು ರಾಜಕೀಯ ನಿರ್ಣಯದ ಬಗ್ಗೆ ಪ್ರತಿಕ್ರಿಯಿಸಲು ಮತ್ತು ತಿದ್ದುಪಡಿಗಳನ್ನು ಸೂಚಿಸಲು ಅವಕಾಶ ನೀಡಲಾಗುತ್ತದೆ. ಪಕ್ಷದ…

  • Samsung India workers strike: ಕಾರ್ಪೊರೇಟ್ ಜಗತ್ತನ್ನು ಬೆಚ್ಚಿಬೀಳಿಸಿದ 37 ದಿನಗಳು: ಸ್ಯಾಮ್ ಸಂಗ್ ಇಂಡಿಯಾ ಕಾರ್ಮಿಕರ ಐತಿಹಾಸಿಕ ಹೋರಾಟಕ್ಕೆ ಜಯ

    ಸಂಘ ಕಟ್ಟುವ ಹಕ್ಕು ಸಂವಿಧಾನ ನೀಡಿರುವ ಮೂಲಭೂತ ಹಕ್ಕು. ಅದಕ್ಕಾಗಿ ಯಾರ ಬಳಿಯೂ ಭಿಕ್ಷೆ ಬೇಡಬೇಕಾಗಿಲ್ಲ. ಇಂದು ನಾವು ಅನುಭವಿಸುತ್ತಿರುವ ಎಂಟು ಗಂಟೆಗಳ ಕೆಲಸದ ದಿನಗಳು, ರಜಾದಿನಗಳು ಮತ್ತು ವಿಶೇಷ ಸವಲತ್ತುಗಳು ಕಾರ್ಮಿಕ ವರ್ಗದ ಹೋರಾಟ ಮತ್ತು ಅವರು ಚೆಲ್ಲಿದ ರಕ್ತದಿಂದ ಬಂದಿದೆ. ಅದನ್ನು ಎಂದಿಗೂ ಬಿಟ್ಟುಕೊಡಲು ಸಾಧ್ಯವಿಲ್ಲ ಎಂಬುದನ್ನು ಸ್ಯಾಮ್ಸಂಗ್ ಕಾರ್ಮಿಕರು ತಮ್ಮ ಹೋರಾಟದ ಮೂಲಕ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ತಮಿಳುನಾಡಿನ ಕಾಂಚೀಪುರಂನಲ್ಲಿರುವ ಸ್ಯಾಮ್‌ಸಂಗ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿರುವ ಯುವ ಕಾರ್ಮಿಕರ ದೃಢ ಸಂಕಲ್ಪ ದೇಶವೇ ತಿರುಗಿ…

  • ಏನಿದು ಪ್ರಧಾನ ಮಂತ್ರಿ ಜನ್ ಔಷಧಿ ಯೋಜನೆ

    ಸರ್ಕಾರದ ಅನುದಾನ ರೂ. 72 ಕೋಟಿ: ನಾಗರೀಕರಿಗಾದ ಲಾಭ 5,300 ಕೋಟಿ ರೂ.!!        ಜನರ ಬಾಯಲ್ಲಿ ‘ಮೋದಿ ಔಷಧಿ ಕೇಂದ್ರ’ ಅಥವಾ ‘ಮೋದಿ ಮೆಡಿಕಲ್ ಸ್ಟೋರ್’ ಎಂದೇ ಕರೆಯಲ್ಪಡುವ ‘ಪ್ರಧಾನ ಮಂತ್ರಿ ಜನೌಷಧಿ ಕೇಂದ್ರ’ ಯಾರಿಗೆ ಗೊತ್ತಿಲ್ಲ? ಮೋದಿ ಕಡಿಮೆ ಬೆಲೆಗೆ ಔಷಧಿ ದೊರಕುವಂತೆ ಮಾಡಿದ್ದಾರೆ, ಮೋದಿಯವರಿಂದಾಗಿ ನಾಗರಿಕರಿಗೆ ಔಷಧಿ ಖರೀಧಿಸುವ ವೆಚ್ಚ ಕಡಿಮೆಯಾಗಿದೆ ಎಂದೇ ಹಲವರು ಹೇಳುತ್ತಾರೆ. ಇದು ಬಡವರ ಮೇಲೆ ಮೋದಿಯವರಿಗಿರುವ ಕಾಳಜಿ ಎಂದೇ ಬಿಜೆಪಿ ನಾಯಕರು ಮತ್ತು ಸಂಘಪರಿವಾರ ಪ್ರಚಾರ ಮಾಡುತ್ತಿದ್ದಾರೆ. ಆದರೆ,…

  • jammu-kashmir election ಕಾಶ್ಮೀರದ ಏಕೈಕ ಕೆಂಪು ದ್ವೀಪದಲ್ಲಿ ಐದನೇ ಬಾರಿಗೆ ಮೊಹಮ್ಮದ್ ಯೂಸುಫ್ ತರಿಗಾಮಿ ಗೆಲುವು

    ಕಾಶ್ಮೀರದ ಏಕೈಕ ಕೆಂಪು ದ್ವೀಪದಲ್ಲಿ ಇಸ್ಲಾಮಿಸ್ಟ್ ಮತ್ತು ಕಮ್ಯುನಿಸ್ಟರ ನಡುವಿನ ಯುದ್ಧ ಎಂದು ಹೇಳಲಾಗುವ ದಕ್ಷಿಣ ಕಾಶ್ಮೀರದ ಕುಲ್ಗಾಮ್ ವಿಧಾನಸಭಾ ಸ್ಥಾನವು ಸಿಪಿಐ(ಎಂ) ನ ಭದ್ರಕೋಟೆಯಾಗಿದೆ. ಪಕ್ಷದ ನಾಯಕ ಮೊಹಮ್ಮದ್ ಯೂಸುಫ್ ತರಿಗಾಮಿ 1996 ರಿಂದ ಇಲ್ಲಿ ಚುನಾಯಿತರಾಗುತ್ತಿದ್ದಾರೆ. ತರಿಗಾಮಿ ಅವರು ಈಗ ಐದನೇ ಬಾರಿಗೆ ಗೆದ್ದಿದ್ದಾರೆ. ನಿಷೇಧಿತ ಜಮಾತ್-ಎ-ಇಸ್ಲಾಮಿ (ಜೆಐ) ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಸಯರ್ ಅಹ್ಮದ್ ರೇಶಿ ಅವರನ್ನು ಸೋಲಿಸುವ ಮೂಲಕ ತರಿಗಾಮಿ ಈ ಗೆಲುವು ಸಾಧಿಸಿದ್ದಾರೆ. 1996 ರಿಂದ, ಕುಲ್ಗಾಮ್ ಜಿಲ್ಲೆ ಜಮ್ಮು…

  • ಪ್ರೊ. ಜಿ.ಎನ್.ಸಾಯಿಬಾಬಾ ಸಾವು; ಪ್ರಜಾಪ್ರಭುತ್ವದ ಮೇಲೊಂದು ಕಪ್ಪು ಚುಕ್ಕೆ

    ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಮತ್ತು ನಾಗರಿಕ ಹಕ್ಕುಗಳ ಹೋರಾಟಗಾರ, ದಬ್ಬಾಳಿಕೆಯ ಪರಂಪರೆಯನ್ನು ಪ್ರತಿ ಹಂತದಲ್ಲೂ ಧಿಕ್ಕರಿಸಿದ ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಜಿ.ಎನ್.ಸಾಯಿಬಾಬಾ (58) ಹೈದರಾಬಾದ್‌ ನಲ್ಲಿ ನಿಧನರಾದರು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಸಾಯಿಬಾಬಾ ಅವರು ವಾರದ ಹಿಂದೆ ನಿಮ್ಸ್ ಗೆ ದಾಖಲಾಗಿದ್ದರು. ಚಿಕಿತ್ಸೆ ಪಡೆಯುತ್ತಿದ್ದ ಅವರು ಅಕ್ಟೋಬರ್ 12ರ ರಾತ್ರಿ 8.30ಕ್ಕೆ ಕೊನೆಯುಸಿರೆಳೆದರು. ಪ್ರೊಫೆಸರ್ ಸಾಯಿಬಾಬಾರವರ ಆಶಯದಂತೆ ಅವರ ದೇಹವನ್ನು ಸಂಶೋಧನೆಗಾಗಿ ಗಾಂಧಿ ವೈದ್ಯಕೀಯ ಕಾಲೇಜಿಗೆ ಹಸ್ತಾಂತರಿಸಲಾಯಿತು. ಅವರು ಈಗಾಗಲೇ ತಮ್ಮ ಕಣ್ಣುಗಳನ್ನು ಎಲ್.ವಿ.ಪ್ರಸಾದ್…

  • ಕಾಶ್ಮೀರದ ಸಂಪತ್ತನ್ನು ದೋಚಲು 370ನೇ ವಿಧಿ ರದ್ದು

    2019ರ ಆಗಸ್ಟ್ 5ರಂದು ಸಂವಿಧಾನದ 370ನೇ ವಿಧಿಯ ಮೂಲಕ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಷೇಶ ಸ್ಥಾನಮಾನವನ್ನು ತೆಗೆದು ಹಾಕಿ, 35ಎ ವಿಧಿಯನ್ನು ನಿರರ್ಥಕಗೊಳಿಸಿ, ಅದಕ್ಕೆ ಇದ್ದ ರಾಜ್ಯದ ಸ್ಥಾನಮಾನವನ್ನು ರದ್ದುಗೊಳಿಸಿ, ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿರುವುದನ್ನೂ ಮೋದಿ ಸರ್ಕಾರದ ದೊಡ್ಡ ಸಾಧನೆ, ಎಂದು ಬಿಂಬಿಸಲಾಗಿದೆ. ಆದರೆ, 370ನೇ ವಿಧಿ ರದ್ದುಗೊಳಿಸಿರುವ ನಿಜವಾದ ಉದ್ದೇಶವನ್ನು ಮರೆಮಾಚಲಾಗಿದೆ. ಭಾರತ 1990ರ ದಶಕದಲ್ಲಿ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ (LPG) ನೀತಿಗಳನ್ನು ಒಪ್ಪಿಕೊಂಡಿರುವುದು ಎಲ್ಲರಿಗೂ ಗೊತ್ತೇ ಇದೆ. ಈ LPG  ನೀತಿಗಳನ್ನು…

  • ತಿರುಪತಿ ಲಡ್ಡು ಕಲಬೆರಕೆ:

    ಭಕ್ತರ ಭಾವನೆಗಳ ಜೊತೆ ಆಟವಾಡುವುದು ಬೇಡ, ನಿಜ ಏನೆಂದು ತಿಳಿಯಬೇಕಿದೆ ತಿರುಮಲ ಲಡ್ಡುಗಳ ತಯ್ಯಾರಿಕೆಗೆ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬನ್ನು ಬೆರೆಸಲಾಗಿದೆ ಎಂಬ ವರದಿಯು ಕೋಟ್ಯಂತರ ತಿರುಮಲ ಭಕ್ತರನ್ನು ತೀವ್ರ ಚಿಂತೆಗೀಡುಮಾಡಿದೆ. ಲಡ್ಡು ಜತೆಗೆ ಟಿಟಿಡಿಯಲ್ಲಿ ನಡೆಯುತ್ತಿರುವ ಹಲವು ಭ್ರಷ್ಟಾಚಾರ, ಅವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ಟಿಟಿಡಿಯಲ್ಲಿ ಹಲವು ಅಕ್ರಮಗಳು ನಡೆಯುತ್ತಿದ್ದರೆ ಆ ಮಂಡಳಿಯ ಸದಸ್ಯರಾಗಿರುವ ಬಿಜೆಪಿ ನಾಯಕರು ಏನು ಮಾಡುತ್ತಿದ್ದರು? ಭಕ್ತರಿಗೆ ಬೇಕಾಗಿರುವುದು ಮತಾಂಧತೆ ಅಲ್ಲ. ರಾಜಕೀಯ ನಾಯಕರ ಸವಾಲುಗಳು,…

  • ಪ್ರಣಯ್ ರಾಯ್ ಪ್ರಕರಣವನ್ನು ಮುಕ್ತಾಯಗೊಳಿಸಿದ ಸಿಬಿಐ:

    ಮೋದಿ ಸರ್ಕಾರದಿಂದ ತನಿಖಾ ಸಂಸ್ಥೆಗಳ ದುರುಪಯೋಗದ ಇನ್ನೊಂದು ನಿದರ್ಶನ ಎನ್‌ ಡಿಟಿವಿಯ ಮಾಜಿ ಪ್ರವರ್ತಕರಾದ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ವಿರುದ್ದ 2017ರಲ್ಲಿ ದಾಖಲಾಗಿದ್ದ ಪ್ರಕರಣವನ್ನು ಸಿಬಿಐ 2024ರ ಅಕ್ಟೋಬರ್ ಒಂದರಂದು ಮುಕ್ತಾಯಗೊಳಿಸಿದೆ. ಏಳು ವರ್ಷಗಳ ಸುದೀರ್ಘ ತನಿಖೆಯು ಯಾವುದೇ ಸಾಕ್ಷ್ಯಾಧಾರಗಳಿಲ್ಲದ ಕಾರಣ ಸಿಬಿಐಗೆ ಈ ಕ್ರಮವು ಅನಿವಾರ್ಯವಾಯಿತು. ಪ್ರಕರಣದ ಮುಕ್ತಾಯ ವರದಿಯಲ್ಲಿ ಸಿಬಿಐ ಅಧಿಕಾರಿಗಳು ಇದನ್ನೇ ಉಲ್ಲೇಖಿಸಿದ್ದಾರೆ. ಈ ಪ್ರಕರಣವು ಆಡಳಿತಾರೂಢ ಬಿಜೆಪಿಯು ತನಿಖಾ ಸಂಸ್ಥೆಗಳನ್ನು ಹೇಗೆ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬುದಕ್ಕೆ ಇತ್ತೀಚಿನ ಉದಾಹರಣೆಯಾಗಿದೆ. ನರೇಂದ್ರ…

  • ಚುನಾವಣಾ ಬಾಂಡ್: ಬಿಜೆಪಿಯ ಸಂಘಟಿತ ಭ್ರಷ್ಟಾಚಾರ

    ಬೆಂಗಳೂರಿನ ತಿಲಕ್ ನಗರದ ಪೊಲೀಸರು ‘ಚುನಾವಣಾ ಬಾಂಡ್‌ ಗಳ ಸುಲಿಗೆ ಪ್ರಕರಣ’ದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕರ್ನಾಟಕ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿಯ ಕೇಂದ್ರ ಮತ್ತು ರಾಜ್ಯದ ನಾಯಕರ ವಿರುದ್ದ ಎಫ್ ಐ ಆರ್ ದಾಖಲಿಸಿದ್ದಾರೆ. ಇದರಿಂದಾಗಿ ಬಿಜೆಪಿಯ ಸಂಘಟಿತ ಭ್ರಷ್ಟಾಚಾರ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಚುನಾವಣಾ ಬಾಂಡ್‌ಗಳು ಅಸಾಂವಿಧಾನಿಕ, ಮಾಹಿತಿ ಹಕ್ಕು ಕಾಯಿದೆಯ ಉಲ್ಲಂಘನೆ ಮತ್ತು ಕ್ವಿಡ್ ಪ್ರೊ ಕ್ವೋಗೆ ಕಾರಣವಾಗುತ್ತದೆ ಎಂದು ಪರಿಗಣಿಸಿ ಸುಪ್ರೀಂ ಕೋರ್ಟ್ ಈ ವರ್ಷ…

  • ಹೈದರಾಬಾದ್ ವಿಮೋಚನೆ: ನಿಜವಾಗಿ ನಡೆದಿದ್ದೇನು?

    ಇದೇ ಸೆಪ್ಟೆಂಬರ್ 17ರಂದು ಕಾಂಗ್ರೆಸ್ ನೇತೃತ್ವದಲ್ಲಿನ ಕರ್ನಾಟಕ ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ “ವಿಮೋಚನಾ ದಿನ”ವನ್ನಾಗಿ ಆಚರಿಸಿತು. ರಾಜ್ಯದ ಮುಖ್ಯ ಮಂತ್ರಿಯಾದಿಯಾಗಿ ಹಲವು ಸಚಿವರು, ಶಾಸಕರು, ಸಂಸದರು ಕಲ್ಯಾಣ ಕರ್ನಾಟಕದ ಹಲವು ಪ್ರದೇಶಗಳಲ್ಲಿ ವಿಮೋಚನಾ ದಿನದಂದು ಸಭೆ ಸಮಾರಾಂಭಗಳಲ್ಲಿ ಭಾಗಿಯಾಗಿದ್ದರು.   ಬಿಜೆಪಿಯು ಎರಡು ತೆಲುಗು ರಾಜ್ಯಗಳಲ್ಲಿ ತನ್ನ ಅನುಯಾಯಿಗಳು ಬಿಡುಗಡೆ ಮಾಡಿದ “ರಜಾಕಾರ” ಎಂಬ ತೆಲುಗು ಚಲನಚಿತ್ರವನ್ನು ವ್ಯಾಪಕವಾಗಿ ಪ್ರಚಾರ ಮಾಡುವ ಮೂಲಕ ಅಂದಿನ ಸಶಸ್ತ್ರ ರೈತರ ಹೋರಾಟವನ್ನು ಕೋಮು ಘರ್ಷಣೆ ಎಂದು ಬಿಂಬಿಸಲು…