ಟ್ಯಾಗ್: ಬಿಜೆಪಿ
-
ಚುನಾವಣಾಬಾಂಡ್ ಎಂಬ ಬ್ರಹ್ಮಾಂಡ ಭ್ರಷ್ಟಾಚಾರ ಮತ್ತು ಕಮ್ಯೂನಿಸ್ಟ್ ಪಕ್ಷಗಳೆಂಬ ಅಪರಂಜಿ…
ಪಶ್ಚಿಮ ಬಂಗಾಳದಲ್ಲಿ ಸತತ ಮೂವತ್ತೈದು ವರ್ಷಗಳ ಆಡಳಿತ, ಕೇರಳದಲ್ಲಿ 1957 ರಿಂದ ಆಡಳಿತ, ತ್ರಿಪುರದಲ್ಲಿ ಸತತ ಇಪ್ಪತ್ತು ವರ್ಷಗಳ ಆಡಳಿತ, ಸ್ವಾತಂತ್ರ್ಯ ನಂತರದಲ್ಲಿ ಲೋಕಸಭೆಯ ಮೊದಲ ವಿರೋಧ ಪಕ್ಷ, ಹಲವಾರು ಮುಖ್ಯಮಂತ್ರಿಗಳು, ನೂರಾರು ಮಂತ್ರಿಗಳು, ಸಾವಿರಾರು ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ಸದಸ್ಯರು… ಆದರೂ ಈಗಲೂ ಒಂದು ಕಾರ್ಯಕ್ರಮವೋ, ಸಮ್ಮೇಳನವೋ ಮಾಡಬೇಕೆಂದರೆ ಎಡಪಕ್ಷಗಳ ಅದರಲ್ಲೂ #CPIM ಪಕ್ಷದ ಕಾರ್ಯಕರ್ತರು, ನಾಯಕರು ಬಕೇಟನ್ನೋ, ಟವಲನ್ನೋ ಹಿಡಿದು ಜನರ ಬಳಿ ಕೈಯೊಡ್ಡುತ್ತಾರೆ, ಜನತೆ ಪ್ರೀತಿಯಿಂದಲೋ, ದಾಕ್ಷಿಣ್ಯದಿಂದಲೋ ನೀಡುವ ಹಣವನ್ನು ಸಂತೋಷದಿಂದ…
-
ಲಲಿತ್ ಮೋದಿಯ 1,975 ಕೋಟಿ ರೂ. ವಂಚನೆ ಪ್ರಕರಣ ಏನಾಯ್ತು?
ತಾಯಿ ಕೇಂದ್ರ ಸಚಿವರಾಗಿ ಆರೋಪಿಯ ನೆರವಿಗೆ ನಿಂತರೆ, ಪತಿ ಮತ್ತು ಮಗಳು ಆರೋಪಿ ಪರ ವಕೀಲರು!! ಅವರು, ನಮ್ಮ ಸಂವಿಧಾನವನ್ನು ರಕ್ಷಣೆ ಮಾಡುವುದಾಗಿ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆಯಾಗಿದ್ದರು. ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ ಆರೋಪ ಹೊತ್ತು, ಜಾರಿ ನಿರ್ದೇಶನಾಲಯದ ತನಿಖೆಯಿಂದ ತಪ್ಪಿಸಿಕೊಳ್ಳಲು, ಲಂಡನ್‌ಗೆ ಪರಾರಿಯಾಗಿ, ಅಲ್ಲಿಯೇ ನೆಲೆಸಿರುವ ಆರೋಪಿಯೊಬ್ಬರ ವಿದೇಶ ಪ್ರಯಾಣ ದಾಖಲೆಗಳನ್ನು ಸುಗಮಗೊಳಿಸಲು ಆ ಸಚಿವರು ನೆರವು ನೀಡುತ್ತಾರೆ! ಅದನ್ನು ಮಾನವೀಯ ನೆಲೆಯಿಂದ ಮಾಡಿದ್ದಾಗಿ ಅವರು, ಅವರ ಪಕ್ಷ…
-
ಅಂದು ಪುಲ್ವಾಮ- ಹಲವು ಪ್ರಶ್ನೆಗಳಿಗೆ ಉತ್ತರ ಸಿಗಲಿಲ್ಲ; ಇಂದು ಪಹಲ್ಗಾಮ್- ಉತ್ತರ ಸಿಗುತ್ತದೆಯೇ?
ಕಾಶ್ಮೀರದಲ್ಲಿ ಮತ್ತೆ ಉಗ್ರರ ದಾಳಿ ನಡೆದಿದೆ. 2025ರ ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್ ಪಟ್ಟಣದ ಸನಿಹದಲ್ಲಿರುವ ಹುಲ್ಲುಗಾವಲಿನಲ್ಲಿ ನಡೆದ ಉಗ್ರರ ಗುಂಡಿನ ದಾಳಿಗೆ 28 ಪ್ರವಾಸಿಗರು ಬಲಿಯಾಗಿದ್ದಾರೆ. ಈ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಬಲಿಯಾದವರಲ್ಲಿ ಇಬ್ಬರು ಕನ್ನಡಿಗರು, ಇಬ್ಬರು ವಿದೇಶಿಗರು ಎಂದು ವರದಿಯಾಗಿದೆ. ಈ ರೀತಿಯ ದಾಳಿಗಳು ನಡೆದಾಗ ಜನರಿಂದ, ರಾಜಕೀಯ ಪಕ್ಷಗಳ ನಾಯಕರಿಂದ ಮುಸ್ಲಿಂ ಉಗ್ರವಾದಿಗಳು ಮತ್ತು ಪಾಕಿಸ್ತಾನದ ವಿರುದ್ದ ಆಕ್ರೋಶಗಳು ವ್ಯಕ್ತವಾಗುತ್ತವೆ. ಹಿಂದುತ್ವವಾದಿಗಳಿಂದ ಇದನ್ನು ಮುಸ್ಲಿಮರ ವಿರುದ್ದ ತಿರುಗಿಸುವ ಪ್ರಯತ್ನವೂ ನಡೆಯುತ್ತದೆ.…
-
ಸ್ಮಾರ್ಟ್ ಮೀಟರ್ ಹಗರಣದ ಚರ್ಚೆಯೂ, ಮುಚ್ಚಿಟ್ಟ ಗ್ರಾಹಕರ ಸುಲಿಗೆಯ ನೀತಿಯೂ
ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ಗುತ್ತಿಗೆ ಹಗರಣ ದೊಡ್ಡ ಸುದ್ದಿಯಾಗಿದೆ. ರಾಜಕೀಯ ಪಕ್ಷಗಳು ಈ ಹಗರಣಗದ ಬಗ್ಗೆಯಷ್ಟೇ ಮಾತನಾಡುತ್ತಿವೆ. 2025-26ರ ರಾಜ್ಯ ಬಜೆಟ್ ಅಧಿವೇಶನದಲ್ಲಿ ಬಿಜೆಪಿ ನಾಯಕರೊಬ್ಬರು ಸ್ಮಾರ್ಟ್ ಮೀಟರ್ ಕುರಿತೇ 45 ನಿಮಷಗಳ ಕಾಲ ಮಾತನಾಡಿದರೂ, ಸ್ಮಾರ್ಟ್ ಮೀಟರ್ ಅಳವಡಿಕೆಯ ಉದ್ದೇಶವೇನು? ಆ ನಂತರ, ಗ್ರಾಹಕರು ಅನುಭವಿಸುವ ನೋವೇನು? ಕೃಷಿ ಪಂಪ್ ಸೆಟ್ ಹೊಂದಿರುವ ರೈತರ ಮತ್ತು ಕೃಷಿಯ ಮೇಲಾಗುವ ಪರಿಣಾಮಗಳೇನು? ಈ ಅಂಶಗಳ ಬಗ್ಗೆ ಏನೂ ಮಾತನಾಡಲಿಲ್ಲ. ಸಮವರ್ತಿ ಪಟ್ಟಿಯಲ್ಲಿರುವ ವಿದ್ಯುತ್ ಕ್ಷೇತ್ರದ ರಾಜ್ಯಗಳ ಹಕ್ಕನ್ನು…
-
ಚನ್ನಪಟ್ಟಣದಲ್ಲಿ ಜೆಡಿಎಸ್ ಸೋಲು:
ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಪಕ್ಷಗಳ ಬಲ ಕುಸಿದು ಕ್ರಮೇಣ ನಾಶವಾಗುತ್ತವೆ ಇತ್ತೀಚೆಗೆ ನಡೆದ ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯಲ್ಲಿ ಜನತಾ ದಳ (ಜ್ಯಾತ್ಯಾತೀತ) ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋತಿದ್ದಾರೆ. ಅದರ ನಾಯಕರು ಈ ಸೋಲಿಗೆ ಯಾವ್ಯಾವುದೋ ಕಾರಣಗಳನ್ನು ತೋರಿಸುತ್ತಿದ್ದಾರೆ. ಅವುಗಳಲ್ಲಿ ಮುಸ್ಲಿಮರು ಜೆಡಿಎಸ್ ಗೆ ಮತ ಹಾಕಲಿಲ್ಲ ಎಂಬುದೊಂದು ಕಾರಣ. ಇದು ಬಹುತೇಕ ನಿಜವೂ ಆಗಿರಬಹುದು. ಆದರೆ, ಒಮ್ಮೆ ಬಿಜೆಪಿ ಅಥವಾ ಸಂಘಪರಿವಾರದ ಜೊತೆಗೂಡಿದ, ಅದರ ಜೊತೆ ಚುನಾವಣಾ ಮೈತ್ರಿ ಮಾಡಿಕೊಂಡ ಯಾವ ಪಕ್ಷಗಳೂ ಮತ್ತಷ್ಟು ಬೆಳೆಯಲು…
-
ಚುನಾವಣಾ ಬಾಂಡ್: ಬಿಜೆಪಿಯ ಸಂಘಟಿತ ಭ್ರಷ್ಟಾಚಾರ
ಬೆಂಗಳೂರಿನ ತಿಲಕ್ ನಗರದ ಪೊಲೀಸರು ‘ಚುನಾವಣಾ ಬಾಂಡ್ ಗಳ ಸುಲಿಗೆ ಪ್ರಕರಣ’ದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕರ್ನಾಟಕ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿಯ ಕೇಂದ್ರ ಮತ್ತು ರಾಜ್ಯದ ನಾಯಕರ ವಿರುದ್ದ ಎಫ್ ಐ ಆರ್ ದಾಖಲಿಸಿದ್ದಾರೆ. ಇದರಿಂದಾಗಿ ಬಿಜೆಪಿಯ ಸಂಘಟಿತ ಭ್ರಷ್ಟಾಚಾರ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಚುನಾವಣಾ ಬಾಂಡ್‌ಗಳು ಅಸಾಂವಿಧಾನಿಕ, ಮಾಹಿತಿ ಹಕ್ಕು ಕಾಯಿದೆಯ ಉಲ್ಲಂಘನೆ ಮತ್ತು ಕ್ವಿಡ್ ಪ್ರೊ ಕ್ವೋಗೆ ಕಾರಣವಾಗುತ್ತದೆ ಎಂದು ಪರಿಗಣಿಸಿ ಸುಪ್ರೀಂ ಕೋರ್ಟ್ ಈ ವರ್ಷ…
-
ಚುನಾವಣಾ ಬಾಂಡ್: ಬಿಜೆಪಿಗೆ ಬಂದ ಹಣ 9,200 ಕೋಟಿ ರೂ
ಬಿಜೆಪಿ ಪಕ್ಷಕ್ಕೆ ಹರಿದು ಬರುತ್ತಿರುವ ಚುನಾವಣಾ ನಿಧಿ ಎಷ್ಟು? ಆ ನಿಧಿಯ ಮೂಲ ಯಾವುದು? ಬಿಜೆಪಿ ಒಂದೆಡೆ ‘ಪಿಎಂ ಕೇರ್ ನಿಧಿ’ ಹೆಸರಿನಲ್ಲಿ ಸಂಗ್ರಹಿಸಿದ ಹಣ ಮತ್ತು ಅದನ್ನು ಯಾವುದಕ್ಕೆ ಬಳಸಲಾಗುತ್ತದೆ ಎಂಬ ವಿವರಗಳನ್ನು ಸಾರ್ವಜನಿಕರಿಂದ ಮುಚ್ಚಿಡುತ್ತದೆ. ಮತ್ತೊಂದಡೆ, ‘ಚುನಾವಾಣಾ ಬಾಂಡ್’ ಗಳ ಮೂಲಕ ಪಕ್ಷದ ನಿಧಿಗೆ ಯಾವ ಮೂಲದಿಂದ ಮತ್ತು ಎಷ್ಟು ಹಣ ಬಂದಿದೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಸಲು ನಿರಾಕರಿಸುತ್ತಿದೆ. ದೇಣಿಗೆ ಪಡೆಯುವ ಹಕ್ಕು ರಾಜಕೀಯ ಪಕ್ಷಗಳಿಗಿದ್ದರೆ, ಅದನ್ನು ಯಾರು ಕೊಟ್ಟರು ಎಂದು ತಿಳಿಯುವ ಹಕ್ಕು…
-
ಗೋಮಾಂಸ ರಪ್ತು ಕಂಪನಿಗಳಿಂದ ಬಿಜೆಪಿಗೆ 4.5 ಕೋಟಿ ರೂ. ಚುನಾವಣಾ ದೇಣಿಗೆ
ಕಳಚಿ ಬಿದ್ದ ಗೋರಕ್ಷರೆಂಬ ಮುಖವಾಡ “ಗೋವು ಹಿಂದೂಗಳಿಗೆ ಮಾತೆ ಇದ್ದಹಾಗೆ, ಅವುಗಳು ನಮಗೆ ಹಾಲು ಕೊಡುತ್ತವೆ. ಗೋವುಗಳನ್ನು ಕೊಂದು ತಿಂದರೆ ನಮ್ಮ ಹೆತ್ತ ತಾಯಿಯನ್ನೇ ಕೊಂದು ತಿಂದಂತೆ, ಯಾರಾದರೂ ಹೆತ್ತ ತಾಯಿಯನ್ನು ಕೊಂದು ತಿನ್ನುತ್ತಾರೆಯೇ? ಗೋಭಕ್ಷಕರು ರಾಕ್ಷಕರು. ಅವರು ಹಿಂದೂ ಧರ್ಮದ ವಿರೋಧಿಗಳು….” ಹೀಗೆ ಬಿಜೆಪಿ ಮತ್ತು ಹಿಂದುತ್ವವಾದಿ ನಾಯಕರು ಪುಂಕಾನುಪುಂಕ ಭಾಷಣ ಬಿಗಿದು, ಜನರಲ್ಲಿನ ಧಾರ್ಮಿಕ ಭಾವನೆಗಳನ್ನು ಕೆರಳಿಸುತ್ತಾರೆ. ಗೋವುಗಳನ್ನು ಪೂಜ್ಯ ಭಾವನೆಯಿಂದ ನೋಡುವ ಹಿಂದೂಗಳೂ ಬಿಜೆಪಿಯವರ ಇಂತಹ ಕಪಟ ಮಾತುಗಳನ್ನು ನಂಬಿ ಅವರನ್ನು ಬೆಂಬಲಿಸುತ್ತಾರೆ.…
-
ಪಿಎಂ ಸೂರ್ಯ ಘರ್: 300 ಯೂನಿಟ್ ಉಚಿತ ವಿದ್ಯುತ್!! ಏನಿದು ಮೋದಿಯವರ ಮಾತಿನ ಮೋಡಿ?
ಭಾರತದ ಒಂದು ಕೋಟಿ ಕುಟುಂಬಗಳಿಗೆ ‘ಪ್ರಧಾನ ಮಂತ್ರಿ ಸೂರ್ಯಘರ್ ಮುಫ್ತ್ ಬಿಜ್ಲೀ’ ಯೋಜನೆಯಡಿ ಪ್ರತಿ ತಿಂಗಳು 300 ಯೂನಿಟ್ ಉಚಿತ ವಿದ್ಯುತ್ ಒದಗಿಸುವುದಾಗಿ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024, ಫೆಬ್ರವರಿ 1 ರಂದು ತಮ್ಮ ಮಧ್ಯಂತರ ಬಜೆಟ್ಭಾ ಷಣದಲ್ಲಿ ಘೋಷಿಸಿದರು. ಇದೇ ಘೋಷಣೆಯನ್ನು ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದೆ. ಈ ಮನೆಗಳ ಸಂಖ್ಯೆಯನ್ನು ಈಗ 3 ಕೋಟಿಗೆ ಹೆಚ್ಚಿಸಿದೆ. ಇದರಿಂದ ವಾರ್ಷಿಕ 15,000-18,000 ರೂ.ವರೆಗೆ ಉಳಿತಾಯವಾಗುತ್ತದೆ”ಎಂದು ಹೇಳುತ್ತಾರೆ. ಏನಿದು ಉಚಿತ…