ವರ್ಗ: ಇತಿಹಾಸ

  • ಕಮ್ಯೂನಿಸ್ಟರು ಹಿಂದೂ ಧರ್ಮದ ವಿರೋಧಿಗಳೇ?

    ಕಮ್ಯೂನಿಸ್ಟರು ಹಿಂದೂ ಧರ್ಮದ ವಿರೋಧಿಗಳೇ? ಎಲ್ಲಾ ಬಗೆಯ ಧಾರ್ಮಿಕ ಮೂಲಭೂತವಾದವನ್ನು ಕಮ್ಯೂನಿಸ್ಟರು ಸತತವಾಗಿ ವಿರೋಧಿಸುತ್ತಾ ಬಂದಿದ್ದಾರೆ. ಬಹುಸಂಖ್ಯಾತ ಕೋಮುವಾದದ ಜೊತೆಗೆ, ಮುಸ್ಲಿಂ ಮೂಲಭೂತವಾದ ಹಾಗೂ ಖಲಿಸ್ತಾನಿ ಪ್ರತ್ಯೇಕತಾವಾದ ಎರಡನ್ನೂ ಕಮ್ಯೂನಿಸ್ಟರು ದೃಢವಾಗಿ ವಿರೋಧಿಸಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಕಮ್ಯೂನಿಸ್ಟರು ಮತ್ತು ಆರೆಸ್ಸೆಸ್‌ ನ ಪಾತ್ರದ ಬಗ್ಗೆಯೂ ಒಮ್ಮೆ ಹಿಂತಿರುಗಿ ನೋಡಬೇಕಿದೆ. ದೇಶ ವಿಭಜನೆಗೆ ದಾರಿ ಮಾಡಿಕೊಟ್ಟ ದ್ವಿ-ರಾಷ್ಟ್ರ ಸಿದ್ಧಾಂತವು ಮೊಹಮ್ಮದ್ ಅಲಿ ಜಿನ್ನಾ ಅವರ ಸೃಷ್ಟಿ ಮಾತ್ರವಾಗಿರಲಿಲ್ಲ. ಸಾವರ್ಕರ್ ಅದನ್ನು ಮೊದಲೇ ಮಂಡಿಸಿದ್ದರು. “ಶ್ರೀ ಜಿನ್ನಾ ಅವರ ದ್ವಿ-ರಾಷ್ಟ್ರ…

  • ಗಾಂಧೀಜಿ: ಭಿನ್ನಾಭಿಪ್ರಾಯಗಳ ನಡುವೆಯೂ ಮೆರೆದ ಪ್ರಜಾಸತ್ತಾತ್ಮಕ ನಾಯಕತ್ವ

    ಗಾಂಧಿಯವರು ತಾವು ಕೆಲಸ ಮಾಡಿದ ಬಹುತೇಕ ಎಲ್ಲ ಪ್ರಮುಖ ನಾಯಕರೊಂದಿಗೂ ಯಾವುದೋ ಒಂದು ಹಂತದಲ್ಲಿ ಗಂಭೀರ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರು. ತೀವ್ರವಾದ ಭಿನ್ನಾಭಿಪ್ರಾಯಗಳಿದ್ದರೂ, ಅವುಗಳನ್ನು ವೈಯಕ್ತಿಕ ವೈರತ್ವವಾಗಿ ಬದಲಾಯಿಸಿಕೊಳ್ಳದೆ, ದೇಶದ ಭವಿಷ್ಯಕ್ಕಾಗಿ ನಡೆಯುವ ಚರ್ಚೆಗಳಾಗಿ ಗಾಂಧೀಜಿ ಮುಂದುವರಿಸಿದರು. ತಮ್ಮನ್ನು ಒಪ್ಪದ ಪ್ರತಿಯೊಬ್ಬರನ್ನೂ ದೇಶದ್ರೋಹಿಗಳಾಗಿ ಚಿತ್ರಿಸುವ ಇಂದಿನ ಆಳುವವರಿಗೆ ಇದು ಇಷ್ಟವಾಗುವುದಿಲ್ಲ. ಗಾಂಧೀಜಿಯವರ ಜಾತ್ಯತೀತ ಕಲ್ಪನೆಯು ಅತ್ಯಂತ ಆಳವಾದುದು. ‘ಮತಧರ್ಮವು ರಾಷ್ಟ್ರೀಯತೆಯ ಪರೀಕ್ಷೆಯಲ್ಲ, ಒಬ್ಬ ವ್ಯಕ್ತಿ ಯಾವುದೇ ಮತಧರ್ಮವನ್ನು ಅನುಸರಿಸಲಿ, ಅವನು ಮೊದಲು ಭಾರತೀಯ, ಅಂತಿಮವಾಗಿ ಕೂಡಾ ಭಾರತೀಯʼ ಎಂದು…

  • ಹೈದರಾಬಾದ್ ವಿಮೋಚನೆ: ನೈಜ ಇತಿಹಾಸವನ್ನು ಅಳಿಸಲಾಗದು

    ಸಾವಿರಾರು ಜನರ ತ್ಯಾಗದಿಂದ ನಿರ್ಮಾಣಗೊಂಡ ತೆಲಂಗಾಣ ರೈತರ ಸಶಸ್ತ್ರ ಹೋರಾಟವು ಸೃಷ್ಟಿಸಿದ ಐತಿಹಾಸಿಕ ಪರಿಸ್ಥಿತಿಯಲ್ಲಿಯೇ ಹೈದರಾಬಾದ್ ಸಂಸ್ಥಾನವು ಭಾರತ ಒಕ್ಕೂಟದೊಂದಿಗೆ ವಿಲೀನಗೊಂಡಿತು.