ವರ್ಗ: ಸರ್ಕಾರದ ಯೋಜನೆಗಳು
-
ʻಅಗ್ನಿಪಥ್ʼ ಯೋಜನೆಯ ಒಳ-ಹೊರಗು
‘ಅಗ್ನಿಪಥ್’ ಯೋಜನೆಯು ದೇಶಭಕ್ತಿ ಪ್ರೇರಿತ ಯುವಕರಿಗೆ ನಾಲ್ಕು ವರ್ಷಗಳ ಅವಧಿಗೆ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡುತ್ತದೆ ಎನ್ನುತ್ತದೆ ನರೇಂದ್ರ ಮೋದಿ ಸರ್ಕಾರ. ‘ಅಗ್ನಿಪಥ್’ ಯೋಜನೆ ತರುವ ಮೂಲಕ ಸೈನಿಕರಿಗೆ ಕಡಿಮೆ ಸಂಬಳ, ಸೇವಾ ಅವಧಿ ಕಡಿತ ಮತ್ತು ನಿವೃತ್ತಿ ನಂತರದ ಪಿಂಚಣಿಗೆ ಕತ್ತರಿ ಹಾಕಿದೆ. ಜೊತೆಗೆ ‘ಅಗ್ನಿವೀರ’ರನ್ನು ನಿರುದ್ಯೋಗಿಗಳ ದೊಡ್ಡ ಸಾಲಿನಲ್ಲಿ ನಿಲ್ಲುವಂತೆ ಮಾಡಿದೆ. ಅಗ್ನಿಪಥ್ ಮೂಲಕ ಆಯ್ಕೆಯಾಗುವ ಶೇ. 75ರಷ್ಟು ಅಗ್ನಿವೀರರಿಗೆ 1. ಸರ್ಕಾರದ ಯಾವುದೇ ಭವಿಷ್ಯ ನಿಧಿಗೆ ಕೊಡುಗೆ ನೀಡುವ ಅಗತ್ಯವಿಲ್ಲ.…
-
ಉಚಿತ ಪಡಿತರ ಪಡೆಯುವ 80 ಕೋಟಿ ಬಡವರು! ‘ಅಮೃತ ಕಾಲ’ ಯಾರಿಗೆ!!
ಒಂದಡೆ ಪ್ರಧಾನಿ ನರೇಂದ್ರ ಮೋದಿಯವರು ‘ಅಮೃತ್ ಕಾಲ್’ ಬಗ್ಗೆ ಮಾತನಾಡುತ್ತಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ‘ಅಮೃತ್ ಕಾಲ್’ ಅನ್ನು ಹಲವು ಬಾರಿ ಉಲ್ಲೇಖಿಸುತ್ತಾರೆ. “ನಾವು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಗುರುತಿಸುತ್ತಿದ್ದೇವೆ ಮತ್ತು ಮುಂದಿನ 25 ವರ್ಷಗಳ ಕಾಲ ಭಾರತವನ್ನು ಶತಮಾನೋತ್ಸವದ ಕಡೆಗೆ ಮುನ್ನಡೆಯುತ್ತಿರುವ ‘ಅಮೃತ್ ಕಾಲ್’ಗೆ ಪ್ರವೇಶಿಸಿದ್ದೇವೆ” ಎನ್ನುತ್ತಾರೆ. ಮತ್ತೊಂದಡೆ, “ಬಡತನ ರೇಖೆಗಿಂತ ಕೆಳಗಿನ 80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯಗಳನ್ನು ವಿತರಿಸುತ್ತಿದ್ದೇವೆ. ಮತ್ತೆ ಐದು ವರ್ಷಗಳ ಕಾಲ 81.35 ಕೋಟಿ…
-
ಏನಿದು ಪ್ರಧಾನ ಮಂತ್ರಿ ಜನ್ ಔಷಧಿ ಯೋಜನೆ
ಸರ್ಕಾರದ ಅನುದಾನ ರೂ. 72 ಕೋಟಿ: ನಾಗರೀಕರಿಗಾದ ಲಾಭ 5,300 ಕೋಟಿ ರೂ.!! ಜನರ ಬಾಯಲ್ಲಿ ‘ಮೋದಿ ಔಷಧಿ ಕೇಂದ್ರ’ ಅಥವಾ ‘ಮೋದಿ ಮೆಡಿಕಲ್ ಸ್ಟೋರ್’ ಎಂದೇ ಕರೆಯಲ್ಪಡುವ ‘ಪ್ರಧಾನ ಮಂತ್ರಿ ಜನೌಷಧಿ ಕೇಂದ್ರ’ ಯಾರಿಗೆ ಗೊತ್ತಿಲ್ಲ? ಮೋದಿ ಕಡಿಮೆ ಬೆಲೆಗೆ ಔಷಧಿ ದೊರಕುವಂತೆ ಮಾಡಿದ್ದಾರೆ, ಮೋದಿಯವರಿಂದಾಗಿ ನಾಗರಿಕರಿಗೆ ಔಷಧಿ ಖರೀಧಿಸುವ ವೆಚ್ಚ ಕಡಿಮೆಯಾಗಿದೆ ಎಂದೇ ಹಲವರು ಹೇಳುತ್ತಾರೆ. ಇದು ಬಡವರ ಮೇಲೆ ಮೋದಿಯವರಿಗಿರುವ ಕಾಳಜಿ ಎಂದೇ ಬಿಜೆಪಿ ನಾಯಕರು ಮತ್ತು ಸಂಘಪರಿವಾರ ಪ್ರಚಾರ ಮಾಡುತ್ತಿದ್ದಾರೆ. ಆದರೆ,…
-
ಪಿಎಂ ಫಸಲ್ ಭೀಮಾ ಯೋಜನೆ: ರೈತರಿಗಿಂತ ವಿಮಾ ಕಂಪನಿಗಳಿಗೇ ಹೆಚ್ಚು ಲಾಭ
ಕಳೆದ 10 ವರ್ಷಗಳ ಮೋದಿ ಆಡಳಿತದಲ್ಲಿ ರೂಪಿಸಿ ಜಾರಿಗೆ ತರಲಾದ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಒಂದು. ಕೃಷಿ ವಿಮಾ ಯೋಜನೆಯನ್ನು ಖಾಸಗಿ ವಿಮಾ ಕಂಪನಿಗಳಿಗೂ ತೆರೆದಿಟ್ಟಿದೆ. ಈ ಯೋಜನೆ ರೈತರ ಲಾಭಕ್ಕಿಂತ ಖಾಸಗಿ ವಿಮಾ ಕಂಪನಿಗಳಿಗೇ ಹೆಚ್ಚು ಲಾಭ ತಂದುಕೊಡುತ್ತಿದೆ. ದಾಖಲೆಗಳ ಮೇಲಷ್ಟೇ ಈ ಯೋಜನೆಯು ರೈತ ಸ್ನೇಹಿ ಎಂಬ ಚಿತ್ರವನ್ನು ಪ್ರಸ್ತುತಪಡಿಸುತ್ತದೆ. ಆದರೆ ವಾಸ್ತವದಲ್ಲಿ ಆ ರೀತಿಯಲ್ಲಿ ಇಲ್ಲ. ಇತ್ಯರ್ಥ/ಹಕ್ಕುಗಳ ಸ್ವೀಕೃತಿಯಲ್ಲಿ ವಿಳಂಬ ಮತ್ತು ತಾಂತ್ರಿಕ ದೋಷಗಳಂತಹ ಅನೇಕ ಸಮಸ್ಯೆಗಳನ್ನು…
-
ಪಿಎಂ ಸೂರ್ಯ ಘರ್: 300 ಯೂನಿಟ್ ಉಚಿತ ವಿದ್ಯುತ್!! ಏನಿದು ಮೋದಿಯವರ ಮಾತಿನ ಮೋಡಿ?
ಭಾರತದ ಒಂದು ಕೋಟಿ ಕುಟುಂಬಗಳಿಗೆ ‘ಪ್ರಧಾನ ಮಂತ್ರಿ ಸೂರ್ಯಘರ್ ಮುಫ್ತ್ ಬಿಜ್ಲೀ’ ಯೋಜನೆಯಡಿ ಪ್ರತಿ ತಿಂಗಳು 300 ಯೂನಿಟ್ ಉಚಿತ ವಿದ್ಯುತ್ ಒದಗಿಸುವುದಾಗಿ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024, ಫೆಬ್ರವರಿ 1 ರಂದು ತಮ್ಮ ಮಧ್ಯಂತರ ಬಜೆಟ್ಭಾ ಷಣದಲ್ಲಿ ಘೋಷಿಸಿದರು. ಇದೇ ಘೋಷಣೆಯನ್ನು ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದೆ. ಈ ಮನೆಗಳ ಸಂಖ್ಯೆಯನ್ನು ಈಗ 3 ಕೋಟಿಗೆ ಹೆಚ್ಚಿಸಿದೆ. ಇದರಿಂದ ವಾರ್ಷಿಕ 15,000-18,000 ರೂ.ವರೆಗೆ ಉಳಿತಾಯವಾಗುತ್ತದೆ”ಎಂದು ಹೇಳುತ್ತಾರೆ. ಏನಿದು ಉಚಿತ…