ಟ್ಯಾಗ್: ಎಂ.ಎನ್.ರಾಯ್
-
ಗಾಂಧೀಜಿ: ಭಿನ್ನಾಭಿಪ್ರಾಯಗಳ ನಡುವೆಯೂ ಮೆರೆದ ಪ್ರಜಾಸತ್ತಾತ್ಮಕ ನಾಯಕತ್ವ
ಗಾಂಧಿಯವರು ತಾವು ಕೆಲಸ ಮಾಡಿದ ಬಹುತೇಕ ಎಲ್ಲ ಪ್ರಮುಖ ನಾಯಕರೊಂದಿಗೂ ಯಾವುದೋ ಒಂದು ಹಂತದಲ್ಲಿ ಗಂಭೀರ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರು. ತೀವ್ರವಾದ ಭಿನ್ನಾಭಿಪ್ರಾಯಗಳಿದ್ದರೂ, ಅವುಗಳನ್ನು ವೈಯಕ್ತಿಕ ವೈರತ್ವವಾಗಿ ಬದಲಾಯಿಸಿಕೊಳ್ಳದೆ, ದೇಶದ ಭವಿಷ್ಯಕ್ಕಾಗಿ ನಡೆಯುವ ಚರ್ಚೆಗಳಾಗಿ ಗಾಂಧೀಜಿ ಮುಂದುವರಿಸಿದರು. ತಮ್ಮನ್ನು ಒಪ್ಪದ ಪ್ರತಿಯೊಬ್ಬರನ್ನೂ ದೇಶದ್ರೋಹಿಗಳಾಗಿ ಚಿತ್ರಿಸುವ ಇಂದಿನ ಆಳುವವರಿಗೆ ಇದು ಇಷ್ಟವಾಗುವುದಿಲ್ಲ. ಗಾಂಧೀಜಿಯವರ ಜಾತ್ಯತೀತ ಕಲ್ಪನೆಯು ಅತ್ಯಂತ ಆಳವಾದುದು. ‘ಮತಧರ್ಮವು ರಾಷ್ಟ್ರೀಯತೆಯ ಪರೀಕ್ಷೆಯಲ್ಲ, ಒಬ್ಬ ವ್ಯಕ್ತಿ ಯಾವುದೇ ಮತಧರ್ಮವನ್ನು ಅನುಸರಿಸಲಿ, ಅವನು ಮೊದಲು ಭಾರತೀಯ, ಅಂತಿಮವಾಗಿ ಕೂಡಾ ಭಾರತೀಯʼ ಎಂದು…