ವರ್ಗ: ಖಾಸಗೀಕರಣ

  • ವಿದ್ಯುತ್‌ ವಿತರಣೆಯೂ ಖಾಸಗಿ ಕಂಪನಿಗೆ!!

    ಟಾಟಾ ಪವರ್ ಕಂಪನಿ ಲಿಮಿಟೆಡ್ ಕರ್ನಾಟಕದ 19 ಜಿಲ್ಲೆಗಳಲ್ಲಿ ವಿದ್ಯುತ್ ವಿತರಣೆಗೆ ಪರವಾನಗಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು, ವಿದ್ಯುತ್ ಸರಬರಾಜು ಕಂಪನಿಗಳು ರೈತರು ಮತ್ತು ವಿದ್ಯುತ್ ಕ್ಷೇತ್ರದ ಕಾರ್ಮಿಕರಿಂದ ಬಂದ ತೀವ್ರ ವಿರೋಧದ ನಂತರ, 2026ರ ಜುಲೈ 3ರಂದು ಹಿಂತೆಗೆದುಕೊಂಡಿದೆ. ಇದು ಜನತೆಗೆ ದೊರೆತಿರುವ ಸದ್ಯದ ಗೆಲುವಷ್ಟೇ ಎಂಬುದನ್ನು ಮರೆಯಬಾರದು. ಕೈಗಾರಿಕಾ ಮತ್ತು ವಾಣಿಜ್ಯ ಗ್ರಾಹಕರಿಗೆ ನಿರಂತರ ಹಾಗೂ ಸ್ಪರ್ಧಾತ್ಮಕ ದರದಲ್ಲಿ ಗುಣಮಟ್ಟದ ವಿದ್ಯುತ್ ಒದಗಿಸುವುದು ಟಾಟಾ ಪವರ್‌ ನ ಮುಖ್ಯ ಉದ್ದೇಶವಾಗಿದೆ ಎಂದು ಅದು ಹೇಳುತ್ತಿದೆಯಾದರೂ,…

  • ಎಚ್ ಎಂ ಟಿ ಕಾರ್ಖಾನೆ ಮುಚ್ಚಲು ಕಾರ್ಮಿಕರು ಕಾರಣರೇ?

    ಕಾರ್ಖಾನೆಗಳು ಅನುಭವಿಸುವ ನಷ್ಟಕ್ಕೆ ಅಲ್ಲಿನ ಕಾರ್ಮಿಕರನ್ನು ಹೊಣೆ ಮಾಡುವ ಕೆಲಸ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹಾಗಾದರೆ, ಕಾರ್ಮಿಕರು ಕೆಲಸಮಾಡುವ ಯಾವುದೇ ಕಂಪನಿ ಲಾಭ ಗಳಿಸುತ್ತಿಲ್ಲವೇ? ಅದು ಖಾಸಗಿ ಕಂಪನಿ ಇರಬಹುದು, ಸಾರ್ವಜನಿಕ ಕಂಪನಿ ಇರಬಹುದು. ಕಾರ್ಮಿಕರ ಶ್ರಮವಿಲ್ಲದೇ ಲಾಭ ಗಳಿಸಲು ಸಾಧ್ಯವೇ? ವಾಚ್ ತಯ್ಯಾರಿಕಾ ಖಾಸಗೀ ಕಂಪನಿಗಳಿಂದ ಲಾಭ ಗಳಿಸಲು ಸಾಧ್ಯವೆಂದಾದರೆ, ಸಾರ್ವಜನಿಕ ಕಂಪನಿಗಳಿಂದ ಅದು ಏಕೆ ಸಾಧ್ಯವಿಲ್ಲ? ಖಾಸಗೀ ಕಾರ್ಖಾನೆಗಳ ಕಾರ್ಮಿಕರೂ ಸಂಘಟಿತರಾಗಿದ್ದಾರೆ. ಅವರೂ ತಮ್ಮ ಬೇಡಿಕೆಗಳನ್ನು ಹೋರಾಟದ ಮೂಲಕವೇ ಗಳಿಸಿಕೊಳ್ಳುತ್ತಿದ್ದಾರೆ. ಆದರೂ ಆ ಕಂಪನಿಗಳು…

  • ಶಿಕ್ಷಣ ಎಂಬುದು ಸರಕಲ್ಲ

    ಸರ್ಕಾರವು ಸಾರ್ವಜನಿಕರಿಗೆ ಶಿಕ್ಷಣವನ್ನು ಒದಗಿಸುವ ತನ್ನ ಸಾಮಾಜಿಕ ಜವಾಬ್ದಾರಿಯನ್ನು ಸಂಪೂರ್ಣವಾಗಿ ಖಾಸಗಿಯವರಿಗೆ ಹಸ್ತಾಂತರಿಸುವ ಕಡೆಗೆ ಪ್ರಯಾಣಿಸಿದೆ.  ಸಾಮಾಜಿಕ ಒಳಿತಿಗಾಗಿ ಶಿಕ್ಷಣ. ಶಿಕ್ಷಣ ಎಂಬುದು ಮಾರಟದ ಸರಕಲ್ಲ. ಇದನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಬಾರದು ಅಥವಾ ಖರೀದಿಸಬಾರದು. ನೆಲ್ಸನ್ ಮಂಡೇಲಾ ಅವರು “ಖಾಸಗೀಕರಣವು ಶಿಕ್ಷಣದ ಹಕ್ಕನ್ನು ಮೊಟಕುಗೊಳಿಸುತ್ತದೆ” ಎಂದು ಹೇಳಿದ್ದರು. ಖ್ಯಾತ ಶಿಕ್ಷಣ ತಜ್ಞ ಪಾವೊಲೊ ಫ್ರಿಯಾರಿ ಅವರ ಪ್ರಕಾರ, “ಶಿಕ್ಷಣವು ತುಳಿತಕ್ಕೊಳಗಾದ ಜನರ ಸೃಜನಶೀಲತೆಯನ್ನು ಹೊರತರುವುದು ಮತ್ತು ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ದಮನಕಾರಿ ಸಮಾಜದಲ್ಲಿ ಸ್ವಾತಂತ್ರ್ಯದ ಶಕ್ತಿಯನ್ನು…

  • ಖಾಸಗಿಯವರ ತೆಕ್ಕೆಗೆ ರೈಲು ನಿಲ್ದಾಣಗಳು

    2024ರ ಲೋಕಸಭಾ ಚುನಾವಣೆ ಘೊಷಣೆಯಾಗಲಿರುವ ಒಂದೆರಡು ವಾರಗಳ ಹಿಂದೆ, ಫೆಬ್ರವರಿ 26ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಬ್ಬರದ ಪ್ರಚಾರದೊಂದಿಗೆ ‘ಅಮೃತ್ ಭಾರತ್ ಸ್ಟೇಷನ್ ಯೋಜನೆ’ ಅಡಿಯಲ್ಲಿ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹರಡಿರುವ 553 ರೈಲು ನಿಲ್ದಾಣಗಳ ಪುನರಾಭಿವೃದ್ದಿಗೆ ಚಾಲನೆ ನೀಡಿದ್ದಾರೆ. ಈ ಮೂಲಕ, ಒಕ್ಕೂಟ ಸರ್ಕಾರದ ಗುರಿಯಾದ ರೈಲ್ವೇ ವಲಯವನ್ನು ಖಾಸಗಿಯವರಿಗೆ ಒಪ್ಪಿಸುವ ‘ಖಾಸಗೀಕರಣ’ದ ಹಾದಿಯ ಗುರಿಯತ್ತ ಮತ್ತೊಂದು ಹೆಜ್ಜೆ ಇಟ್ಟಂತಾಗಿದೆ. ಮಾತ್ರವಲ್ಲ, ಆರ್ ಎಸ್ ಎಸ್ ನ ಹಿಂದುತ್ವದ ಅಜೆಂಡಾಗಳನ್ನು ಜಾರಿಗೆ…

  • ಉಬರ್ ಬಸ್ಸುಗಳು ಬೆಂಗಳೂರಿಗೂ ಬರಲಿವೆ; ಇನ್ನೆಷ್ಟು ದಿನ ಉಳಿಯಲಿವೆ ಬಿಎಂಟಿಸಿ ಬಸ್ಸುಗಳು?

    ಒಂದು ವರ್ಷದ ಹಿಂದೆ ಕೊಲ್ಕತ್ತಾದಲ್ಲಿ ಬಸ್ ಸೇವೆಗೆ ಇಳಿದಿದ್ದ ‘ಉಬರ್’ ಅಪ್ಲಿಕೇಶನ್ಈಗ ದೆಹಲಿ ಪ್ರೀಮಿಯಂ ಬಸ್ಸುಗಳ ಯೋಜನೆಯಡಿಯಲ್ಲಿ ಬಸ್ಸುಗಳನ್ನು ನಿರ್ವಹಿಸಲು ದೆಹಲಿ ಸಾರಿಗೆ ಇಲಾಖೆಯಿಂದ ಅಗ್ರಿಗೇಟರ್ ಪರವಾನಗಿ (aggregator license) ಯನ್ನು ಪಡೆದುಕೊಂಡಿದೆ. ಬೆಂಗಳೂರು ಮತ್ತು ಹೈದಾರಾಬಾದ್ ನಂತಹ ನಗರಗಳಲ್ಲಿಯೂ ಕಾರ್ಯಾಚರಣೆ ನಡೆಸಲು ಉಬರ್ ಸಿದ್ದತೆ ನಡೆಸುತ್ತಿದೆ. ಈ ಮೂಲಕ  ಇಡೀ ರಸ್ತೆ ಸಾರಿಗೆ ವಲಯವನ್ನೇ ನುಂಗಿಹಾಕುವಲ್ಲಿ ವಿದೇಶಿ ಮತ್ತು ಸ್ವದೇಶಿ ಖಾಸಗಿ ಅಗ್ರಿಗೇಟರ್ ಕಂಪನಿಗಳು ದಾಪುಗಾಲು ಹಾಕುತ್ತಿವೆ. ಕ್ರಮೇಣವಾಗಿ, ಸರ್ಕಾರ ಸಾರ್ವಜನಿಕ ಸಾರಿಗೆ ಸೇವೆ ಒದಗಿಸುವ…