ಲೇಖಕ: Siddaiah C
-
‘ಭಾರತ್ ರೈಸ್’ ಹೆಸರಿನಲ್ಲಿ ಅಕ್ಕಿ ಮಾರಾಟ: ಮುಚ್ಚಿಟ್ಟಅಜೆಂಡಾಗಳು
ಒಂದೆಡೆ, ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಡಿತರ ಧಾನ್ಯಗಳ ಬದಲಿಗೆ ನೇರ ನಗದು ಯೋಜನೆ ಮೂಲಕ ಫಲಾನುಭವಿಗಳ ಖಾತೆಗೆ ಹಣ ಹಾಕುತ್ತಾರೆ. ಮತ್ತೊಂದೆಡೆ, ಆಹಾರ ಧಾನ್ಯಗಳ ಬೆಲೆ ಏರಿಕೆಯಿಂದ ಜನರನ್ನು ರಕ್ಷಿಸುವ ಉದ್ದೇಶದಿಂದ ಕಡಿಮೆ ದರದಲ್ಲಿ ಭಾರತ್ ರೈಸ್ ಹೆಸರಿನಲ್ಲಿ ಕೆಜಿ ಅಕ್ಕಿಗೆ 29 ರೂ.ನಂತೆ ಮಾರಾಟ ಮಾಡಲಾಗುತ್ತಿದೆ ಎಂದು ಮೋದಿ ಸರ್ಕಾರ ಹೇಳುತ್ತಿದೆ. ಏನಿದು ನಾಟಕ? ಒಂದು ವೇಳೆ ಧಾನ್ಯಗಳ ಬೆಲೆ ಏರಿಕೆಯಿಂದ ಜನರನ್ನು ರಕ್ಷಣೆ ಮಾಡಬೇಕು ಎಂಬುದೇ ಅವರ ನಿಜವಾದ ಖಾಳಜಿಯಾಗಿದ್ದರೆ, ‘ಭಾರತ್ ಅಕ್ಕಿ’ ಹೆಸರಿನಲ್ಲಿ…
-
‘ಅಮೃತ್ ಭಾರತ್ ಸ್ಟೇಷನ್ ಯೋಜನೆ’
ಖಾಸಗಿಯವರ ತೆಕ್ಕೆಗೆ ರೈಲು ನಿಲ್ದಾಣಗಳು 2024ರ ಲೋಕಸಭಾ ಚುನಾವಣೆ ಘೊಷಣೆಯಾಗಲಿರುವ ಒಂದೆರಡು ವಾರಗಳ ಹಿಂದೆ, ಫೆಬ್ರವರಿ 26ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಬ್ಬರದ ಪ್ರಚಾರದೊಂದಿಗೆ ‘ಅಮೃತ್ ಭಾರತ್ ಸ್ಟೇಷನ್ ಯೋಜನೆ’ ಅಡಿಯಲ್ಲಿ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹರಡಿರುವ 553 ರೈಲು ನಿಲ್ದಾಣಗಳ ಪುನರಾಭಿವೃದ್ದಿಗೆ ಚಾಲನೆ ನೀಡಿದ್ದಾರೆ. ಈ ಮೂಲಕ, ಒಕ್ಕೂಟ ಸರ್ಕಾರದ ಗುರಿಯಾದ ರೈಲ್ವೇ ವಲಯವನ್ನು ಖಾಸಗಿಯವರಿಗೆ ಒಪ್ಪಿಸುವ ‘ಖಾಸಗೀಕರಣ’ದ ಹಾದಿಯ ಗುರಿಯತ್ತ ಮತ್ತೊಂದು ಹೆಜ್ಜೆ ಇಟ್ಟಂತಾಗಿದೆ. ಮಾತ್ರವಲ್ಲ, ಆರ್ ಎಸ್ ಎಸ್…
-
ಗೋಮಾಂಸ ರಪ್ತು ಕಂಪನಿಗಳಿಂದ ಬಿಜೆಪಿಗೆ 4.5 ಕೋಟಿ ರೂ. ಚುನಾವಣಾ ದೇಣಿಗೆ
ಕಳಚಿ ಬಿದ್ದ ಗೋರಕ್ಷರೆಂಬ ಮುಖವಾಡ “ಗೋವು ಹಿಂದೂಗಳಿಗೆ ಮಾತೆ ಇದ್ದಹಾಗೆ, ಅವುಗಳು ನಮಗೆ ಹಾಲು ಕೊಡುತ್ತವೆ. ಗೋವುಗಳನ್ನು ಕೊಂದು ತಿಂದರೆ ನಮ್ಮ ಹೆತ್ತ ತಾಯಿಯನ್ನೇ ಕೊಂದು ತಿಂದಂತೆ, ಯಾರಾದರೂ ಹೆತ್ತ ತಾಯಿಯನ್ನು ಕೊಂದು ತಿನ್ನುತ್ತಾರೆಯೇ? ಗೋಭಕ್ಷಕರು ರಾಕ್ಷಕರು. ಅವರು ಹಿಂದೂ ಧರ್ಮದ ವಿರೋಧಿಗಳು….” ಹೀಗೆ ಬಿಜೆಪಿ ಮತ್ತು ಹಿಂದುತ್ವವಾದಿ ನಾಯಕರು ಪುಂಕಾನುಪುಂಕ ಭಾಷಣ ಬಿಗಿದು, ಜನರಲ್ಲಿನ ಧಾರ್ಮಿಕ ಭಾವನೆಗಳನ್ನು ಕೆರಳಿಸುತ್ತಾರೆ. ಗೋವುಗಳನ್ನು ಪೂಜ್ಯ ಭಾವನೆಯಿಂದ ನೋಡುವ ಹಿಂದೂಗಳೂ ಬಿಜೆಪಿಯವರ ಇಂತಹ ಕಪಟ ಮಾತುಗಳನ್ನು ನಂಬಿ ಅವರನ್ನು ಬೆಂಬಲಿಸುತ್ತಾರೆ.…
-
ಪಿಎಂ ಸೂರ್ಯ ಘರ್: 300 ಯೂನಿಟ್ ಉಚಿತ ವಿದ್ಯುತ್!! ಏನಿದು ಮೋದಿಯವರ ಮಾತಿನ ಮೋಡಿ?
ಭಾರತದ ಒಂದು ಕೋಟಿ ಕುಟುಂಬಗಳಿಗೆ ‘ಪ್ರಧಾನ ಮಂತ್ರಿ ಸೂರ್ಯಘರ್ ಮುಫ್ತ್ ಬಿಜ್ಲೀ’ ಯೋಜನೆಯಡಿ ಪ್ರತಿ ತಿಂಗಳು 300 ಯೂನಿಟ್ ಉಚಿತ ವಿದ್ಯುತ್ ಒದಗಿಸುವುದಾಗಿ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024, ಫೆಬ್ರವರಿ 1 ರಂದು ತಮ್ಮ ಮಧ್ಯಂತರ ಬಜೆಟ್ಭಾ ಷಣದಲ್ಲಿ ಘೋಷಿಸಿದರು. ಇದೇ ಘೋಷಣೆಯನ್ನು ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದೆ. ಈ ಮನೆಗಳ ಸಂಖ್ಯೆಯನ್ನು ಈಗ 3 ಕೋಟಿಗೆ ಹೆಚ್ಚಿಸಿದೆ. ಇದರಿಂದ ವಾರ್ಷಿಕ 15,000-18,000 ರೂ.ವರೆಗೆ ಉಳಿತಾಯವಾಗುತ್ತದೆ”ಎಂದು ಹೇಳುತ್ತಾರೆ. ಏನಿದು ಉಚಿತ…
-
35 ಔಷಧೀಯ ಕಂಪನಿಗಳಿಂದ 1000 ಕೋಟಿ ರೂ. ಚುನಾವಣಾ ಬಾಂಡ್
ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾದ ಮತ್ತು ಐಟಿ ಇಲಾಖೆಯಿಂದ ದಾಳಿ ಎದುರಿಸಿದ 7 ಫಾರ್ಮಾ ಕಂಪನಿಗಳು ಲೂಟಿಕೋರರಿಗೆ ಲೂಟಿ ಮಾಡಲು ಯಾವ ಮಾರ್ಗವಾದರೇನು? ಅಂತಹವರಿಗೆ ಸಹೃಧಯ ಎಂಬುದೇ ಇರುವುದಿಲ್ಲ. ಅದನ್ನು ನಾವು, ರಸ್ತೆ, ರೈಲ್ವೇ, ವಿಮಾನ, ವಿದ್ಯುತ್, ನೀರು, ಶಿಕ್ಷಣ, ಆರೋಗ್ಯ ಇಂತಹ ಸಾರ್ವಜನಿಕ ಮೂಲಭೂತ ಸೌಕರ್ಯಗಳ ಕ್ಷೇತ್ರಗಳಲ್ಲಿ ಖಾಸಗಿಯವರಿಗೆ ಪಾಲು ನೀಡಿಯೋ, ಅಥವಾ ಸಂಪೂರ್ಣವಾಗಿ ಖಾಸಗಿಯವರಿಗೇ ಕೊಡುವ ಮೂಲಕವೋ ಆಳುವ ಬಂಡವಾಳಶಾಹಿ ರಾಜಕೀಯ ಪಕ್ಷಗಳು ‘ಕೊಡು ಕೊಳ್ಳುವ ವ್ಯವಹಾರ’ ಮಾಡುವುದನ್ನು ನೋಡಿದ್ದೇವೆ. ಆದರೆ, ಬಿಜೆಪಿ ಪಕ್ಷವು ಜನರ…
-
ಜಿಯೋ, ಏರ್ಟೆಲ್ ರೀಚಾರ್ಜ್ ದರ ಹೆಚ್ಚಳ
ಜನರ ಮೇಲೆ 20,000 ಕೋಟಿ ರೂಗಳ ಹೆಚ್ಚಿನ ಹೊರೆ ಯಾವುದೇ ವ್ಯವಹಾರದಲ್ಲಿ ಸ್ಪರ್ಧಾತ್ಮಕತೆ ಇದ್ದರೆ, ಕಂಪನಿಗಳು ಗ್ರಾಹಕರನ್ನು ಸೆಳೆಯಲು ಪೈಪೋಟಿಗಿಳಿದು ತಮ್ಮ ಉತ್ಪನ್ನಗಳ/ ಸೇವೆಗಳ ದರ ಕಡಿಮೆ ಮಾಡುತ್ತವೆ, ಇದರಿಂದ ಗ್ರಾಹಕರಿಗೆ ಅಗ್ಗದ ದರದಲ್ಲಿ ಸರಕು/ಸೇವೆಗಳು ದೊರೆಯುತ್ತವೆ ಎಂದು ಹೇಳುವವರಿದ್ದಾರೆ. ಮುಕ್ತ ಆರ್ಥಿಕ ನೀತಿಗಳ ಪರವಾಗಿ ಇರುವವರೂ ಇದನ್ನೇ ಹೇಳುತ್ತಾರೆ. ಕಂಪನಿಗಳು/ ವ್ಯಾಪಾರಸ್ಥರು ಒಬ್ಬರಿಗೊಬ್ಬರು ಪ್ರತಿಸ್ಪರ್ಧಿಗಳಂತೆ ಬಿಂಬಿಸುತ್ತಾ, ಸ್ಪರ್ಧಾತ್ಮಕವಾಗಿ ವರ್ತಿಸುತ್ತಾರಾದರೂ, ಬೆಲೆ ನಿರ್ಧರಿಸುವಲ್ಲಿ ಇವರೆಲ್ಲಾ ಒಂದಾಗುತ್ತಾರೆ. ಇದಕ್ಕೊಂದು ಉದಾಹರಣೆ ಖಾಸಗಿ ಟೆಲಿಕಾಂ ಕಂಪನಿಗಳು ಇತ್ತೀಚೆಗೆ ಹೆಚ್ಚಿಸಿದ ರೀಚಾರ್ಜ್…
-
“ನಮ್ಮ ಕರೆನ್ಸಿ ಮರಣಶಯ್ಯೆಯಲ್ಲಿದೆ” ಎಂದಿದ್ದ ಮೋದಿ
ಡಾಲರ್ ಎದುರು 86 ಕ್ಕೆ ಕುಸಿದ ರೂಪಾಯಿ ಮೌಲ್ಯ 2013ರ ಆಗಸ್ಟ್ 23 ರಂದು ಅಂದಿನ ಗುಜರಾತ್ ಮುಖ್ಯಮಂತ್ರಿ ಮೋದಿಯವರು ಸೌರಾಷ್ಟ್ರದಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡುತ್ತ, “ಭಾರತೀಯ ರೂಪಾಯಿ ಬಹಳಷ್ಟು ಸದ್ದು ಮಾಡುತ್ತಿದ್ದ ಸಮಯವಿತ್ತು. ಆದರೆ ಇಂದು ಅದು ತನ್ನ ಧ್ವನಿಯನ್ನು ಕಳೆದುಕೊಂಡಿದೆ. ಮತ್ತು ಅದೇ ರೀತಿ ನಮ್ಮ ಪ್ರಧಾನಿಯ ಧ್ವನಿಯನ್ನು ನಾವು ಕೇಳಲು ಸಾಧ್ಯವಾಗುತ್ತಿಲ್ಲ. ಇಬ್ಬರೂ ಮೂಕರಾಗಿದ್ದಾರೆ. ಇಂದು ನಮ್ಮ ಕರೆನ್ಸಿ ಮರಣಶಯ್ಯೆಯಲ್ಲಿದೆ. ಇದು ಟರ್ಮಿನಲ್ ಹಂತದಲ್ಲಿದೆ ಮತ್ತು ತುರ್ತಾಗಿ ವೈದ್ಯರ ಗಮನ ಬೇಕಿದೆ. ಪ್ರಸ್ತುತ…
-
ಉಬರ್ ಬಸ್ಸುಗಳು ಬೆಂಗಳೂರಿಗೂ ಬರಲಿವೆ; ಇನ್ನೆಷ್ಟು ದಿನ ಉಳಿಯಲಿವೆ ಬಿಎಂಟಿಸಿ ಬಸ್ಸುಗಳು?
ಒಂದು ವರ್ಷದ ಹಿಂದೆ ಕೊಲ್ಕತ್ತಾದಲ್ಲಿ ಬಸ್ ಸೇವೆಗೆ ಇಳಿದಿದ್ದ ‘ಉಬರ್’ ಅಪ್ಲಿಕೇಶನ್ಈಗ ದೆಹಲಿ ಪ್ರೀಮಿಯಂ ಬಸ್ಸುಗಳ ಯೋಜನೆಯಡಿಯಲ್ಲಿ ಬಸ್ಸುಗಳನ್ನು ನಿರ್ವಹಿಸಲು ದೆಹಲಿ ಸಾರಿಗೆ ಇಲಾಖೆಯಿಂದ ಅಗ್ರಿಗೇಟರ್ ಪರವಾನಗಿ (aggregator license) ಯನ್ನು ಪಡೆದುಕೊಂಡಿದೆ. ಬೆಂಗಳೂರು ಮತ್ತು ಹೈದಾರಾಬಾದ್ ನಂತಹ ನಗರಗಳಲ್ಲಿಯೂ ಕಾರ್ಯಾಚರಣೆ ನಡೆಸಲು ಉಬರ್ ಸಿದ್ದತೆ ನಡೆಸುತ್ತಿದೆ. ಈ ಮೂಲಕ ಇಡೀ ರಸ್ತೆ ಸಾರಿಗೆ ವಲಯವನ್ನೇ ನುಂಗಿಹಾಕುವಲ್ಲಿ ವಿದೇಶಿ ಮತ್ತು ಸ್ವದೇಶಿ ಖಾಸಗಿ ಅಗ್ರಿಗೇಟರ್ ಕಂಪನಿಗಳು ದಾಪುಗಾಲು ಹಾಕುತ್ತಿವೆ. ಕ್ರಮೇಣವಾಗಿ, ಸರ್ಕಾರ ಸಾರ್ವಜನಿಕ ಸಾರಿಗೆ ಸೇವೆ ಒದಗಿಸುವ…
-
ಹತ್ರಾಸ್: ಕಾಲ್ತುಳಿತದಿಂದ 121 ಜನರ ಬಲಿ: ಮೂಢನಂಬಿಕೆಗೆ ಕೊನೆಯೇ ಇಲ್ಲವೇ?
ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಸತ್ಸಂಗ ಸಭೆಯಲ್ಲಿ ಕಾಲ್ತುಳಿತಕ್ಕೆ ಸಿಲುಕಿ 121 ಅಮಾಯಕರ ಜೀವಗಳು ಬಹಳ ಸುಲಭವಾಗಿ ಬಲಿಯಾದವು. ಏನಿದು ವಿಕೃತಿ! ಮೂಢನಂಬಿಕೆಗೆಕೊನೆಯೇ ಇಲ್ಲವೇ? ಪಾದದ ದೂಳಿನಿಂದ ಭಕ್ತರ ಸಕಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ವ್ಯಾಪಕ ಪ್ರಚಾರ ಮಾಡಿದ ಸ್ವಯಂ ಘೋಷಿತ ದೇವದೂತ ಬೋಲೆ ಬಾಬಾ ಈ ಘೋರಘಟನೆಯ ಕೇಂದ್ರಬಿಂದು. ಲಕ್ಷಾಂತರ ಜನರು ಸೇರುವ ಸಂದರ್ಭಗಳಲ್ಲಿ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದ ಸ್ಥಳೀಯ ಆಡಳಿತದ ನಿಷ್ಕ್ರಿಯತೆ, ಬಾಬಾ ನೊಡನೆ ಇರುವ ರಾಜಕಾರಣಿಗಳ ನಂಟು,…