
2012ರಲ್ಲಿ ಮನಮೋಹನ್ ಸಿಂಗ್ ಸರ್ಕಾರವನ್ನು ಅಲುಗಾಡಿಸಿದ ಬಹುಕೋಟಿ ಮೌಲ್ಯದ ಹಗರಣಗಳಲ್ಲಿ ಕಲ್ಲಿದ್ದಲು ಹಗರಣ ಮತ್ತು 2ಜಿ ಹಗರಣ ಮೊದಲೆರಡು ಸ್ಥಾನಲ್ಲಿದ್ದವು. ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ಕಂಪನಿಗಳಿಗೆ ಕಲ್ಲಿದ್ದಲು ಬ್ಲಾಕ್‌ಗಳನ್ನು ಹೇಗೆ ನೀಡಲಾಯಿತು ಎಂಬುದರ ಕುರಿತಾಗಿ 2012ರಲ್ಲಿ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ವರದಿ ಬಂದ ನಂತರ ಕಲ್ಲಿದ್ದಲು ಹಗರಣ ರಾಷ್ಟ್ರೀಯ ದೊಡ್ಡ ಹಗರಣವಾಗಿ ಮಾರ್ಪಟ್ಟಿದೆ.
2004 ಮತ್ತು 2009ರ ನಡುವೆ ಪಾರದರ್ಶಕವಲ್ಲದ ರೀತಿಯಲ್ಲಿ 194 ಕಲ್ಲಿದ್ದಲು ಬ್ಲಾಕ್‌ಗಳನ್ನು ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಖಾಸಗಿ ಕಂಪನಿಗಳಿಗೆ ಅಸಮರ್ಥ ರೀತಿಯಲ್ಲಿ ಹಂಚಿಕೆ ಮಾಡಲಾಗಿದೆ ಎಂದು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ತನ್ನ ವರದಿಯಲ್ಲಿ ಬಹಿರಂಗಪಡಿಸಿತ್ತು.
ಮೌಲ್ಯಯುತವಾದ ನೈಸರ್ಗಿಕ ಸಂಪನ್ಮೂಲವನ್ನು ಹಂಚಿಕೆ ಮಾಡುವ ಬದಲು ಸರ್ಕಾರವು ಸ್ಪರ್ಧಾತ್ಮಕ ಬಿಡ್ಡಿಂಗ್‌ಗೆ ಹೋಗಬೇಕಿತ್ತು ಎಂದು ಸಿಎಜಿ ಹೇಳಿತ್ತು. ಅನೇಕ ರಾಜಕಾರಣಿಗಳು ಖಾಸಗಿ ಸಂಸ್ಥೆಗಳ ಪರವಾಗಿ ಲಾಬಿ ಮಾಡಿದ್ದಾರೆ ಎಂದು ಹೇಳಿತ್ತು. ಹಲವಾರು ಘಟಕಗಳು ಗಣಿಗಾರಿಕೆಗೆ ಅಗತ್ಯಕ್ಕಿಂತ ಹೆಚ್ಚಿನ ಬ್ಲಾಕ್‌ಗಳನ್ನು ಪಡೆದುಕೊಂಡವು ಮತ್ತು ಹೆಚ್ಚುವರಿ ಕಲ್ಲಿದ್ದಲನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದವು, ಇದರ ಪರಿಣಾಮವಾಗಿ ಸರ್ಕಾರಕ್ಕೆ ಬಾರೀ ನಷ್ಟವಾಗಿದೆ ಎಂದು ಅದು ಹೇಳಿತು. ಸಿಎಜಿ ಆರಂಭದಲ್ಲಿ ಬೊಕ್ಕಸಕ್ಕೆ 10.6 ಲಕ್ಷ ಕೋಟಿ ರೂಪಾಯಿಗಳ ಬೃಹತ್ ನಷ್ಟವನ್ನು ಅಂದಾಜಿಸಿತ್ತಾದರೂ, ಅದು ಸಂಸತ್ತಿನಲ್ಲಿ ಮಂಡಿಸಿದ ಅದರ ಅಂತಿಮ ವರದಿಯು 1.86 ಲಕ್ಷ ಕೋಟಿ ಎಂದು ಹೇಳಿದೆ.
ಅಂದು ಸಂಸತ್ತಿನಲ್ಲಿ ಬಿಜೆಪಿ ಗದ್ದಲ
ಈ ಹಗರಣ ಬೆಳಕಿಗೆ ಬರುತ್ತಿದ್ದಂತೆ ಭಾರತೀಯ ಜನತಾ ಪಕ್ಷ ಇದರ ವಿರುದ್ದ ಹೋರಾಟಕ್ಕೆ ಮುಂದಾಯಿತು. 2012ರ ಸಂಸತ್ತಿನ ಮುಂಗಾರು ಅಧಿವೇಶದಲ್ಲಿ ಬಿಜೆಪಿ ಸದಸ್ಯರು ‘ಹಂಚಿಕೆಯಾದ ಕಲ್ಲಿದ್ದಲು ನಿಕ್ಷೇಪಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಗದ್ದಲ ಮಾಡಿದರು. ರದ್ದುಗೊಳಿಸದಿದ್ದರೆ ಚರ್ಚೆಗೆ ಅವಕಾಶ ನೀಡುವುದಿಲ್ಲ ಎಂಬ ತಮ್ಮ ಪಕ್ಷದ ನಿಲುವನ್ನು ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರು ಸಮರ್ಥಿಸಿಕೊಂಡರು. ಅವರನ್ನು ಬೆಂಬಲಿಸಿದ ರಾಜ್ಯಸಭಾ ಸದಸ್ಯ ಅರುಣ್ ಜೇಟ್ಲಿ ಕಲ್ಲಿದ್ದಲು ನಿಕ್ಷೇಪಗಳ ಹಂಚಿಕೆಯಲ್ಲಿನ ಅಕ್ರಮಗಳನ್ನು “ಯುಪಿಎ (ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್) ಕ್ಲೆಪ್ಟೋಕ್ರಸಿ (ಕಳ್ಳರ ಆಳ್ವಿಕೆ) ಗೆ ಬದ್ಧವಾಗಿರುವ ಆಡಳಿತವಾಗಿದೆ” ಎಂದರು. ಈ ಅಧಿವೇಶನದ ನಷ್ಟವು ನೈಸರ್ಗಿಕ ಸಂಪನ್ಮೂಲಗಳ ಹಂಚಿಕೆಯಲ್ಲಿನ ಭ್ರಷ್ಟಾಚಾರವನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ ಎಂದು ಜೇಟ್ಲಿ ಹೇಳಿದರು. ಪ್ರಧಾನಿ ರಾಜೀನಾಮೆಗೆ ಬಿಜೆಪಿ ಒತ್ತಾಯಿಸಿತು.
ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿಯೂ ಕಲ್ಲಿದ್ದಲು ಹಗರಣ ದೊಡ್ಡ ಸದ್ದು ಮಾಡಿತು. ಈ ಆಂದೋಲನದಲ್ಲಿ ಹೆಚ್ಚು ಜನರು ಸೇರುವಂತೆ ಮಾಡುವಲ್ಲಿ ಬಿಜೆಪಿ ಮತ್ತು ಸಂಘಪರಿವಾದ ಪಾತ್ರ ದೊಡ್ಡದಿದೆ. 1993ರಿಂದ ವಿವಿಧ ಸರ್ಕಾರಗಳು 200ಕ್ಕೂ ಹೆಚ್ಚು ಕಲ್ಲಿದ್ದಲು ನಿಕ್ಷೇಪಗಳನ್ನು ಹಂಚಿಕೆ ಮಾಡಿರುವುದು ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್ 2014ರಲ್ಲಿ ತೀರ್ಪು ನೀಡಿತು.
ಅಂತ್ಯ ಕಾಣದೆ ತೆವಳುತ್ತಾ ಸಾಗುತ್ತಿದೆ
ದಿ ಇಂಡಿಯನ್ ಎಕ್ಸ್ ಪ್ರೆಸ್ ಮೇ 19, 2022ರ ವರದಿಯ ಪ್ರಕಾರ, ಜುಲೈ 15, 2022 ರೊಳಗೆ 50ಕ್ಕೂ ಹೆಚ್ಚು ಪ್ರಕರಣಗಳ ಸ್ಥಿತಿ ವರದಿಯನ್ನು ಸಲ್ಲಿಸುವಂತೆ ಜಾರಿ ನಿರ್ದೇಶನಾಲಯವನ್ನು ಸುಪ್ರೀಂ ಕೋರ್ಟ್ ಕೇಳಿದೆ. ಕಲ್ಲಿದ್ದಲು ಹಗರಣದ ಪ್ರಕರಣಗಳು ಸುಪ್ರೀಂ ಕೋರ್ಟ್‌ನ ಕಟ್ಟುನಿಟ್ಟಿನ ಮೇಲ್ವಿಚಾರಣೆಯಲ್ಲಿವೆ, ಇದು ಪ್ರಕರಣಗಳ ತನಿಖೆ ನಡೆಸುತ್ತಿರುವ ಎರಡು ಸಂಸ್ಥೆಗಳಾದ ಸಿಬಿಐ ಮತ್ತು ಇಡಿಯಿಂದ ನಿಯತಕಾಲಿಕವಾಗಿ ಸ್ಥಿತಿ ವರದಿಗಳನ್ನು ಕೇಳುತ್ತದೆ. ಸುಪ್ರೀಂ ಕೋರ್ಟ್ ನಿರ್ದೇಶನಗಳ ಪ್ರಕಾರ, ಕಲ್ಲಿದ್ದಲು ಬ್ಲಾಕ್‌ಗಳ ಪ್ರಕರಣಗಳಿಗೆ ಸಂಬಂಧಿಸಿದ ಅಧಿಕಾರಿಗಳನ್ನು ಅದರ ಅನುಮತಿಯಿಲ್ಲದೆ ವರ್ಗಾಯಿಸಲಾಗುವುದಿಲ್ಲ. ಆದ್ದರಿಂದ ಅಧಿಕಾರಿಯನ್ನು ಬಿಡುಗಡೆ ಮಾಡಬೇಕಾದಾಗ ಏಜೆನ್ಸಿಗಳು ಅದನ್ನು ಸಂಪರ್ಕಿಸುತ್ತವೆ. ಏಜೆನ್ಸಿಯಲ್ಲಿ ನಾಲ್ವರು ಅಧಿಕಾರಿಗಳ ಅಧಿಕಾರಾವಧಿ ಪೂರ್ಣಗೊಂಡಿರುವುದರಿಂದ ಅವರನ್ನು ಬಿಡುಗಡೆ ಮಾಡಬೇಕೆಂದು ಇಡಿ ಮನವಿ ಮಾಡಿದ ಪ್ರಕರಣದಲ್ಲಿ ನ್ಯಾಯಾಲಯದಿಂದ ಈ ನಿರ್ದೇಶನಗಳು ಬಂದವು.
ಅಂತೂ, ದಶಕಗಳು ಕಳೆದರೂ, ಭ್ರಷ್ಟಾಚಾರ ವಿರುದ್ದದ ಹೋರಾಟದ ಮೂಲಕ ಬಿಜೆಪಿ ಅಧಿಕಾರಕ್ಕೆ ಬಂದು 11 ವರ್ಷ ಕಳೆದರೂ ಕಲ್ಲಿದ್ದಲು ಹಗರಣಗಳ ಪ್ರಕರಣಗಳು ಅಂತ್ಯ ಕಾಣದೆ ತೆವಳುತ್ತಾ ಸಾಗುತ್ತಿವೆ. ಪ್ರಕರಣದಲ್ಲಿ ಭಾಗಿಯಾದ ಕೆಲವು ಖಾಸಗಿ ಕಂಪನಿಗಳ ಬರಳೆಣಿಕೆಯ ಅಧಿಕಾರಿಗಳನ್ನು ದೋಷಿಗಳು ಎಂದು ತೀರ್ಪು ನೀಡಲಾಗಿದ್ದರೂ, ಈ ಹಗರಣದಿಂದ ಲಾಭ ಪಡೆದ ಕಂಪನಿಗಳ ಮಾಲೀಕರ ವಿರುದ್ದ ಯಾವುದೇ ಕ್ರಮಕ್ಕೆ ಮುಂದಾಗದಿರುವುದನ್ನು ನಾವಿಲ್ಲಿ ಗಮನಿಸಬೇಕು.
ಕುಮಾರ ಮಂಗಳಂ ಬಿರ್ಲಾ ಪಾಲುದಾರ!
ಕಲ್ಲಿದ್ದಲು ಹಗರಣದಲ್ಲಿ ಹಲವು ರಾಜಕಾರಣಿಗಳು ಮತ್ತು ಸರ್ಕಾರದ ಅಧಿಕಾರಿಗಳು ಖಾಸಗಿ ಕಂಪನಿಗಳ ಜೊತೆ ಷಾಮೀಲಾಗಿದ್ದಾರೆ. ಇವರು ಖಾಸಗಿ ಸಂಸ್ಥೆಗಳು ಕೊಡುವ ಒಂದಷ್ಟು ಲಂಚಕ್ಕೆ ಕೈಯೊಡ್ಡಿ ಹಗರಣದಲ್ಲಿ ಭಾಗಿಯಾದರು. ಆದರೆ, ಲಂಚ ಕೊಟ್ಟು ಅಧಿಕ ಲಾಭ ಪಡೆದವರು ಖಾಸಗಿ ಉದ್ಯಮಿಗಳು. ಈ ಉದ್ಯಮಿಗಳಲ್ಲಿ ಪ್ರಮುಖ ಹೆಸರು ಕೇಳಿಬಂದಿದ್ದು ಆದಿತ್ಯ ಬಿರ್ಲಾ ಗ್ರೂಪ್‌ನ ಕುಮಾರ ಮಂಗಳಂ ಬಿರ್ಲಾ.
ಒಡಿಶಾದ ಎರಡು ಕಲ್ಲಿದ್ದಲು ಬ್ಲಾಕ್‌ಗಳನ್ನು 2005ರಲ್ಲಿ ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಪಿ.ಸಿ. ಪರಾಖ್ ಅವರು ಕೈಗಾರಿಕೋದ್ಯಮಿ ಕುಮಾರ್ ಮಂಗಲಂ ಬಿರ್ಲಾ ಒಡೆತನದ ಅಲ್ಯೂಮಿನಿಯಂ ತಯಾರಿಕಾ ಕಂಪನಿಯಾದ ಹಿಂಡಾಲ್ಕೊಗೆ ಅಕ್ರಮವಾಗಿ ನೀಡಿದ್ದರು ಎಂದು ಆರೋಪಿಸಿ, ಸಿಬಿಐ 2013ರ ಅಕ್ಬೋಬರ್ ನಲ್ಲಿ ಕುಮಾರ್ ಮಂಗಲಂ ಬಿರ್ಲಾ ಹಾಗೂ ಪಿ.ಸಿ. ಪರಾಖ್ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಅನ್ನು ದಾಖಲಿಸಿತು. ಪಾರದರ್ಶಕ ಹರಾಜು ಪ್ರಕ್ರಿಯೆಯಿಲ್ಲದೆ ಕಡಿಮೆ ಬೆಲೆಯ ಕಲ್ಲಿದ್ದಲು ಪರವಾನಗಿಗಳನ್ನು ಇಂಡಾಲ್ಕೊ ಕಂಪನಿಗೆ ನೀಡಲಾಗಿದೆ ಎಂದು ಇದರಲ್ಲಿ ಸಿಬಿಐ ಆರೋಪಿಸಿತ್ತು.
ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ ಹಿಂಡಾಲ್ಕೊ ತಾನು ಯಾವುದೇ ತಪ್ಪನ್ನು ಮಾಡಿಲ್ಲ ಎಂದು ಹೇಳಿತು. ಮತ್ತು 2005ರಲ್ಲಿ ಹಂಚಿಕೆ ನಡೆದಾಗ ಕಲ್ಲಿದ್ದಲು ಸಚಿವಾಲಯದ ಉಸ್ತುವಾರಿ ವಹಿಸಿದ್ದ ಪ್ರಧಾನಿ ಸಿಂಗ್, ಹಿಂಡಾಲ್ಕೊಗೆ ಬ್ಲಾಕ್ ನೀಡುವ ನಿರ್ಧಾರವನ್ನು ಸಮರ್ಥಿಸಿಕೊಂಡರು.
ಕಲ್ಲಿದ್ದಲು ಸಚಿವರಾಗಿ ಡಾ. ಮನಮೋಹನ್ ಸಿಂಗ್ ಅವರು ಹಂಚಿಕೆಯ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಿದ ಪರಾಖ್ ಅವರು, ಪ್ರಧಾನಿಯನ್ನು ಏಕೆ ಆಪಾದಿತ ಸಹ-ಸಂಚುಕೋರ ಎಂದು ಹೆಸರಿಸಿಲ್ಲ ಎಂಬುದನ್ನು ವಿವರಿಸುವಂತೆ ಅವರು ಸಿಬಿಐಗೆ ಕೇಳಿದರು. ಆದರೆ, ಆರಂಭಿಕ ಸುತ್ತಿನ ವಿಚಾರಣೆಯ ಸಮಯದಲ್ಲಿ, ಪರಾಖ್ ಅವರ ಕ್ರಮಗಳಿಗೆ ತೃಪ್ತಿಕರ ವಿವರಣೆಯನ್ನು ನೀಡಲು ಸಾಧ್ಯವಾಗಲಿಲ್ಲ ಮತ್ತು ಅವರು ಪ್ರಧಾನಿಯನ್ನು ಆರೋಪಿಸಲಿಲ್ಲ ಎಂದು ಸಿಬಿಐ ಹೇಳುತ್ತದೆ.
ನಂತರ ಬಿರ್ಲಾರವರು ಹಣಕಾಸು ಸಚಿವ ಪಿ. ಚಿದಂಬರಂ ಅವರನ್ನು ಭೇಟಿ ಮಾಡಿ ಕಲ್ಲಿದ್ದಲು ಹಗರಣದಲ್ಲಿ ಸಿಬಿಐ ತನ್ನ ವಿರುದ್ಧ ದಾಖಲಿಸಿರುವ ಎಫ್‌ಐಆರ್ ಕುರಿತು ಮಾತುಕತೆ ನಡೆಸಿದರು. ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, “ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ಎಫ್‌ಐಆರ್ ಬಗ್ಗೆ ಚಿಂತಿಸುವುದಿಲ್ಲ” ಎಂದು ಹೇಳಿದರು.
2014ರ ಆಗಸ್ಟ್ ನಲ್ಲಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ದೆಹಲಿ ನ್ಯಾಯಾಲಯದಲ್ಲಿ ಮುಕ್ತಾಯದ ವರದಿಯನ್ನು ಸಲ್ಲಿಸಿತು. ‘ಆರೋಪದಲ್ಲಿ “ಅಪರಾಧದ ಯಾವುದೇ ಪುರಾವೆ” ಕಂಡುಬಂದಿಲ್ಲ’ ಎಂಬ ಕಾರಣ ನೀಡಿ ತನಿಖೆಯನ್ನು ಕೊನೆಗೊಳಿಸಲು ಬಯಸುವುದಾಗಿ ಸಿಬಿಐ ಹೇಳಿತು.
2015ರಲ್ಲಿ ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಪಿ ಸಿ ಪರಾಖ್, ಕೈಗಾರಿಕೋದ್ಯಮಿ ಕುಮಾರ ಮಂಗಲಂ ಬಿರ್ಲಾ ಮತ್ತು ಇತರರನ್ನು ಒಳಗೊಂಡಿರುವ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳವು ಮಂಗಳವಾರ ತನ್ನ ಮುಂದಿನ ತನಿಖೆಯ ಪ್ರಗತಿ ವರದಿಯನ್ನು ಮುಚ್ಚಿದ ಕವರ್‌ನಲ್ಲಿ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದೆ.
ಮುಂದಿನ ತನಿಖೆಯ ಸಮಯದಲ್ಲಿ ದಾಖಲಾದ ವಿವಿಧ ವ್ಯಕ್ತಿಗಳ ಹೇಳಿಕೆಗಳನ್ನು ಸಹ ಸಲ್ಲಿಸುತ್ತಿದ್ದೇವೆ ಎಂದು ಸಂಸ್ಥೆ ನ್ಯಾಯಾಲಯಕ್ಕೆ ತಿಳಿಸಿತು ಮತ್ತು ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸುವವರೆಗೆ ಮುಚ್ಚಿದ ಕವರ್ ಅನ್ನು ತೆರೆಯದಂತೆ ನ್ಯಾಯಾಧೀಶರಿಗೆ ಮನವಿ ಮಾಡಿದೆ.
ಬಿರ್ಲಾ ಪರವಾಗಿ ಒಂದಾದ ಉದ್ಯಮಿಗಳು ಮತ್ತು ರಾಜಕಾರಣಿಗಳು
ಕಲ್ಲಿದ್ದಲು ಹಗರಣಕ್ಕೆ ಸಂಬಂದಿಸಿದಂತೆ ಹಿಂಡಾಲ್ಕೋ ಕಂಪನಿಯ ಮಾಲೀಕ ಕುಮಾರ ಮಂಗಳಂ ಬಿರ್ಲಾ ವಿರುದ್ದ ಸಿಬಿಐ ಎಪ್ ಐ ಆರ್ ದಾಖಲಿಸಿದ ಸುದ್ದಿ ಕೇಳಿ ಉದ್ಯಮಪತಿಗಳಲ್ಲಿ ನಡುಕ ಹುಟ್ಟಿಸಿತು. ಪ್ರಧಾನಿ ವಿರುದ್ದದ ಆರೋಪಗಳನ್ನು ತನಿಖೆ ನಡೆಸುವಂತೆ ದೊಡ್ಡ ದ್ವನಿಯಲ್ಲಿ ಒತ್ತಾಯಿಸುತ್ತಿದ್ದ ಬಿಜೆಪಿ, ಕುಮಾರ ಮಂಗಳಂ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಹೇಳಲಿಲ್ಲ. ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರವನ್ನು ಹಿಗ್ಗಾ ಮುಗ್ಗ ಟೀಕಿಸುವ ಅಂದಿನ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರು ಕುಮಾರ ಮಂಗಳಂ ಹಗರಣದ ಬಗ್ಗೆ ಮಾತನಾಡಲಿಲ್ಲ. ಉದಾರೀಕಣ, ಖಾಸಗೀಕರಣ ಮತ್ತು ಜಾಗತೀಕರಣ (ಎಲ್ ಪಿಜಿ) ನೀತಿಗಳನ್ನು ಜಾರಿಗೆ ತರುವ ಮೂಲಕ, ದೊಡ್ಡ ಬಂಡವಾಳಶಾಹಿಗಳಿಗೆ ಪ್ರಕೃತಿ ಸಂಪತ್ತನ್ನು ಎಗ್ಗಿಲ್ಲದೆ ಲೂಟಿ ಮಾಡಲು ಅವಕಾಶ ಮಾಡಿಕೊಟ್ಟ ಕೇಂದ್ರ ಸರ್ಕಾರದ ಮುಖ್ಯಸ್ಥರು ಉದ್ಯಮಪತಿಗಳ ಈ ಅಬ್ಬರಕ್ಕೆ ನಲುಗಿಹೋದರು. ವಾಣಿಜ್ಯ ಸಚಿವ ಆನಂದ್ ಶರ್ಮಾ ಅವರೂ ಸಹ ಕುಮಾರ ಮಂಗಳಂ ಮೇಲಿನ ಎಪ್ಐಆರ್ ಅನ್ನು ಟೀಕಿಸುವ ಮೂಲಕ ಆರೋಪಿ ಸ್ಥಾನದಲ್ಲಿರುವವರನ್ನು ರಕ್ಷಿಸಲು ಮುಂದಾದರು. ವೀರಪ್ಪ ಮೊಯ್ಲಿಯವರು “ಬಂಡವಾಳ ಹೂಡುವವರ ವಿರುದ್ದ ಮೊಕದ್ದಮೆ ಹೂಡಲು, ಭಾರತ ರಷ್ಯಾ ದೇಶ ಅಲ್ಲ.” ಎಂದು ಹೇಳಿಕೆ ನೀಡುವ ಮೂಲಕ ಉದ್ಯಮಪತಿಗಳ ಭ್ರಷ್ಟಾಚಾರಕ್ಕೆ ತಮ್ಮ ಬೆಂಬಲವಿರುವುದನ್ನು ತೋರಿಸಿಕೊಟ್ಟರು. ಕೈಗಾರಿಕೋದ್ಯಮಿಗಳ ಒಕ್ಕೂಟ (ಸಿಐಐ) ತೀವ್ರ ಕಳವಳ ವ್ಯಕ್ತಪಡಿಸಿತು. ಇನ್ಪೋಸಿಸ್ ಮುಖ್ಯಸ್ಥ ನಾರಾಯಣ ಮೂರ್ತಿ “ಬಿರ್ಲಾ ಒಬ್ಬ ಗೌರವಾನ್ವಿತ ಕೈಗಾರಿಕೋದ್ಯಮಿ. ಸೂಕ್ತ ಸಾಕ್ಷ್ಯಾದಾರಗಳಿಲ್ಲದೆ ಅವರ ಮೇಲೆ ಆರೋಪ ಮಾಡಿರುವುದರಿಂದ ವಿದೇಶಿ ಹೂಡಿಕೆದಾರರ ದೃಷ್ಟಿಯಲ್ಲಿ ಹಾಗೂ ದೇಶದ ಉಧ್ಯಮಗಳ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಅಲ್ಲ” ಎಂದರು.
ಕಲ್ಲಿದ್ದಲು ಹಗರಣಕ್ಕೆ ಸಂಬಂದಿಸಿದಂತೆ ಹಿಂಡಾಲ್ಕೋ ಕಂಪನಿಯ ಮಾಲೀಕ ಕುಮಾರ ಮಂಗಳಂ ಬಿರ್ಲಾ ವಿರುದ್ದ ಸಿಬಿಐ ಎಪ್ ಐ ಆರ್ ದಾಖಲಿಸಿದ ಸುದ್ದಿ ಕೇಳಿ ಉದ್ಯಮಪತಿಗಳಲ್ಲಿ ನಡುಕ ಹುಟ್ಟಿಸಿತು. ಪ್ರಧಾನಿ ವಿರುದ್ದದ ಆರೋಪಗಳನ್ನು ತನಿಖೆ ನಡೆಸುವಂತೆ ದೊಡ್ಡ ದ್ವನಿಯಲ್ಲಿ ಒತ್ತಾಯಿಸುತ್ತಿದ್ದ ಬಿಜೆಪಿ, ಕುಮಾರ ಮಂಗಳಂ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಹೇಳಲಿಲ್ಲ. ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರವನ್ನು ಹಿಗ್ಗಾ ಮುಗ್ಗ ಟೀಕಿಸುವ ಅಂದಿನ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರು ಕುಮಾರ ಮಂಗಳಂ ಹಗರಣದ ಬಗ್ಗೆ ಮಾತನಾಡಲಿಲ್ಲ. ಉದಾರೀಕಣ, ಖಾಸಗೀಕರಣ ಮತ್ತು ಜಾಗತೀಕರಣ (ಎಲ್ ಪಿಜಿ) ನೀತಿಗಳನ್ನು ಜಾರಿಗೆ ತರುವ ಮೂಲಕ, ದೊಡ್ಡ ಬಂಡವಾಳಶಾಹಿಗಳಿಗೆ ಪ್ರಕೃತಿ ಸಂಪತ್ತನ್ನು ಎಗ್ಗಿಲ್ಲದೆ ಲೂಟಿ ಮಾಡಲು ಅವಕಾಶ ಮಾಡಿಕೊಟ್ಟ ಕೇಂದ್ರ ಸರ್ಕಾರದ ಮುಖ್ಯಸ್ಥರು ಉದ್ಯಮಪತಿಗಳ ಈ ಅಬ್ಬರಕ್ಕೆ ನಲುಗಿಹೋದರು. ವಾಣಿಜ್ಯ ಸಚಿವ ಆನಂದ್ ಶರ್ಮಾ ಅವರೂ ಸಹ ಕುಮಾರ ಮಂಗಳಂ ಮೇಲಿನ ಎಪ್ಐಆರ್ ಅನ್ನು ಟೀಕಿಸುವ ಮೂಲಕ ಆರೋಪಿ ಸ್ಥಾನದಲ್ಲಿರುವವರನ್ನು ರಕ್ಷಿಸಲು ಮುಂದಾದರು. ವೀರಪ್ಪ ಮೊಯ್ಲಿಯವರು “ಬಂಡವಾಳ ಹೂಡುವವರ ವಿರುದ್ದ ಮೊಕದ್ದಮೆ ಹೂಡಲು, ಭಾರತ ರಷ್ಯಾ ದೇಶ ಅಲ್ಲ.” ಎಂದು ಹೇಳಿಕೆ ನೀಡುವ ಮೂಲಕ ಉದ್ಯಮಪತಿಗಳ ಭ್ರಷ್ಟಾಚಾರಕ್ಕೆ ತಮ್ಮ ಬೆಂಬಲವಿರುವುದನ್ನು ತೋರಿಸಿಕೊಟ್ಟರು. ಕೈಗಾರಿಕೋದ್ಯಮಿಗಳ ಒಕ್ಕೂಟ (ಸಿಐಐ) ತೀವ್ರ ಕಳವಳ ವ್ಯಕ್ತಪಡಿಸಿತು. ಇನ್ಪೋಸಿಸ್ ಮುಖ್ಯಸ್ಥ ನಾರಾಯಣ ಮೂರ್ತಿ “ಬಿರ್ಲಾ ಒಬ್ಬ ಗೌರವಾನ್ವಿತ ಕೈಗಾರಿಕೋದ್ಯಮಿ. ಸೂಕ್ತ ಸಾಕ್ಷ್ಯಾದಾರಗಳಿಲ್ಲದೆ ಅವರ ಮೇಲೆ ಆರೋಪ ಮಾಡಿರುವುದರಿಂದ ವಿದೇಶಿ ಹೂಡಿಕೆದಾರರ ದೃಷ್ಟಿಯಲ್ಲಿ ಹಾಗೂ ದೇಶದ ಉಧ್ಯಮಗಳ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಅಲ್ಲ” ಎಂದರು.
ಹಗರಣಗಳ ಬಹುಪಾಲು ಉದ್ಯಮಿಗಳ ಪಾಲಾಗುತ್ತದೆ
2ಜಿ ಹಗರಣ, ಕಲ್ಲಿದ್ದಲು ಹಗರಣ, ಹಲವು ಭೂಹಗರಣಗಳಲ್ಲಿ ಕೇವಲ ರಾಜಕಾರಣಿಗಳ ಮತ್ತು ಅಧಿಕಾರಿಗಳ ಪಾತ್ರ ಮಾತ್ರ ಇರುವುದಿಲ್ಲ. ಇಂತಹ ಹಗರಣಗಳಿಂದ ಬರುವ ಲಾಭದ ಬಹುಪಾಲು ಅಂಶ ಅದರಲ್ಲಿ ತೊಡಗಿಕೊಂಡಿರುವ ಉದ್ಯಮಪತಿಗಳಿಗೆ ಸೇರುತ್ತದೆ. ಹೀಗಿರುವಾಗ ಉದ್ಯಮಪತಿಗಳು ಹಗರಣಗಳಲ್ಲಿ ತಪ್ಪಿತಸ್ಥರಲ್ಲ ಎಂದು ಹೇಗೆ ಹೇಳುತ್ತಾರೆ? ಕಲ್ಲಿದ್ದಲು ಹಗರಣದಲ್ಲಿ, ಸರ್ಕಾರಕ್ಕೆ ಆಗಿರುವ ನಷ್ಟದಲ್ಲಿ ಹೆಚ್ಚೆಂದರೆ ಕೇವಲ ಶೇ. 10ರಷ್ಟು ಹಣ ಮಾತ್ರ ಅದರಲ್ಲಿ ಬಾಗಿಯಾಗಿರುವ ರಾಜಕೀಯ ನಾಯಕರು, ಅಧಿಕಾರಿಗಳು ಮತ್ತು ಮದ್ಯವರ್ತಿಗಳಿಗೆ ಲಂಚವಾಗಿ ಹೋಗಿದ್ದರೂ, ಉಳಿದ ಶೇ. 90ರಷ್ಟು ಹಣ ಉದ್ಯಮಪತಿಗಳ ಪಾಲಾಗುತ್ತಿರುವುದು ಸುಳ್ಳೇ? ಈಗಿದ್ದರೂ ನಾವು ಯಾವುದೇ ತಪ್ಪು ಮಾಡಿಲ್ಲ ಎಂದು ಈ ಉದ್ಯಮಪತಿಗಳು ಹೇಳಿ ಶಿಕ್ಷೆಯಿಂದ ನುಣುಚಿಕೊಳ್ಳುವುದೇಕೆ?“ ಕಲ್ಲಿದ್ದಲು ಹಗರಣದಲ್ಲಿ ನನ್ನ ಪಾತ್ರ ಇರುವುದಾದರೆ, ಪ್ರಧಾನ ಮಂತ್ರಿ ಮನಮೋಹನ ಸಿಂಗ್ ಸಹಾ ತಪ್ಪಿತಸ್ಥರಾಗಬೇಕಾಗುತ್ತದೆ” ಎಂದು ಅಂದಿನ ಕಲ್ಲಿದ್ದಲು ಖಾತೆ ಕಾರ್ಯದರ್ಶಿಯಾಗಿದ್ದ ಪಿ.ಸಿ. ಪಾರಖ್ ಹೇಳುವುದರಲ್ಲಿ ಅರ್ಥವಿದೆ. ನವ ಉದಾರವಾದಿ ನೀತಿಗಳ ಈ ಕಾಲದಲ್ಲಿ ಪ್ರಕೃತಿ ಸಂಪತ್ತನ್ನು ಲೂಟಿ ಮಾಡುವುದೂ ಒಂದು ವ್ಯಾಪಾರಿ ಧರ್ಮವನ್ನಾಗಿ ನೋಡಲಾಗುತ್ತಿದೆ. ಅದಕ್ಕಾಗಿ ನಿಯಮಗಳನ್ನು ರೂಪಿಸುತ್ತಾರೆ. ದೇಶದ ಪ್ರಗತಿಪರ ಸಂಘಟನೆಗಳು ಈ ಕೂಟದ ಸಂಚಿನ ವಿರುದ್ದ ವ್ಯಾಪಕ ಹೋರಾಟ ನಡೆಸಬೇಕಾಗಿದೆ. ಭ್ರಷ್ಟಾಚಾರದ ಮೂಲ ಎಲ್.ಪಿ.ಜಿ ನೀತಿಗಳು. ಇದನ್ನು ಹೊರತು ಪಡಿಸಿ ಕೇವಲ ಭ್ರಷ್ಟಾಚಾರದ ವಿರುದ್ದದ ಹೋರಾಟ ಅರ್ಥಹೀನ. ಜನಸಾಮಾನ್ಯರನ್ನು ಬಡತನಕ್ಕೆ ನೂಕುವ, ದೊಡ್ಡ ದೊಡ್ಡ ಬಂಡವಾಳಶಾಹಿಗಳಿಗೆ ಲೂಟಿ ಮಾಡಲು ಅವಕಾಶ ಮಾಡಿಕೊಟ್ಟಿರುವ, ದೇಶವನ್ನು ಆರ್ಥಿಕ ದಿವಾಳಿಯತ್ತ ಕೊಂಡೊಯ್ಯಲು ಕಾರಣವಾಗಿರುವ ಈ ನೀತಿಗಳ ವಿರುದ್ದದ ಹೋರಾಟ ಇಂದಿನ ಪ್ರಮುಖ ಹೋರಾಟವಾಗಬೇಕು.
ನಿಮ್ಮ ಟಿಪ್ಪಣಿ ಬರೆಯಿರಿ