ಟ್ಯಾಗ್: ಪುಲ್ವಾಮಾ ದಾಳಿ
-
ಅಂದು ಪುಲ್ವಾಮ- ಹಲವು ಪ್ರಶ್ನೆಗಳಿಗೆ ಉತ್ತರ ಸಿಗಲಿಲ್ಲ; ಇಂದು ಪಹಲ್ಗಾಮ್- ಉತ್ತರ ಸಿಗುತ್ತದೆಯೇ?
ಕಾಶ್ಮೀರದಲ್ಲಿ ಮತ್ತೆ ಉಗ್ರರ ದಾಳಿ ನಡೆದಿದೆ. 2025ರ ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್ ಪಟ್ಟಣದ ಸನಿಹದಲ್ಲಿರುವ ಹುಲ್ಲುಗಾವಲಿನಲ್ಲಿ ನಡೆದ ಉಗ್ರರ ಗುಂಡಿನ ದಾಳಿಗೆ 28 ಪ್ರವಾಸಿಗರು ಬಲಿಯಾಗಿದ್ದಾರೆ. ಈ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಬಲಿಯಾದವರಲ್ಲಿ ಇಬ್ಬರು ಕನ್ನಡಿಗರು, ಇಬ್ಬರು ವಿದೇಶಿಗರು ಎಂದು ವರದಿಯಾಗಿದೆ. ಈ ರೀತಿಯ ದಾಳಿಗಳು ನಡೆದಾಗ ಜನರಿಂದ, ರಾಜಕೀಯ ಪಕ್ಷಗಳ ನಾಯಕರಿಂದ ಮುಸ್ಲಿಂ ಉಗ್ರವಾದಿಗಳು ಮತ್ತು ಪಾಕಿಸ್ತಾನದ ವಿರುದ್ದ ಆಕ್ರೋಶಗಳು ವ್ಯಕ್ತವಾಗುತ್ತವೆ. ಹಿಂದುತ್ವವಾದಿಗಳಿಂದ ಇದನ್ನು ಮುಸ್ಲಿಮರ ವಿರುದ್ದ ತಿರುಗಿಸುವ ಪ್ರಯತ್ನವೂ ನಡೆಯುತ್ತದೆ.…