ವರ್ಗ: ಭ್ರಷ್ಟಾಚಾರ
-
ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ: 96ನೇ ಸ್ಥಾನದಲ್ಲಿ ಭಾರತ
ಮೋದಿಯವರ ‘ಭ್ರಷ್ಟಾಚಾರ ಮುಕ್ತ ಭಾರತ’ದ ವಾಗ್ದಾನ ಏನಾಯ್ತು? ಫೆಬ್ರವರಿ 11, 2025 ರಂದು ಬಿಡುಗಡೆಯಾದ ಟ್ರಾನ್ಸ್ ಪರೆನ್ಸಿ ಇಂಟರ್ ನ್ಯಾಷನಲ್ ವರದಿಯ ಪ್ರಕಾರ, 2024ರ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ (CPI)ದಲ್ಲಿ ಭಾರತವು 180 ದೇಶಗಳ ಪಟ್ಟಿಯಲ್ಲಿ 96ನೇ ಸ್ಥಾನದಲ್ಲಿದೆ. 2014ರ ಚುನಾವಣೆಯಲ್ಲಿ ಬಿಜೆಪಿ ಶೇ. 31 ರಷ್ಟು ಮತ ಪಡೆದು ನರೇಂದ್ರ ಮೋದಿ ಪ್ರಧಾನಿಯಾಗಲು ದೇಶದಲ್ಲಿನ ಅಂದಿನ ಭ್ರಷ್ಟಾಚಾರವೂ ಒಂದು ಕಾರಣವಾಗಿತ್ತು. ಅಂದು, ಭ್ರಷ್ಟಾಚಾರದ ವಿಷಯ ಸಂಘಪರಿವಾರದ ಚುನಾವಣಾ ಪ್ರಚಾರದ ಒಂದು ಅಸ್ತ್ರವಾಗಿತ್ತು. 2014ರಲ್ಲಿ 175 ದೇಶಗಳ…
-
ತಿರುಪತಿ ಲಡ್ಡು ಕಲಬೆರಕೆ: ಭಕ್ತರ ಭಾವನೆಗಳಿಗಿಂತ ಲಾಭವೇ ಮುಖ್ಯ!!
ತಿರುಮಲ ಲಡ್ಡುಗಳ ತಯ್ಯಾರಿಕೆಗೆ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬನ್ನು ಬೆರೆಸಲಾಗಿದೆ ಎಂಬ 2024ರ ವರದಿಯೊಂದು ಕೋಟ್ಯಂತರ ತಿರುಮಲ ಭಕ್ತರನ್ನು ತೀವ್ರ ಚಿಂತೆಗೀಡುಮಾಡಿತ್ತು. ತುಪ್ಪದಲ್ಲಿ ಕಲಬೆರಕೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ, ‘ಸುಕೃತಿ ಫುಡ್ಸ್’ನ ಕೈಲಾಶ್ ಚಂದ್ ಮಂಗ್ಲಾ ಅವರನ್ನು 2026ರ ಸೆಪ್ಟೆಂಬರ್ 17 ರಂದು ಇ.ಡಿ ವಶಕ್ಕೆ ಪಡೆದಿದೆ. ತುಪ್ಪವನ್ನು ಸಂಸ್ಕರಿಸಿದ ಪಾಮ್ ಎಣ್ಣೆ, ಪಾಮೋಲಿನ್ ಮತ್ತು ವಿವಿಧ ರಾಸಾಯನಿಕಗಳನ್ನು ಬಳಸಿ ತಯಾರಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. ಭಕ್ತರ ಭಾವನೆಗಳಿಗಿಂತ ತಮ್ಮ ಲಾಭವೇ ಮುಖ್ಯ ಎಂದು ಈ…
-
ಚುನಾವಣಾ ಬಾಂಡ್: ಬಿಜೆಪಿಯ ಸಂಘಟಿತ ಭ್ರಷ್ಟಾಚಾರ
ಬೆಂಗಳೂರಿನ ತಿಲಕ್ ನಗರದ ಪೊಲೀಸರು ‘ಚುನಾವಣಾ ಬಾಂಡ್ ಗಳ ಸುಲಿಗೆ ಪ್ರಕರಣ’ದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕರ್ನಾಟಕ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿಯ ಕೇಂದ್ರ ಮತ್ತು ರಾಜ್ಯದ ನಾಯಕರ ವಿರುದ್ದ ಎಫ್ ಐ ಆರ್ ದಾಖಲಿಸಿದ್ದಾರೆ. ಇದರಿಂದಾಗಿ ಬಿಜೆಪಿಯ ಸಂಘಟಿತ ಭ್ರಷ್ಟಾಚಾರ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಚುನಾವಣಾ ಬಾಂಡ್‌ಗಳು ಅಸಾಂವಿಧಾನಿಕ, ಮಾಹಿತಿ ಹಕ್ಕು ಕಾಯಿದೆಯ ಉಲ್ಲಂಘನೆ ಮತ್ತು ಕ್ವಿಡ್ ಪ್ರೊ ಕ್ವೋಗೆ ಕಾರಣವಾಗುತ್ತದೆ ಎಂದು ಪರಿಗಣಿಸಿ ಸುಪ್ರೀಂ ಕೋರ್ಟ್ ಈ ವರ್ಷ…
-
ಗೋಮಾಂಸ ರಪ್ತು ಕಂಪನಿಗಳಿಂದ ಬಿಜೆಪಿಗೆ 4.5 ಕೋಟಿ ರೂ. ಚುನಾವಣಾ ದೇಣಿಗೆ
ಕಳಚಿ ಬಿದ್ದ ಗೋರಕ್ಷರೆಂಬ ಮುಖವಾಡ “ಗೋವು ಹಿಂದೂಗಳಿಗೆ ಮಾತೆ ಇದ್ದಹಾಗೆ, ಅವುಗಳು ನಮಗೆ ಹಾಲು ಕೊಡುತ್ತವೆ. ಗೋವುಗಳನ್ನು ಕೊಂದು ತಿಂದರೆ ನಮ್ಮ ಹೆತ್ತ ತಾಯಿಯನ್ನೇ ಕೊಂದು ತಿಂದಂತೆ, ಯಾರಾದರೂ ಹೆತ್ತ ತಾಯಿಯನ್ನು ಕೊಂದು ತಿನ್ನುತ್ತಾರೆಯೇ? ಗೋಭಕ್ಷಕರು ರಾಕ್ಷಕರು. ಅವರು ಹಿಂದೂ ಧರ್ಮದ ವಿರೋಧಿಗಳು….” ಹೀಗೆ ಬಿಜೆಪಿ ಮತ್ತು ಹಿಂದುತ್ವವಾದಿ ನಾಯಕರು ಪುಂಕಾನುಪುಂಕ ಭಾಷಣ ಬಿಗಿದು, ಜನರಲ್ಲಿನ ಧಾರ್ಮಿಕ ಭಾವನೆಗಳನ್ನು ಕೆರಳಿಸುತ್ತಾರೆ. ಗೋವುಗಳನ್ನು ಪೂಜ್ಯ ಭಾವನೆಯಿಂದ ನೋಡುವ ಹಿಂದೂಗಳೂ ಬಿಜೆಪಿಯವರ ಇಂತಹ ಕಪಟ ಮಾತುಗಳನ್ನು ನಂಬಿ ಅವರನ್ನು ಬೆಂಬಲಿಸುತ್ತಾರೆ.…
-
35 ಔಷಧೀಯ ಕಂಪನಿಗಳಿಂದ 1000 ಕೋಟಿ ರೂ. ಚುನಾವಣಾ ಬಾಂಡ್
ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾದ ಮತ್ತು ಐಟಿ ಇಲಾಖೆಯಿಂದ ದಾಳಿ ಎದುರಿಸಿದ 7 ಫಾರ್ಮಾ ಕಂಪನಿಗಳು ಲೂಟಿಕೋರರಿಗೆ ಲೂಟಿ ಮಾಡಲು ಯಾವ ಮಾರ್ಗವಾದರೇನು? ಅಂತಹವರಿಗೆ ಸಹೃಧಯ ಎಂಬುದೇ ಇರುವುದಿಲ್ಲ. ಅದನ್ನು ನಾವು, ರಸ್ತೆ, ರೈಲ್ವೇ, ವಿಮಾನ, ವಿದ್ಯುತ್, ನೀರು, ಶಿಕ್ಷಣ, ಆರೋಗ್ಯ ಇಂತಹ ಸಾರ್ವಜನಿಕ ಮೂಲಭೂತ ಸೌಕರ್ಯಗಳ ಕ್ಷೇತ್ರಗಳಲ್ಲಿ ಖಾಸಗಿಯವರಿಗೆ ಪಾಲು ನೀಡಿಯೋ, ಅಥವಾ ಸಂಪೂರ್ಣವಾಗಿ ಖಾಸಗಿಯವರಿಗೇ ಕೊಡುವ ಮೂಲಕವೋ ಆಳುವ ಬಂಡವಾಳಶಾಹಿ ರಾಜಕೀಯ ಪಕ್ಷಗಳು ‘ಕೊಡು ಕೊಳ್ಳುವ ವ್ಯವಹಾರ’ ಮಾಡುವುದನ್ನು ನೋಡಿದ್ದೇವೆ. ಆದರೆ, ಬಿಜೆಪಿ ಪಕ್ಷವು ಜನರ…