ಟ್ಯಾಗ್: ಎಲ್.ಪಿ.ಜಿ. ನೀತಿ

  • ಯುಪಿಐ ವಹಿವಾಟುಗಳ ಮೇಲೆ ಶುಲ್ಕ: ಅಮೆರಿಕನ್ ಕಂಪನಿಗಳಿಗೆ ಲಾಭ

    ಯುಪಿಐ ಖರೀದಿ ವಹಿವಾಟುಗಳ ಮೇಲೆ ಶೇ. 0.4 ರಷ್ಟು ಎಂಡಿಆರ್ ಶುಲ್ಕ, “ಇದು ಗ್ರಾಹಕರ ಮೇಲೆ ಹೊರೆಯಲ್ಲ, ವ್ಯಾಪಾರಿಗಳ ಮೇಲೆ ಬೀಳುವ ಶುಲ್ಕ” ಎಂಬ ಸರ್ಕಾರದ ವಾದ ವಾಸ್ತವವನ್ನು ಮುಚ್ಚಿಹಾಕುವ ಪ್ರಯತ್ನವಷ್ಟೇ.

  • ಎಲ್‌ಐಸಿ ರಕ್ಷಿಸುವುದು ಸರ್ಕಾರದ ಜವಾಬ್ದಾರಿ

    ಎಲ್‌ಐಸಿ ಕಳೆದ 70 ವರ್ಷಗಳಲ್ಲಿ ತನಗೆ ವಹಿಸಿದ ಕಾರ್ಯಭಾರವನ್ನು `ಜನರ ಹಣ ಜನರ ಕಲ್ಯಾಣಕ್ಕೆ’ ಎಂಬ ಧ್ಯೇಯವಾಕ್ಯದೊಂದಿಗೆ ಯಶಸ್ವಿಯಾಗಿಯೇ ಮಾಡಿದೆ. ಆದರೂ ಎಲ್‌ಐಸಿ ಮೇಲೆ ಖಾಸಗೀಕರಣದ ದಾಳಿಯನ್ನು ಆಳುವ ಸರಕಾರಗಳು ನಿಲ್ಲಿಸಿಲ್ಲ. ಜನರ ವಿಶ್ವಾಸದಿಂದ ಎಲ್‌ಐಸಿ ಇಂದಿಗೂ ಮಾರುಕಟ್ಟೆಯ ಮುಂಚೂಣಿ ಸಂಸ್ಥೆಯಾಗಿ ಮುಂದುವರಿದಿದೆ. ಇಂತಹ ಸಂಸ್ಥೆಯ ಷೇರುಗಳನ್ನು ಮಾರಾಟ ಮಾಡುವುದು ಸರಿಯಾದ ನೀತಿಯಲ್ಲ. ಬದಲಾಗಿ ಎಲ್‌ಐಸಿಗೆ ಹೆಚ್ಚಿನ ಸ್ವಾಯತ್ತತೆ ನೀಡಿ, ಸಂಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು. ಎಲ್‌ಐಸಿ ಬಲಗೊಂಡರೆ ಕೋಟ್ಯಂತರ ಪಾಲಿಸಿದಾರರ ವಿಮಾ ಭದ್ರತೆ ಮತ್ತಷ್ಟು ಬಲಪಡುತ್ತದೆ. ದೇಶದ…

  • ಭಾರತದಲ್ಲಿ ಅಂದು ʻತೈಲ ನಿಧಿʼ ಖಾತೆ ಇತ್ತು

    ಅಮೆರಿಕ- ಇಸ್ರೇಲ್‌ ಮತ್ತು ಇರಾನ್‌ ಯುದ್ಧದ ಪರಿಣಾಮ ಈಗಾಗಲೇ ಅಡುಗೆ ಅನಿಲದ ಬೆಲೆ ಹೆಚ್ಚಳವಾಗಿದೆ. ಯುದ್ದ ಮುಂದುವರೆದರೆ ಇದು ಇನ್ನೂ ಹೆಚ್ಚಾಗಬಹುದು. ಪೆಟ್ರೋಲ್‌, ಡೀಸೆಲ್‌ ಬೆಲೆಗಳೂ ಹೆಚ್ಚಾಗುವ ಆತಂಕವಿದೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ನಿಯಂತ್ರಣ ಮಾಡಲು ಸಾಧ್ಯವಿಲ್ಲವೇಕೇ? ಈ ಪ್ರಶ್ನೆಗೆ ಸಂಬಂಧಿಸಿದ ಸೀತಾರಾಂ ಯೆಚೂರಿಯವರ ಲೇಖನದ ಆಯ್ದ ಭಾಗ ಇಲ್ಲಿದೆ. (#ಆಟೋರಿಕ್ಷಾಚಾಲಕ_ಪತ್ರಿಕೆಯ 1997ರ ಆಗಸ್ಟ್‌ ಮತ್ತು ಸೆಪ್ಟೆಂಬರ್ ತಿಂಗಳ ಸಂಚಿಕೆಯಲ್ಲಿ ಪ್ರಕಟವಾದ ಲೇಖನಗಳು ಇಲ್ಲಿವೆ ) ತೈಲ ನಿಧಿ ಕೊರತೆ ಎಂದರೇನು? ಈ ಕೊರತೆ ಉಂಟಾಗಿರುವುದು ಹೇಗೆ?…

  • ಎಚ್ ಎಂ ಟಿ ಕಾರ್ಖಾನೆ ಮುಚ್ಚಲು ಕಾರ್ಮಿಕರು ಕಾರಣರೇ?

    ಕಾರ್ಖಾನೆಗಳು ಅನುಭವಿಸುವ ನಷ್ಟಕ್ಕೆ ಅಲ್ಲಿನ ಕಾರ್ಮಿಕರನ್ನು ಹೊಣೆ ಮಾಡುವ ಕೆಲಸ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹಾಗಾದರೆ, ಕಾರ್ಮಿಕರು ಕೆಲಸಮಾಡುವ ಯಾವುದೇ ಕಂಪನಿ ಲಾಭ ಗಳಿಸುತ್ತಿಲ್ಲವೇ? ಅದು ಖಾಸಗಿ ಕಂಪನಿ ಇರಬಹುದು, ಸಾರ್ವಜನಿಕ ಕಂಪನಿ ಇರಬಹುದು. ಕಾರ್ಮಿಕರ ಶ್ರಮವಿಲ್ಲದೇ ಲಾಭ ಗಳಿಸಲು ಸಾಧ್ಯವೇ? ವಾಚ್ ತಯ್ಯಾರಿಕಾ ಖಾಸಗೀ ಕಂಪನಿಗಳಿಂದ ಲಾಭ ಗಳಿಸಲು ಸಾಧ್ಯವೆಂದಾದರೆ, ಸಾರ್ವಜನಿಕ ಕಂಪನಿಗಳಿಂದ ಅದು ಏಕೆ ಸಾಧ್ಯವಿಲ್ಲ? ಖಾಸಗೀ ಕಾರ್ಖಾನೆಗಳ ಕಾರ್ಮಿಕರೂ ಸಂಘಟಿತರಾಗಿದ್ದಾರೆ. ಅವರೂ ತಮ್ಮ ಬೇಡಿಕೆಗಳನ್ನು ಹೋರಾಟದ ಮೂಲಕವೇ ಗಳಿಸಿಕೊಳ್ಳುತ್ತಿದ್ದಾರೆ. ಆದರೂ ಆ ಕಂಪನಿಗಳು…

  • ಸ್ಮಾರ್ಟ್ ಮೀಟರ್  ಹಗರಣದ ಚರ್ಚೆಯೂ, ಮುಚ್ಚಿಟ್ಟ ಗ್ರಾಹಕರ ಸುಲಿಗೆಯ ನೀತಿಯೂ

    ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ಗುತ್ತಿಗೆ ಹಗರಣ ದೊಡ್ಡ ಸುದ್ದಿಯಾಗಿದೆ. ರಾಜಕೀಯ ಪಕ್ಷಗಳು ಈ ಹಗರಣಗದ ಬಗ್ಗೆಯಷ್ಟೇ ಮಾತನಾಡುತ್ತಿವೆ. 2025-26ರ ರಾಜ್ಯ ಬಜೆಟ್ ಅಧಿವೇಶನದಲ್ಲಿ ಬಿಜೆಪಿ ನಾಯಕರೊಬ್ಬರು ಸ್ಮಾರ್ಟ್ ಮೀಟರ್ ಕುರಿತೇ 45 ನಿಮಷಗಳ ಕಾಲ ಮಾತನಾಡಿದರೂ, ಸ್ಮಾರ್ಟ್ ಮೀಟರ್ ಅಳವಡಿಕೆಯ ಉದ್ದೇಶವೇನು? ಆ ನಂತರ, ಗ್ರಾಹಕರು ಅನುಭವಿಸುವ ನೋವೇನು? ಕೃಷಿ ಪಂಪ್ ಸೆಟ್ ಹೊಂದಿರುವ ರೈತರ ಮತ್ತು ಕೃಷಿಯ ಮೇಲಾಗುವ ಪರಿಣಾಮಗಳೇನು? ಈ ಅಂಶಗಳ ಬಗ್ಗೆ ಏನೂ ಮಾತನಾಡಲಿಲ್ಲ. ಸಮವರ್ತಿ ಪಟ್ಟಿಯಲ್ಲಿರುವ ವಿದ್ಯುತ್ ಕ್ಷೇತ್ರದ ರಾಜ್ಯಗಳ ಹಕ್ಕನ್ನು…

  • 16.6 ಕಿಮೀ ಉದ್ದದ ಸುರಂಗ ಮಾರ್ಗ ಬಳಕೆಗೆ 330 ರೂಪಾಯಿ ಟೋಲ್!!

    ಮೂಲಭೂತ ಸೌಕರ್ಯ ಅಭಿವೃದ್ಧಿ ಎಂದರೆ ಖಾಸಗಿ ಸಹಭಾಗಿತ್ವವೇ ಅಗಿರಬೇಕೆ? ಎಲ್ಲರೂ ಸುಂಕ, ಟೋಲ್, ಸೇವಾ ಶುಲ್ಕ ಹೆಸರಿನಲ್ಲಿ ಹಣ ಕೊಟ್ಟು ಮೂಲಸೌಕರ್ಯಗಳ ಪ್ರಯೋಜನಗಳನ್ನು ಪಡೆಯಬೇಕೇ? ಮೂಲಭೂತ ಸೌಕರ್ಯ ಎಂದರೆ ಹಣವುಳ್ಳವರಿಗೆ ಮಾಡುವ ಸೌಕರ್ಯಗಳೇ? ಶಿಕ್ಷಣ, ಆರೋಗ್ಯ ರಕ್ಷಣೆ ವ್ಯಾಪಾರದ ಸರಕುಗಳಂತಾಬೇಕೆ? ರಾಜಸ್ವ ಸಂಗ್ರಹ ಮತ್ತು ಹೂಡಿಕೆ ಹೆಚ್ಚಿಸಲು ಸಾರ್ವಜನಿಕ ಆಸ್ತಿಗಳ ನಗದೀಕರಣ ಮಾಡಬೇಕೆ? ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಜೆಟ್ ಗಳನ್ನು ಅವಲೋಕಿಸಿದರೆ ಇಂತಹ ಪ್ರಶ್ನೆಗಳು ಮೂಡುತ್ತವೆ.  ಕರ್ನಾಟಕ ರಾಜ್ಯ ಬಜೆಟ್ ಪ್ರಸ್ತಾಪದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಯೋಜನೆಗಳ…